Asianet Suvarna News Asianet Suvarna News

ಕಾನೂನು ಎಲ್ಲರಿಗೂ ಒಂದೇ, ನಕಲಿ ಹುಲಿ ಉಗುರು ಸಹ ಹಾಕಬಾರದು: ಸಚಿವ ಈಶ್ವರ್ ಖಂಡ್ರೆ

ಕನ್ನಡ ಕಿರುತೆರೆ ರಿಯಾಲಿಟಿ ಶೋ ಒಂದರ ಸ್ಪರ್ಧಿ ಹುಲಿ ಉಗುರು ಧರಿಸಿದ ವಿಚಾರಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ. ಇದು ಈಗ ದೊಡ್ಡ ಸುದ್ದಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Tiger claw case forest minister eshwar khandre press conference at bengaluru rav
Author
First Published Oct 26, 2023, 4:00 PM IST | Last Updated Oct 26, 2023, 4:10 PM IST

ಬೆಂಗಳೂರು (ಅ.26): ಕನ್ನಡ ಕಿರುತೆರೆ ರಿಯಾಲಿಟಿ ಶೋ ಒಂದರ ಸ್ಪರ್ಧಿ ಹುಲಿ ಉಗುರು ಧರಿಸಿದ ವಿಚಾರಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ. ಇದು ಈಗ ದೊಡ್ಡ ಸುದ್ದಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಏಷಿಯಾನೆಟ್ ಸುವರ್ಣ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು,  ನಮ್ಮ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯಜೀವಿಗಳ ಅಂಗಾಂಗಗಳ ಬಳಕೆ ಅಪರಾಧವಾಗಿದೆ. ಅರಣ್ಯ ಸಂರಕ್ಷಣೆ ಕಾಯಿದೆ ವನ್ಯಜೀವಿ ಸಂರಕ್ಷಣೆಗಾಗಿ ಇದೆ. ವನ್ಯಜೀವಿಗೆ ಸಂಬಂಧಿಸಿದ ವಸ್ತು, ಉತ್ಪನ್ನ ಬಳಕೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ದೂರುಗಳು ಆಧಾರಿಸಿ ನಮ್ಮ ಅಧಿಕಾರಿಗಳು ರೇಡ್ ಮಾಡಿದ್ದಾರೆ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರು! ಇಕ್ಕಟ್ಟಿಗೆ ಸಿಲುಕಿತಾ ಕಾಂಗ್ರೆಸ್ ಸರ್ಕಾರ?

ನಕಲಿ ಹುಲಿ ಉಗುರು ಸಹ ಹಾಕಬಾರದು:

ದರ್ಶನ್ ಇರಬಹುದು ಬೇರೆ ಯಾರೇ ಇರಬಹುದು. ದೂರುಗಳ ಬಂದಾಗ ಅದರ ಬಗ್ಗೆ ನ್ಯಾಯ ಸಮ್ಮತವಾಗಿ ತನಿಖೆ ನಡೆಯುತ್ತದೆ. ಒಂದೇ ಮಾನದಂಡದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ಕಾನೂನು ಎಲ್ಲರಿಗೂ ಒಂದೇ. ಆದಷ್ಟು ಬೇಗ ಎಫ್ಎಸ್ಎಲ್ ವರದಿ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ನಕಲಿನೂ ಹಾಕಿಕೊಳ್ಳಬಾರದು, ಅದನ್ನು ಹಾಕಿಕೊಂಡ್ರೆ ಬೇರೆಯವರಿಗೆ ಪ್ರಚೋದನೆ ಮಾಡಿದಂತೆ ಆಗುತ್ತೆ. ಅವಾಗ ಪ್ರಾಣಿಗಳ ಹತ್ಯೆಯ ಪ್ರಯತ್ನ ಗಳು ಆಗ್ತವೆ. ನಕಲಿ ಸಹಿತ ಈ ರೀತಿಯ ಪೆಂಡೆಂಟ್ ಹಾಕಿಕೊಳ್ಳಬಾರದೆಂದು ಮನವಿ ಮಾಡ್ತೀನಿ. ನಕಲಿಯಿಂದಲೂ ಪ್ರೇರಣೆ ಆಗುತ್ತದೆ. ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆ ಯಲ್ಲಿ ಇಲ್ಲ. ಆದರೆ ನಕಲಿ ಪೆಂಡೆಂಟ್ ಗಳನ್ನು ಯಾರೂ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ ಎಂದರು.

