ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ಇದೀಗ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಕೊರಳಲ್ಲೂ ಹುಲಿ ಉಂಗುರ ಧರಿಸಿರುವ ಫೋಟೊಗಳು ಇದೀಗ ಭಾರೀ ವೈರಲ್ ಆಗುತ್ತಿವೆ. 

ಬೆಳಗಾವಿ (ಅ.26) :  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ಇದೀಗ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಕೊರಳಲ್ಲೂ ಹುಲಿ ಉಂಗುರ ಧರಿಸಿರುವ ಫೋಟೊಗಳು ಇದೀಗ ಭಾರೀ ವೈರಲ್ ಆಗುತ್ತಿವೆ. 

ಕಾನೂನು ಎಲ್ಲರಿಗೂ ಒಂದೇ, ನಕಲಿ ಹುಲಿ ಉಗುರು ಸಹ ಹಾಕಬಾರದು: ಸಚಿವ ಈಶ್ವರ್ ಖಂಡ್ರೆ

ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಇನ್ಸ್‌ಟಾಗ್ರಾಂ ಪೇಜ್‌ನಲ್ಲಿ ಹಾಕಿಕೊಂಡಿರುವ ಫೋಟೊಗಳು. ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷರನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಸೆಲೆಬ್ರಿಟಿಗಳು ರಾಜಕಾರಣಿಗಳು ಸಹ ಧರಿಸಿರುವ ಫೋಟೊ ವೈರಲ್ ಆಗುತ್ತಿವೆ. ಈ ಫೋಟೊಗಳನ್ನು ಅಪ್ಲೋಡ್ ಇವರ ಬಂಧನ ಯಾವಾಗ ನ್ಯಾಯ ಎಲ್ಲರಿಗೊಂದೇ ಹ್ಯಾಷ್ ಟ್ಯಾಗ್ ಬಳಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು. 

ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರು! ಇಕ್ಕಟ್ಟಿಗೆ ಸಿಲುಕಿತಾ ಕಾಂಗ್ರೆಸ್ ಸರ್ಕಾರ?

ಇದೀಗ ಸರ್ಕಾರದ ಸಚಿವರು ಕುಟುಂಬದವರೇ ಹುಲಿ ಉಂಗುರ ಧರಿಸಿರುವ ಪ್ರಕಣಗಳು ಬೆಳಕಿಗೆ ಬಂದಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕಾನೂನು ಎಲ್ಲರಿಗೂ ಒಂದೇ ಎಂದಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ. ಇಂದು ಸುದ್ದಿಗೋಷ್ಠಿಯಲ್ಲಿ ವನ್ಯಜೀವಿ ಸಂರಕ್ಷಣೆ ಕಾಯಿದೆ ಬಿಗಿಯಾಗಿದೆ ವನ್ಯಜೀವಿಗಳ ಅಂಗಾಂಗ ವಸ್ತು ಧರಿಸುವುದು ಅಪರಾಧವಾಗಿದೆ. ನಕಲಿ ಹುಲಿ ಉಗುರಿನ ಪೆಂಡೆಂಟ್ ಕೂಡ ಧರಿಸುವುದು ಪ್ರಚೋದನೆ ನೀಡಿದಂತಾಗುತ್ತದೆ ಎಂದಿರುವುದು ಸಚಿವರು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳಕ್ರ್ ಕುಟುಂಬದಲ್ಲೇ ಅಳಿಯ, ಮಗ ಹುಲಿ ಉಗುರು ಧರಿಸಿರುವ ಫೋಟೊಗಳು ವೈರಲ್ ಆಗಿರುವುದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದಂತಾಗಿದೆ.