Asianet Suvarna News Asianet Suvarna News

ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಅರಣ್ಯಾಧಿಕಾರಿಗಳು: ನನ್ನ ಮಗ ಹಾಕಿದ್ದು ಒರಿಜಿನಲ್ ಅಲ್ಲ, ಪ್ಲಾಸ್ಟಿಕ್ ಉಗುರು ಎಂದ ಹೆಬ್ಬಾಳ್ಕರ

ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್‌ ಆಗಿರುವ ಹಿನ್ನೆಲೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tiger claw case Forest officials visited the residence of Minister Lakshmi Hebbalkar rav
Author
First Published Oct 27, 2023, 12:10 PM IST

ಬೆಳಗಾವಿ (ಅ.27): ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್‌ ಆಗಿರುವ ಹಿನ್ನೆಲೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ ನಿವಾಸ. ಡಿಎಫ್ಓ ಶಂಕರ ಕಳ್ಳೋಲ್ಕರ, ಎಸಿಎಫ್‌ಗಳಾದ ಸುರೇಶ ತೇಲಿ, ಶಿವರುದ್ರಪ್ಪ ಕಬಾಡಗಿ, ಸಂತೋಷ ಚಹ್ವಾಣ್, ಆರ್‌ಎಫ್‌ಓಗಳಾದ ನೀಹಾ ತೋರಗಲ್ಲ, ಪುರುಷೋತ್ತಮ ರಾವ್ ಡಿಆರ್‌ಎಫ್ಓ ಪ್ರಭು ತಂಗಡಿ, ಡಿ.ಆರ್. ಹಣಜಿ, ವಿನಯ ಗೌಡರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಹೆಬ್ಬಾಳ್ಕರ್ ಪುತ್ರ ನಿವಾಸದಲ್ಲಿರುವುದರಿಂದ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಬರುವ ದಾರಿ ಕಾಯುತ್ತ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲೇ ಕುಳಿತಿರುವ ಅರಣ್ಯಾಧಿಕಾರಿಗಳು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್; ಅರೆಸ್ಟ್ ಆಗ್ತಾರಾ ಮಗ, ಅಳಿಯ?

ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,  ಮದುವೆ ಸಮಯದಲ್ಲಿ ಯಾರೋ ಗಿಫ್ಟ್ ಕೊಟ್ಟಿದ್ದರು, ಅದನ್ನು ಕೊರಳಲ್ಲಿ ‌ಹಾಕಿಕೊಂಡಿದ್ದ. ಮೃಣಾಲ್ ಹಾಕಿದ ಪೆಂಡೆಂಟ್ ಓರಿಜಿನಲ್ ಅಲ್ಲ, ಪ್ಲಾಸ್ಟಿಕ್ ನದ್ದು ಎಂದ ಸಚಿವೆ. 

ನಾನು ಸಸ್ಯಾಹಾರಿ ಹುಲಿ, ಜಿಂಕೆ ಕೋಳಿ ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ. ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರ್ತಿನಿ. ಅಧಿಕಾರಿಗಳ ಪರಿಶೀಲನೆಗೆ ಸಹಕಾರ ನೀಡುತ್ತೇನೆ.  ನಂತರ ಅಧಿಕಾರಿಗಳು ಕೇಳುವ ಎಲ್ಲದಕ್ಕೂ ಉತ್ತರ ಕೊಡ್ತಿವಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.

ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರು! ಇಕ್ಕಟ್ಟಿಗೆ ಸಿಲುಕಿತಾ ಕಾಂಗ್ರೆಸ್ ಸರ್ಕಾರ?

ಕಳೆದ ವರ್ಷ ಮಗನ ಮದುವೆಯಲ್ಲಿನ ಫೋಟೊಗಳು ಲಕ್ಷ್ಮೀ ಹೆಬ್ಬಾಳ್ಕರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳು ಶೇರ್ ಮಾಡಿಕೊಂಡಿದ್ದರು.ಹುಲಿ ಉಗುರು ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗುತ್ತಿದ್ದಂತೆ ಹಲವು ಸೆಲೆಬ್ರಿಟಿಗಳು ಸ್ವಾಮೀಜಿಗಳು ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಿನ್ನೆಯಷ್ಟೇ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ, ಮಗ ಮೃಣಾಲ್ ಕೊರಳಲ್ಲಿ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್ ಆಗಿ ಕಾನೂನು ಎಲ್ಲರಿಗೂ ಒಂದೇ ಇವರ ಬಂಧನ ಯಾವಾಗ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಈ ಹಿನ್ನೆಲೆ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ದೌಡಾಯಿಸಿರುವ ಅರಣ್ಯಾಧಿಕಾರಿಗಳು.
 

Follow Us:
Download App:
  • android
  • ios