ಕಾನೂನು ಎಲ್ಲರಿಗೂ ಒಂದೇ

ಕಾನೂನು ಎಲ್ಲರಿಗೂ ಒಂದೇ. ಜಗ್ಗೇಶ್ ಕೂಡ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಆದರೆ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವಿಚಾರಣೆಗೆ ಸಹಕಾರ ನೀಡದ್ದಕ್ಕೆ ಬಂಧಿಸಲಾಗಿದೆ. ನಮ್ಮ ಅಧಿಕಾರಿಗಳು ವಿಚಾರಣೆಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಬಂಧಿಸಲಾಗಿದೆ ಎಂದು ವರ್ತೂರು ಸಂತೋಷ್ ಬಂಧನ ಸಮರ್ಥಿಸಿಕೊಂಡರು.

ವನ್ಯಜೀವಿ ಕಾಯಿದೆ ಬಗ್ಗೆ ಜನರಿಗೆ ಮಾಹಿತಿ ಇಲ್ಲ:

ವನ್ಯಜೀವಿ ಸಂರಕ್ಷಣಾ ಕಾಯಿದೆ ಬಗ್ಗೆ ಜನರಿಗೂ ಮಾಹಿತಿ ಇಲ್ಲ. ಹೀಗಾಗಿ ಅಪರಾಧವೆಸಗಿದ್ದಾರೆ. ಇಂಥ ಗೊಂದಲ ಆಗಬಾರದು ಅನ್ನೋ ಕಾರಣಕ್ಕೆ ಒಂದು ತಂಡ  ರಚನೆ ಮಾಡಿದ್ದೇವೆ. ಈಗಾಗ್ತಿರುವ ಬೆಳವಣಿಗೆ ಕುರಿತು ಸಿಎಂ ಭೇಟಿಯಾಗಿ ಮಾಹಿತಿ ಕೂಡ ನೀಡಿದ್ದೇನೆ. ಸದ್ಯ ಇಲಾಖೆಯಲ್ಲಿ 4000 ಸಿಬ್ಬಂದಿ ಕೊರತೆ ಇದೆ 800 ಜನ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಅಂಗಾಂಗ ಪರೀಕ್ಷೆಗೊಳಪಡಿಸುವ  FSL ನಮ್ಮ ರಾಜ್ಯದಲ್ಲಿ ಇಲ್ಲ. ಹೈದ್ರಾಬಾದ್ ನಲ್ಲಿ ಇದೆ. ಹೀಗಾಗಿ ಪರೀಕ್ಷೆಗೆ ಕಳಿಸಲಾಗಿದೆ. ರಿಪೋರ್ಟ್ ಬರೋದು ತಡವಾಗುತ್ತದೆ. ನಮಲ್ಲೇ ಲ್ಯಾಬ್ ಮಾಡುವ ಬಗ್ಗೆ  ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಇಲ್ಲೇ FSL ಕಾರ್ಯ ನಿರ್ವಹಿಸುವಂತೆ ಮಾಡ್ತೇವೆ ಬೆಂಗಳೂರಿನಲ್ಲೇ ಲ್ಯಾಬ್ ಮಾಡುತ್ತೇವೆ.

