ಬೆಂಗಳೂರು(ಜ.09): ರಾಜ್ಯದಲ್ಲಿ ಶುಕ್ರವಾರ ಮತ್ತೆ 50 ಮಂದಿ ಶಾಲಾ ಶಿಕ್ಷಕರು ಹಾಗೂ 20 ಮಂದಿ ಇತರೆ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಶಾಲೆಗಳು ಆರಂಭಗೊಂಡ ಬಳಿಕ ಇದುವರೆಗೆ ಸೋಂಕು ದೃಢಪಟ್ಟಶಿಕ್ಷಕರು ಹಾಗೂ ಸಿಬ್ಬಂದಿ ಸಂಖ್ಯೆ 236ಕ್ಕೆ ಏರಿಕೆಯಾಗಿದೆ.

ಗುರುವಾರದವರೆಗೆ 161 ಶಿಕ್ಷಕರು ಹಾಗೂ ಐವರು ಸಿಬ್ಬಂದಿ ಸೇರಿ ಒಟ್ಟು 166 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿತ್ತು. ಶುಕ್ರವಾರ ಒಟ್ಟು ಸೋಂಕಿತ ಶಿಕ್ಷಕರ ಸಂಖ್ಯೆ 211ಕ್ಕೆ ಹಾಗೂ ಸಿಬ್ಬಂದಿ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಅವರೆಕಾಯಿ ಮೇಳಕ್ಕೆ ಚಾಲನೆ: ಇನ್ನೆಷ್ಟು ದಿನ ಇದೆ..? ಟೈಮಿಂಗ್ಸ್ ಹೀಗಿದೆ

ಸೋಂಕಿತರ ಪೈಕಿ ಅತಿ ಹೆಚ್ಚು ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ದೃಢಪಟ್ಟಿದೆ. ಅಲ್ಲಿನ ಶಾಲೆಗಳಲ್ಲಿನ 25 ಮಂದಿಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಮಂದಿಗೆ ಸೋಂಕು ಖಚಿತವಾಗಿದೆ.

ಉಳಿದಂತೆ ಬೆಂಗಳೂರು ನಗರ, ಯಾದಗಿರಿ, ಗದಗ, ಚಿಕ್ಕಮಗಳೂರು, ತುಮಕೂರು, ಹಾಸನ, ಮಂಡ್ಯ, ಚಾಮರಾಜ ನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 10ರಿಂದ 15 ಶಿಕ್ಷಕರು ಹಾಗೂ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದೆ.