ನನ್ನ ಕೈನಲ್ಲೂ ಆನೆ ಬಾಲದ ಕೂದಲು ಇದೆ; ಆದರೆ ಇದು ಒರಿಜಿನಲ್ ಅಲ್ಲ; ಟಿಎ ಶರವಣ
ಕಳೆದೊಂದು ವಾರದಿಂದ ರಾಜ್ಯದಲ್ಲಿ ಹುಲಿ ಉಗುರಿನ ವಿವಾದ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.ಸೆಲೆಬ್ರಿಟಿಗಳು ಪ್ರಭಾವಿಗಳು ಹುಲಿ ಉಗುರು ಧರಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ನಮಗೆ ಕಿರುಕುಳು ಕೊಡ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಜ್ಯೂವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿಎ ಶರವಣ ಹೇಳಿದರು.

ಬೆಂಗಳೂರು (ಅ.28): ಕಳೆದೊಂದು ವಾರದಿಂದ ರಾಜ್ಯದಲ್ಲಿ ಹುಲಿ ಉಗುರಿನ ವಿವಾದ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.ಸೆಲೆಬ್ರಿಟಿಗಳು ಪ್ರಭಾವಿಗಳು ಹುಲಿ ಉಗುರು ಧರಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ನಮಗೆ ಕಿರುಕುಳು ಕೊಡ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಜ್ಯೂವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿಎ ಶರವಣ ಹೇಳಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ಉಗುರು ಬಳಕೆ ಮಾಡುವವರಿಗೆ ನನ್ನ ವಿರೋಧವಿದೆ. ಆದರೆ ಒಂದು ನೋಟೀಸ್ ನೀಡದೇ ಅದು ಅಸಲಿಯೋ, ನಕಲಿಯೋ ಎಂಬುದನ್ನು ತಿಳಿದುಕೊಳ್ಳದೇ FSL report ಬರುವುದಕ್ಕೆ ಮೊದಲೇ ಕ್ರಮ ತೆಗೆದುಕೊಳ್ಳುವುದು ಎಷ್ಟು ಸರಿ? ಹುಲಿ ಉಗುರಿನ ಪೆಂಡೆಂಟ್ ಧರಿಸಿದರೆಂದು ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಅರ್ಚಕರ ಮನೆ ತಪಾಸಣೆ ಆಯ್ತು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾಯ್ತು. ಇದೀಗ ಜ್ಯೂವೆಲ್ಲರಿ ಅಂಗಡಿಗಳನ್ನೂ ತಪಾಸಣೆ ಮಾಡಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ ಶಾಸಕರಿಗೂ ಪರಚಿದ ಹುಲಿ ಉಗುರು; ಶಾಸಕ ಭರತ್ ರೆಡ್ಡಿ ಕೊರಳಲ್ಲಿರೋ ಪೆಂಡೆಂಟ್ ಫೋಟೋ ವೈರಲ್
ಹುಲಿ ಬಳಿ ಹೋಗಿ ಉಗುರು ತರಲು ಯಾರಿಗಾದ್ರೂ ಸಾಧ್ಯವಿದೆಯಾ? ಹಸು ಕೊಂಬು ಹಾಗೂ ಪ್ಲಾಸ್ಟಿಕ್ ನಿಂದ ತಯಾರಿಸಿದ ಹುಲಿ ಉಗುರು ರೀತಿಯ ಪೆಂಡೆಂಟ್ ಧರಿಸುತ್ತಾರೆ. ಅಂಥವರಿಗೂ ಸಹ ಭಯ ಹುಟ್ಟಿಸುವ ಕೆಲಸ ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ನಕಲಿ ಪೆಂಡೆಂಟ್ ಧರಿಸಿದವರಿಗೂ ಬೆದರಿಕೆಯೊಡ್ಡುವ ಇಂಥ ಕೆಲಸ ಕೂಡಲೇ ನಿಲ್ಲಿಸಬೇಕು. ನನ್ನ ಕೈಯಲ್ಲೂ ಆನೆ ಬಾಲದ ಕೂದಲು ಇದೆ ನೋಡಿ ಎಂದು ಮಾಧ್ಯಮಗಳಿಗೆ ತೋರಿಸಿದ ಶರವಣ.
