ವಿಶ್ವ ವಿಖ್ಯಾತ ನಂದಿಗಿರಿಧಾಮ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರಿಂದಾಗಿ ಪ್ರತಿ ವಾರಾಂತ್ಯ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಶನಿವಾರಕ್ಕಿಂತ ಭಾನುವಾರ ಹೆಚ್ಚು ಪ್ರವಾಸಿಗರು ಬರುತ್ತಾರೆ. 

ಚಿಕ್ಕಬಳ್ಳಾಪುರ (ಜೂ.13): ವಿಶ್ವ ವಿಖ್ಯಾತ ನಂದಿಗಿರಿಧಾಮ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರಿಂದಾಗಿ ಪ್ರತಿ ವಾರಾಂತ್ಯ ಗಂಟೆಗಟ್ಟಲೇ ಟ್ರಾಫಿಕ್‌ಜಾಮ್‌ ಉಂಟಾಗುತ್ತಿದೆ. ಕೋವಿಡ್‌ ಪರಿಣಾಮ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶದ ಮೇಲೆ ಹೇರಿದ್ದ ನಿಷೇಧ ಸಡಿಲಿಕೆಗೊಂಡ ಬಳಿಕ, ಅದರಲ್ಲೂ ಅನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭಗೊಂಡ ನಂತರದ ದಿನಗಳಲ್ಲಿ ಬೆಟ್ಟದಲ್ಲಿ ಈ ರೀತಿ ಹೆಚ್ಚು ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಶನಿವಾರಕ್ಕಿಂತ ಭಾನುವಾರ ಹೆಚ್ಚು ಪ್ರವಾಸಿಗರು ಬರುತ್ತಾರೆ. 

ಪರಿಣಾಮ ಈ ಭಾನುವಾರ ಬೆಟ್ಟದ ಕೆಳಗಿಂದ ತುದಿಯವರೆಗೂ ಟ್ರಾಫಿಕ್‌ ಉಂಟಾಗಿ ಗಂಟೆಗಟ್ಟಲೇ ಪ್ರವಾಸಿಗರು ಪರದಾಡಿದರು. ಬೆಟ್ಟಕ್ಕೆ ಬೆಳಗಿನ ಜಾವ ಬೇಗ ತೆರಳಬೇಕೆಂಬ ಧಾವಂತದಲ್ಲಿ ಪ್ರವಾಸಿಗರು ಒಂದೇ ಬಾರಿಗೆ ಕಾರು, ದ್ವಿಚಕ್ರ ವಾಹನಗಳಲ್ಲಿ ಬೆಟ್ಟಕ್ಕೆ ಲಗ್ಗೆ ಹಾಕುವುದರಿಂದ ಹೆಚ್ಚು ಟ್ರಾಫಿಕ್‌ಗೆ ಕಾರಣವಾಗಿದೆ. ಗಿರಿಧಾಮಕ್ಕೆ ರೋಪ್‌ ವೇ ಮೂಲಕ ಕೇಬಲ್‌ ಕಾರ್‌ ಬರುವವರೆಗೂ, ಕೆಳಗಡೆಗೆಯೆ ಪ್ರವಾಸಿಗರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವವರೆಗೂ ಇದೇ ಸ್ಥಿತಿ ಎನ್ನುತ್ತಾರೆ ಅಧಿಕಾರಿಗಳು.

Chikkaballapura Nandi Hill: ‌ಪ್ರವಾಸಿಗರಿಗೆ ವಿಕೇಂಡ್‌ನಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ಮುಕ್ತ!

ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ ಮಾಡಲು ಪಣ: ಕರ್ನಾಟಕದ ಊಟಿ, ಐತಿಹಾಸಿಕ ಪ್ರವಾಸಿ ತಾಣ ನಂದಿಬೆಟ್ಟದ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು, ನಂದಿಬೆಟ್ಟದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಹೇಳಿದ್ದಾರೆ. ನಂದಿಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ ಆರ್ ಲತಾ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಸ್ನೇಹಿ ನಂದಿಬೆಟ್ಟವನ್ನಾಗಿ ಮಾಡಲು ಸರ್ಕಾರ ನಂದಿಬೆಟ್ಟದಲ್ಲಿ ಹಲವು ಯೋಜನೆಗಳನ್ನು ತರಲು ಮುಂದಾಗಿದೆ ಎಂದರು. 

ಇನ್ನೂ ನಂದಿಬೆಟ್ಟಕ್ಕೆ ರೂಪ್‌ವೇ ತರಲು ಈಗಾಗಲೇ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು. ಉಳಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗಾಗಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದ್ದು, ಹಂತ ಹಂತವಾಗಿ ನಂದಿಬೆಟ್ಟವನ್ನು ಅಭಿವೃದ್ದಿಪಡಿಸುವುದಾಗಿ ಹೇಳಿದರು. ಅಲ್ಲದೇ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಅರಿವು ಮೂಡಿಸುತ್ತಿದ್ದು, ಮೇ 1 ರಂದು ನಂದಿಬೆಟ್ಟದ ಮೆಲೆ ಸ್ವಚ್ಚತಾ ಅಭಿಯಾನ ನಡೆಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಹೇಳಿದದರು.

Anjanadri Hill: ನಂದಿಬೆಟ್ಟ ರೀತಿ ಅಂಜನಾದ್ರಿಯಲ್ಲಿ ರೋಪ್‌ ವೇ ನಿರ್ಮಾಣ: ಸಿಎಂ ಬೊಮ್ಮಾಯಿ

ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟಕ್ಕೆ ಕರೆ: ತನ್ನ ಅನನ್ಯ ಸೌಂದರ್ಯದಿಂದಲೇ ಎಲ್ಲರನ್ನು ಆಕರ್ಷಿಸುವ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಸಾವಿರಾರು ಪ್ರಯಾಣಿಕರು ಬರ್ತಾರೆ. ಇಂತಹ ನಂದಿಬೆಟ್ಟದಲ್ಲಿ ವಿಕೇಂಡ್ ಬಂದರೆ ಸಾಕು ಸಾವಿರಾರು ಪ್ರವಾಸಿಗರು ಬರ್ತಾರೆ. ಹೀಗಾಗಿ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಪ್ಲಾಸ್ಟಿಕ್ ಮುಕ್ತವಾಗಿಸಲು ಈಗಾಗಲೇ ಅರಿವು ಮೂಡಿಸಲಾಗಿದೆ. ಬರುವ ಪ್ರವಾಸಿಗರಿಗೂ ಕೂಡ ಪ್ಲಾಸ್ಟಿಕ್ ಬಳಸದಂತೆ ಹೇಳಲಾಗುತ್ತಿದೆ. ಪ್ರವಾಸಿಗರಿಗೆ ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ಇದೇ ಮೇ 1 ರಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.