ಬೆಂಗಳೂರು(ಜು.28): 7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಕೋವಿಡ್‌ನಿಂದಾಗಿ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ.

ಈಗಾಗಲೇ ಶಿಕ್ಷಣ ಇಲಾಖೆ ಶೇ.30 ರಷ್ಟು ಪಠ್ಯವನ್ನ ಕಡಿತ ಮಾಡಲು ಮುಂದಾಗಿದೆ. 7 ನೇ ತರಗತಿ ಪುಸ್ತಕದಿಂದ ಟಿಪ್ಪು ಕುರಿತ ಪಠ್ಯವನ್ನು ಕೈಬಿಡಲಾಗಿದೆ. 6 ಹಾಗೂ 10 ನೇ ತರಗತಿಯಲ್ಲಿ ಟಿಪ್ಪು ಪಠ್ಯವನ್ನ ಮುಂದುವರಿಸಲಾಗಿದೆ.

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸದ್ಯ ಕೊಕ್‌ ಇಲ್ಲ!

ಈ ಹಿಂದೆ ಟಿಪ್ಪು ಪಠ್ಯವನ್ನ ಕೈಬಿಡುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಈ ಹಿಂದೆ ಸರ್ಕಾರ ಟಿಪ್ಪು ಪಠ್ಯ ಕೈಬಿಡುವ ವಿಚಾರದ ಪರಿಶೀಲನೆಗೆ ಸಮಿತಿ ರಚನೆ ಮಾಡಿತ್ತು. ಸಮಿತಿ ಟಿಪ್ಪು ಪಠ್ಯವನ್ನ ಉಳಿಸಿಕೊಳ್ಳುವುದು ಸೂಕ್ತ ಎಂದು ಸರ್ಕಾರಕ್ಕೆ ವರದಿ ನೀಡಿತ್ತು.

ಅಂತೂ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಟಿಪ್ಪು ಪಠ್ಯ ಕೊನೆಗೂ ಪಠ್ಯ ಪುಸ್ತಕದಿಂದ ರದ್ದಾಗಿದೆ. ಲಾಕ್‌ಡೌನ್‌ನಿಂದಾಗಿ ಈ ಬಾರಿ ಶೇ 30 ರಷ್ಟು ಪಠ್ಯ ರದ್ದುಗೊಳಿಸಲು ಸರ್ಕಾರ ಚಿಂತಿಸಿದೆ.