ಟಿಪ್ಪು ಜಯಂತಿ ಆಚರಣೆ ಸಂಬಂಧ ವಿಡಿಯೋ ಒಂದನ್ನು ಪ್ರದಶರ್ನ ಮಾಡಿದ ಜಮೀರ್ ಅಹಮದ್ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು : ಟಿಪ್ಪು ಜಯಂತಿ ಆಚರಣೆ ವಿಚಾರಣೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಹೈಡ್ರಾಮ ಮಾಡಿದ್ದು, ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊಬೈಲ್ ವಿಡಿಯೋ ಒಂದನ್ನು ಪ್ರದರ್ಶಿಸಿದ ಜಮೀರ್ ಅಹಮದ್, ಬಿಜೆಪಿ ಬಿಟ್ಟಾಗ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಅಬ್ಬಾಬ್ಬಾ ಏನದು ಟಿಪ್ಪು ಕತ್ತಿ ,ಟೊಪ್ಪಿ ವೇಷ ,ಮುಸ್ಲಿಂ ಬಂಧು ಎಂದು ಯಡಿಯೂರಪ್ಪ ಹಾಡಿ ಹೊಗಳಿದ್ದರು. ಅಲ್ಲದೇ ಟಿಪ್ಪು ಜಯಂತಿ ಆಚರಣೆ ವೇಳೆ ಯಡಿಯೂರಪ್ಪ ಮಾಡಿದ ಡ್ರಾಮಾ ನೋಡಿ ಎಂದು ಜಮೀರ್ ಅಹಮದ್ ವಿಡಿಯೋವನ್ನು ಪ್ರದರ್ಶನ ಮಾಡಿದ್ದಾರೆ. 

ಇನ್ನು ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿಗೆ ಗೈರಾಗುವ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಂತೆ ಟಿಪ್ಪು ಜಯಂತಿ ಆಚರಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಭಯದಲ್ಲಿ ಅವರು ಬರುತ್ತಿಲ್ಲ ಎನ್ನಲಾಗುತ್ತಿದೆ.

ಆದರೆ ಅದೆಲ್ಲಾ ಸುಳ್ಳು. ಬಿಜೆಪಿ 2013 ರಲ್ಲಿ ಟಿಪ್ಪು ಜಯಂತಿ ಆಚರಿಸಿಲ್ಲ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಸಿದ್ದರಾಮಯ್ಯ 3 ವರ್ಷ ಮಾಡಿದ್ದರು, ಅದಕ್ಕೆ ಅವರು ಪದೇ ಪದೇ‌ ಗೆಲುವು ಸಾಧಿಸಿದರು ಎಂದು ಜಮೀರ್ ಅಹಮದ್ ಹೇಳಿದ್ದಾರೆ.