ಇಂದು ವಿಶ್ವ ಮೊಟ್ಟೆ ದಿನ: ರಾಜಕೀಯಕ್ಕೆ ಬರುವ ಮೊದಲು ಕೋಳಿ ಮಾರುತ್ತಿದ್ದೆ: ಡಿಕೆಶಿ
ಮೊಟ್ಟೆ ವ್ಯಾಪಾರ ಬಹಳ ಕಷ್ಟ. ಮೊಟ್ಟೆ, ಕೋಳಿ ಬಗ್ಗೆ ಒಂದು ಸಣ್ಣ ಸುದ್ದಿ ಹರಿದಾಟ ಆದ್ರೆ ಸಾಕು. ಎಲ್ಲಾ ವ್ಯಾಪಾರ ಬಿದ್ದು ಹೋಗುತ್ತೆ. ರೇಷ್ಮೆ ಉಳುವಿನ ರೀತಿ ಮೊಟ್ಟೆ ಜೋಪಾನ ಮಾಡಬೇಕು. ಸರ್ಕಾರ ನಿಮ್ಗೆ ಯಾವ ರೀತಿ ರಕ್ಷಣೆ ಬೇಕು ಬಂದು ಮೀಟ್ ಮಾಡಿ. ನಮ್ಮ ಸರ್ಕಾರ ನಿಮ್ಮ ಜೊತೆ ಇದೆ ಇರುತ್ತೆ ಎಂದು ಅಭಯ ನೀಡಿದರು.

ಬೆಂಗಳೂರು (ಅ.13): 'ರಾಗಿ ಮುದ್ದೇ ತಿನ್ನುವವನು ಬೆಟ್ಟ ಕೀಳುತ್ತಾನೆ. ಜೋಳ ತಿನ್ನುವವನು ತೋಳನಂತೆ ಇರುತ್ತಾನೆ, ಮೊಟ್ಟೆ ತಿನ್ನುವವನು ಜಟ್ಟಿಯಂತೆ ಆಗುತ್ತಾನೆ'ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.
ಇಂದು ವಿಶ್ವ ಮೊಟ್ಟೆ ದಿನಾಚರಣೆಯ ಹಿನ್ನಲೆ ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕುಕ್ಕುಟ ಮಹಾಮಂಡಳಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊಟ್ಟೆ ತಿನ್ನುವವರು, ಮೊಟ್ಟೆ ತಯಾರು ಮಾಡುವವರು, ಕೋಳಿ ಮಾರುವವರು, ಕೋಳಿ ತಿನ್ನುವವರು ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದೀರಿ. ಮುದ್ದೆ ತಿನ್ನುವವರು ಬೆಟ್ಟ ಕೀಳ್ತಾರೆ. ಜೋಳ ತಿನ್ನುವವರು ತೋಳದಂತೆ ಇರ್ತಾರೆ ಅದೇ ರೀತಿ ಮೊಟ್ಟೆ ರೀತಿ ತಿನ್ನುವವರು ಜಟ್ಟಿಯಂತೆ ಇರ್ತಾರೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಬೆಂಗಳೂರಿಗೆ ಗುಡ್ ನ್ಯೂಸ್: ಆಸ್ತಿ ತೆರಿಗೆ ಹೆಚ್ಚಳ ಮಾಡೊಲ್ಲವೆಂದು ಭರವಸೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ನಾನು ಇದೆ ಕ್ಯಾಂಪಸ್ ನಲ್ಲಿ 15 ದಿನ ಪೌಲ್ಟ್ರಿ ತರಬೇತಿ ಪಡೆದಿದ್ದೆ. ನಾನಾಗ ಸುಂಕದಕಟ್ಟೆಯಲ್ಲಿ ಇದ್ದೆ. ನಮ್ಮದು ಜಮೀನು ಇತ್ತು. ಕೋಳಿ ಫಾರಂ ನಡೆಸಿದೆ. ಲಾಸ್ ಆಯ್ತು ಅದು ಬಿಟ್ಟು ಬಿಟ್ಟೆ. ನನ್ನ ಜೀವನದ ಮೊದಲನೇ ವ್ಯಾಪಾರ ಕೋಳಿ ಮಾರಾಟ ಮಾಡಿದ್ದು. ನಾವು ಈಗ ಮಾಂಸ, ಮೊಟ್ಟೆ ತಿನ್ನುವುದನ್ನ ಬಿಟ್ಟು ಬಿಟ್ಟಿದ್ದೇನೆ. ಆದ್ರೆ ಉತ್ತಮ ಆರೋಗ್ಯಕ್ಕೆ ಮೊಟ್ಟೆ ಅವಶ್ಯಕ ಎಂದರು.