Asianet Suvarna News Asianet Suvarna News

ಹುಲಿ ಉಗುರು ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ಶಾಖಾದ್ರಿ ಮನೆಗೆ ನೋಟಿಸ್ ಅಂಟಿಸಿದ ಸಿಬ್ಬಂದಿ

ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ ಅಂತ ಶ್ರೀರಾಮಸೇನೆ ಪ್ರಶ್ನೆ ಮಾಡಿರುವು ಹಿನ್ನೆಲೆ ಇದೀಗ  ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿರುವ  ಅರಣ್ಯ ಇಲಾಖೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. 

Tiger claw case  forest officers pasted a notice on Shakhadri's house at chikkamagaluru rav
Author
First Published Oct 29, 2023, 7:58 PM IST

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.29) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹುಲಿ ಉಗುರು, ಚರ್ಮ ಸಾಕಷ್ಟು ಸದ್ದು ಮಾಡಿತ್ತು. ವ್ಯಾಘ್ರನ ಉಗುರು ಧರಿಸಿದ್ದ ಅರ್ಚಕರು, ಡಿ.ಆರ್.ಎಫ್.ಓ ಅಂದರ್ ಆದ್ರು. ಆದ್ರೆ, ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ ಅಂತ ಶ್ರೀರಾಮಸೇನೆ ಪ್ರಶ್ನೆ ಮಾಡಿದೆ. ಇದರ ನಡುವೆ  ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿರುವ  ಅರಣ್ಯ ಇಲಾಖೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. 

ಶಾಖಾದ್ರಿ ವಿರುದ್ದ ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲು : 

ಹುಲಿ ಉಗುರು ಪ್ರಕರಣ(Tiger claw case)ದಲ್ಲಿ ವರ್ತೂರ್ ಸಂತೋಷ್(Varthu santosh tiger claw ccase) ಬಂಧನವಾಗುತ್ತಿದ್ದಂತೆ, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿತ್ತು. ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಂತೆ ಹುಲಿ ಉಗುರು ಹೊಂದಿದ್ದ ಅರೋಪದಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಿದ್ದರು. ಸದ್ಯ ನಿನ್ನೆ ಇಬ್ಬರು ಅರ್ಚಕರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಹುಲಿ ಉಗುರಿನ ಡಾಲರ್ ಧರಿಸಿದ ಪ್ರಕರಣ; ಕಾಫಿನಾಡಿನ ಇಬ್ಬರು ಅರ್ಚಕರು ಜೈಲು ಪಾಲು!

ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿ ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಶಾಖಾದ್ರಿಯನ್ನು ಬಂಧನ ಮಾಡದೇ ಇರುವುದಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರು ಶಾಖಾದ್ರಿ ಬಂಧನ ಯಾಕಿಲ್ಲ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆಗೆ ಪ್ರಶ್ನಿಸಿದ್ದಾರೆ. ಶಾಖಾದ್ರಿಯನ್ನ ಬಂಧಿಸಿ ಪುರಾತನ ಕಾಲದಿಂದಲೂ ಇದ್ದ ಹುಲಿ ಚರ್ಮದ ಬಗ್ಗೆ ಮಾಹಿತಿ ಜೊತೆಗೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ಶಾಖಾದ್ರಿ ಮನೆಗೆ ಅರಣ್ಯ ಇಲಾಖೆಯಿಂದ ನೋಟಿಸ್ : 

ಇನ್ನು ವಿವಾದಿತ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿ ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಒಳಿ ಇರುವ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮನೆಯಲ್ಲಿ ಪತ್ತೆಯಾದ ಚಿರತೆ, ಜಿಂಕೆ ಚರ್ಮದ ಮಾಹಿತಿ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ. 

ಕಾನೂನು ಎಲ್ಲರಿಗೂ ಒಂದೇ, ನಕಲಿ ಹುಲಿ ಉಗುರು ಸಹ ಹಾಕಬಾರದು: ಸಚಿವ ಈಶ್ವರ್ ಖಂಡ್ರೆ

ಸದ್ಯ ಮನೆಗೆ ಬೀಗ ಹಾಕಿ  ಶಾಖಾದ್ರಿ ಗೌಸ್ ಮೊಹಿದ್ದೀನ್ ಬೆಂಗಳೂರಿಗೆ ತೆರಳಿದ್ದು ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಮೋಹನ್ ಅವರಿಂದ ನೋಟಿಸ್ ಜಾರಿ ಮಾಡಿದ್ದಾರೆ. ಒಟ್ಟಾರೆ, ಹುಲಿ ಉಗುರಿನ ಉರುಳು ಅರ್ಚಕರು, ಕಾಫಿ ಪ್ಲಾಂಟರ್‍ಗಳು, ಡಿ.ಆರ್.ಎಫ್.ಓ.ಗೆ ಬಿದ್ದಿತ್ತು. ಎಲ್ಲರಿಗೂ ಒಂದೊಂದು ರೀತಿಯ ಶಿಕ್ಷೆಯಾಗಿದೆ. ಆದ್ರೆ, ಚಿಂಕೆ-ಹುಲಿ ಚರ್ಮ ಸಿಕ್ಕರೂ ಮುಸ್ಲಿಂ ಧರ್ಮಗುರುವಿಗೆ ಏಕೆ ಶಿಕ್ಷೆ ಇಲ್ಲ ಎನ್ನುವ ಪ್ರಶ್ನೆ ಹಿಂದೂಪರ ಸಂಘಟನೆಯದ್ದು. ಅರಣ್ಯ ಇಲಾಖೆ ಒಬ್ಬರಿಗೊಂದು-ಮತ್ತೊಬ್ಬರಿಗೊಂದು ಮಾಡ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ.ಇತ್ತ ಡಿ.ಆರ್.ಎಫ್.ಓ.ಗೆ ಹೈಯರ್ ಆಫಿಸರ್ಸ್ ಡ್ರಿಲ್ ಮಾಡಿಸ್ತಿದ್ದಾರೆ. ಆದ್ರೆ, ಶಾಖಾದ್ರಿಗೆ  ನೋಟಿಸ್ ಜಾರಿ ಮಾಡಿ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ,ಜಿಲ್ಲೆಯಲ್ಲಿ ಆರ್ಚಕರ, ಪ್ಲಾಂಟರ್ ಗಳ ಪ್ರಕರಣದಲ್ಲಿ ತೋರಿಸಿದ ಅರಣ್ಯ ಇಲಾಖೆ ಕಾನೂನೂ ಶಾಖಾದ್ರಿ ಪ್ರಕರಣದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು..

Follow Us:
Download App:
  • android
  • ios