ಇತ್ತೀಚೆಗೆ ಆಗಿರುವ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಿಂದಿನ ಪ್ರಕರಣಗಳ ಬಗ್ಗೆ ಬೇಕಿದ್ರೆ ಮಾಹಿತಿ ತರಿಸಿ ಹೇಳುತ್ತೇನೆ. ಯಾರೂ ಶಂಕೆ ಪಡುವ ಅವಶ್ಯಕತೆ ಇಲ್ಲ. ಯಾರಿಗೂ ತಾರತಮ್ಯ ಮಾಡಲ್ಲ. ಪ್ರಕರಣಗಳ ಕುರಿತು ಪಾರದರ್ಶಕವಾಗಿ ತನಿಖೆ ನಡೀತಿದೆ. ವನ್ಯಜೀವಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ವಹಿಸುತ್ತೇ‌ವೆ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ಕೇಳಿಬಂದಿದೆ. ಅದರ ಬಗ್ಗೆ ಪರಮಾರ್ಶೆ ಮಾಡುತ್ತೇವೆ ಎಂದರು.

ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ, ಒರಿಜಿನಲ್ ಅಲ್ಲ ಅಂತಾ ಡೌಟಿದೆ ಎಂದ ತಾಯಿ

ಚಿಕ್ಕಮಗಳೂರಿನ ಡಿಆರ್ ಎಫ್ ದರ್ಶನ್ ಯಾರೇ ಇದ್ರು ಸರಿ ಅದರ ಬಗ್ಗೆ ಸೂಕ್ತ ತನಿಖೆ ಮಾಡಲು ಆದೇಶ ಮಾಡ್ತೀನಿ. ಒಂದು ವೇಳೆ ವನ್ಯಜೀವಿ ಉತ್ಪನ್ನ ಗಳು ಅವನು ಬಳಸ್ತಿದ್ರೆ ಅವನ ವಿರುದ್ಧವೂ ಕ್ರಮ ಆಗುತ್ತದೆ. ನಮ್ಮ ಅಧಿಕಾರಿಗಳು ಐದಾರು ಕಡೆ ದಾಳಿ ಮಾಡಿದ್ದಾರೆ. ಗಣ್ಯಮಾನ್ಯರು, ಸೆಲೆಬ್ರಿಟಿಗಳ ಮನೆಗೂ ಹೋಗಿದ್ದಾರೆ. ಜಗ್ಗೇಶ್ 20, 30 ಹಿಂದೆ ನಮ್ಮ ತಾಯಿ ಹುಲಿ ಉಗುರು ಕೊಟ್ಟಿದ್ದರು ಎಂದಿದ್ದಾರೆ. ಈಗ ಅದನ್ನು ಎಫ್ಎಸ್ ಎಲ್ ಗೆ ಕಳುಹಿಸಿದ್ದೇವೆ. ವನ್ಯಜೀವಿಗಳ ಅಂಗಾಂಗಗಳು ಇದ್ದವರು ಮಾಲೀಕತ್ವ ಪಡೆಯಲು 2003 ರ ತನಕ ಅವಕಾಶ ಇತ್ತು. ಆದರೆ ಕಾಯ್ದೆಯ ಪ್ರಕಾರ ಮಾಲೀಕತ್ವ ಕೊಡಲು ಅವಕಾಶ ಇಲ್ಲ. ಆದರೆ ವನ್ಯಜೀವಿಗಳ ಅಂಗಾಂಗ ಇದ್ದರೆ ಅಂತವುಗಳನ್ನ ವಾಪಸ್ ನೀಡಲು ಅವಕಾಶ ಮಾಡಿಕೊಡುವ ಚಿಂತನೆ ಇದೆ. ಈಗ ರಚನೆ ಮಾಡಿದ ತಂಡ ವರದಿ ಕೊಟ್ಟ ಮೇಲೆ ಪರಾಮರ್ಶೆ ಮಾಡುತ್ತೇವೆ ಎಂದರು.

Latest Videos
Follow Us:
Download App:
  • android
  • ios