Asianet Suvarna News Asianet Suvarna News

ಎಂಎಲ್ಎ ಮನೆಗೆ ಹೀಗೆ ಏಕಾಏಕಿ ಒಳಗ ಬರ್ತೀರಾ? ಮೊದಲು ಸರ್ ಜೊತಿ ಮಾತಾಡಿರೇನು? ಅರಣ್ಯಾಧಿಕಾರಿಗಳಿಗೆ ಲಕ್ಷಣ್ ಸವದಿ ಪತ್ನಿ ಪ್ರಶ್ನೆ

ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ  ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತೃತಿಯ ಪುತ್ರನಿಗೂ ಹುಲಿ ಉಗುರಿನ ಕಂಟಕ ಎದುರಾಗಿದೆ.

Tiger Claw Case Athani MLA Laxman savadis wife sushila savadi shocked at belagavi rav
Author
First Published Oct 27, 2023, 5:15 PM IST

ಚಿಕ್ಕೋಡಿ (ಅ.27): ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಅಳಿಯ ರಜತ್ ಉಳ್ಳಾಗಡ್ಡಿ ನಿವಾಸಕ್ಕೆ ತೆರಳಿ ಇಂದು ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತೃತಿಯ ಪುತ್ರನ ಕೊರಳಲ್ಲೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೂ ತೆರಳಿ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ.

ಮನೆಯೊಳಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆಗೆ ಆಗಮಿಸುತ್ತಿದ್ದಂತೆ ಶಾಕ್ ಆದ ಲಕ್ಷ್ಮಣ್ ಸವದಿ ಪತ್ನಿ ಸುಶೀಲಾ. ಮನೆಯೊಳಗೆ ಪ್ರವೇಶಿಸಿದ ಸಿಬ್ಬಂದಿಯನ್ನ ಪ್ರಶ್ನಿಸಿದ ಸವದಿ ಪತ್ನಿ. ರಾಜ್ಯದ ಎಂಎಲ್ಎ ಮನೆಗೆ ಹೀಗೆ ಏಕಾಏಕಿ ಒಳಗೆ ಬರ್ತೀರಾ? ಬರೋದಕ್ಕೆ ಸಾಧ್ಯನಾ? ಆಗಿರೋದಿಲ್ಲ.. ಅದಕ್ಕೆ ನಾನು ಹೇಳ್ತಿದಿನಿ ಮೊದಲು ಸರ್ ಜೊತಿ ಮಾತಾಡಿದ್ರೇನು ನೀವು ಮನೆಗೆ ಬರ್ತಿವಿ ಅಂತಾ? ಎಂದು ಪ್ರಶ್ನಿಸಿದ ಸವದಿ ಪತ್ನಿ ಸುಶೀಲಾ. ಈ ವೇಳೆ ತಾಯಿಗೆ ಕನ್ವಿಯನ್ಸ್ ಮಾಡಿದ ಪುತ್ರ ಚಿದಾನಂದ ಸವದಿ.  ಬಳಿಕ ಚಿದಾನಂದ ಸವದಿ ಬಳಿ ಎರಡು ಹುಲಿ ಉಗುರು ಮಾದರಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ.

ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ ಪುತ್ರನ ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಉಗುರಿನ ಕಂಟಕ!

ಶಾಸಕ ಸವದಿ ಪುತ್ರ ಸುಮಿತ್ ‌ಸವದಿ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೊ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿರುವ ನೆಟ್ಟಿಗರು. 'ಎಲ್ಲರಿಗೂ ಒಂದೇ ಕಾನೂನು' ಎನ್ನುವ ಸರ್ಕಾರ  ಬಿಗ್ ಸ್ಪರ್ಧಿ ಸಂತೋಷ್ ಹಾಗೂ ಚಿಕ್ಕಮಗಳೂರಿನ ಮಾರ್ಕಂಡೇಯ ದೇವಸ್ಥಾನದ ಅರ್ಚಕ, ಚಿಕ್ಕಮಗಳೂರಿನ ಅರಣ್ಯ ಇಲಾಖೆ ಅಧಿಕಾರಿಯನ್ನ ಬಂಧಿಸಿದಂತೆ ರಾಜಕಾರಣಿಗಳ ಮಕ್ಕಳನ್ನು ಏಕೆ ಬಂಧಿಸುತ್ತಿಲ್ಲ ಜನಸಾಮಾನ್ಯರಿಗೊಂದು ರಾಜಕಾರಣಿಗಳ ಮಕ್ಕಳಿಗೊಂದು ಕಾನೂನಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಾಕ್ ಮೇಲೆ ಶಾಕ್, ಅಳಿಯನ ಮನೆ ಬಾಗಿಲು ಬಡಿದ ಅರಣ್ಯಾಧಿಕಾರಿಗಳು!

Follow Us:
Download App:
  • android
  • ios