ನನ್ನ ಕೈಯನಲ್ಲಿರೋ ಆನೆ ಬಾಲದ ಕೂದಲಿನದು ಒರಿಜಿನಲ್ ಅಲ್ಲ. ಇದು ಪ್ಲಾಸ್ಟಿಕ್ ನಿಂದ ತಯಾರಿಸಿರೋದು. ಇದೇ ರೀತಿಯಾಗಿ ಸಾಕಷ್ಟು ಜನ ದೃಷ್ಟಿಯಾಗಬಾರದು ಅಂತ ಧರಿಸುತ್ತಾರೆ. ಅಷ್ಟಕ್ಕೇ ದೇವಸ್ಥಾನದ ಅರ್ಚಕರ ಮನೆ ಮೇಲೆ ದಾಳಿಮಾಡುತ್ತಿದ್ದಾರೆ. ಅರಣ್ಯಾಧಿಕಾರಿಗಳಿಗೆ ಇಷ್ಟೊಂದು ಆತುರ ಯಾಕೆ? ಯಾರನ್ನು ಮೆಚ್ಚಿಸಲು ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಉಗುರಿನ ಕಂಟಕ!
ಯಾರರು ತಮ್ಮ ಬಳಿ ಪ್ರಾಣಿಗಳ ಅಂಗಾಂಗ ಇಟ್ಟುಕೊಂಡಿದ್ದಾರೆ. ಅವರಿಗೆ ವಾಪಸ್ಸು ತಂದುಕೊಡಲು ಅವಕಾಶ ಮಾಡಿಕೊಡಬೇಕು. ಎರಡು ಮೂರು ತಿಂಗಳೊಳಗಾಗಿ ವಾಪಸ್ಸು ತಂದುಕೊಡಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.
ಕಾನೂನಲ್ಲಿ ಬಡವರಾಗಲಿ, ಶ್ರೀಮಂತರಾಗಲಿ ಎಲ್ಲರೂ ಒಂದೇ. ಎಲ್ಲರೂ ಕಾನೂನನ್ನು ಪಾಲಿಸಬೇಕು. ಇತ್ತೀಚೆಗೆ ಅರ್ಚಕರು, ರಾಜಕಾರಣಿಗಳು ಸೆಲೆಬ್ರಿಟಿಗಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ್ರೆ ಸಾಕು. ಅವರ ವಿರುದ್ದ ದಾಳಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯೆಪ್ರವೇಶ ಮಾಡಬೇಕು. ಯಾರಿಗೂ ಕಾನೂನನ್ನು ಬಹಿಷ್ಕಾರ ಮಾಡುವ ಮನಸ್ಥಿತಿ ಇಲ್ಲ. ಇಷ್ಟು ವರ್ಷ ಕಾನೂನು ಇದ್ರು ಯಾಕೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿಲ್ಲ? ಚಿನ್ನಭರಣ ತಯಾರಕರಿಗೆ ಹುಲಿ ಉಗುರು ಹೆಸರಿನಲ್ಲಿ ಟಾರ್ಚಾರ್ ಕೊಡುತ್ತಿದ್ದಾರೆ. ವ್ಯಾಪಾರಿಗಳಿಗೂ ಅನಗತ್ಯವಾಗಿ ಮಾಹಿತಿ ಪಡೆಯುವ ಹೆಸರಿನಲ್ಲಿ ಟಾರ್ಚಾರ್ ಕೊಡ್ತಿದ್ದಾರೆ. ಇದು ರಾಜ್ಯದ ಚಿನ್ನದ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.