ಮಂಗಳೂರು ಗೋಲಿಬಾರ್‌ ಪ್ರತೀಕಾರಕ್ಕೆ ಕಾರ್ಖಾನಾ ಗ್ಯಾಂಗ್‌!

ಮಂಗ್ಳೂರು ಗೋಲಿಬಾರ್‌ ಪ್ರತೀಕಾರಕ್ಕೆ ಕಾರ್ಖಾನೆ ಗ್ಯಾಂಗ್‌!| ಮಾಯಾ ಗ್ಯಾಂಗ್‌ ಬೆನ್ನಲ್ಲೇ ಮತ್ತೊಂದು ಗ್ಯಾಂಗ್‌ ಪತ್ತೆ| ಮೂವರ ಬಂಧನ, ಪೊಲೀಸ್‌ ಮೇಲೆ ದಾಳಿ ಇವರ ಗುರಿ

Three more held for attacking cop in Mangaluru Belonged to Karkhana gang pod

ಮಂಗಳೂರು(ಜ.30): ಮಂಗ​ಳೂರು ಗೋಲಿ​ಬಾರ್‌ ಪ್ರಕರ​ಣಕ್ಕೆ ಪ್ರತೀ​ಕಾ​ರ​ವಾಗಿ ಪೊಲೀ​ಸ್‌ ಕಾನ್ಸ್‌​ಟೇ​ಬ​ಲ್‌​ವೊ​ಬ್ಬರ ಮೇಲಿನ ಇರಿ​ತ ಪ್ರಕ​ರ​ಣದ ತನಿ​ಖೆ ನಡೆ​ಸು​ತ್ತಿ​ರುವ ಪೊಲೀ​ಸ​ರಿಗೆ ಇದರ ಹಿಂದೆ ಬಹು​ದೊಡ್ಡ ವ್ಯವ​ಸ್ಥಿತ ಜಾಲವೇ ಇರು​ವುದು ಬೆಳ​ಕಿಗೆ ಬಂದಿ​ದೆ. ಪ್ರಕ​ರ​ಣಕ್ಕೆ ಸಂಬಂಧಿ​ಸಿ ಈಗಾ​ಗಲೇ ‘ಮಾಯಾ ಗ್ಯಾಂಗ್‌’ ಹೆಸ​ರಿ​ನ ತಂಡ​ವೊಂದರ ಹೆಡೆ​ಮುರಿ ಕಟ್ಟಿ​ರುವ ಪೊಲೀ​ಸ​ರಿಗೆ ಈ ಕೃತ್ಯ​ದಲ್ಲಿ ‘ಕಾರ್ಖಾನಾ ಗ್ಯಾಂಗ್‌’ ಹೆಸರಿನ ಮತ್ತೊಂದು ತಂಡದ ಪಾತ್ರವೂ ಸ್ಪಷ್ಟ​ವಾ​ಗಿದೆ. ಈ ಸಂಬಂಧ ಕಾರ್ಖಾನೆ ಗ್ಯಾಂಗ್‌ನ ಮೂವರನ್ನು ಬಂಧಿ​ಸಿ​ರು​ವ ಪೊಲೀ​ಸರು ವಿಚಾ​ರಣೆ ಮುಂದು​ವ​ರಿ​ಸಿ​ದ್ದಾ​ರೆ.

"

ಅಕ್ಬರ್‌ (30), ಮಹಮ್ಮದ್‌ ಶಾಕೀರ್‌(19) ಮತ್ತು ಮಹಮ್ಮದ್‌ ಹನೀಫ್‌ ಆಲಿಯಾಸ್‌ ಕಾಚಿರ್‌ ಹನೀಫ್‌ ಎಂಬು​ವರನ್ನು ಗುರು​ವಾರ ರಾತ್ರಿ ಬಂಧಿ​ಸಲಾ​ಗಿದ್ದು, ಇವ​ರೆ​ಲ್ಲರೂ ಸ್ಥಳೀ​ಯ ನಿವಾಸಿಗಳು. ಇವರಲ್ಲಿ ಆರೋಪಿ ಅಕ್ಬರ್‌(30) ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡ ಎನ್ನ​ಲಾ​ಗಿ​ದೆ. ಮಂಗ​ಳೂ​ರಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿ​ರುವ ಈ ಪಕ್ಷ ಅನೇಕ ಹಿಂದೂ ವಿರೋಧಿ ಕೃತ್ಯ​ಗ​ಳ​ಲ್ಲಿ ತೊಡ​ಗಿ​ಸಿ​ಕೊಂಡಿದೆ ಎಂಬ ಆರೋಪ ಹಿಂದೂ​ಪರ ಸಂಘ​ಟ​ನೆ​ಗ​ಳಿಂದ ಆಗಾಗ್ಗೆ ಕೇಳಿ​ಬ​ರು​ತ್ತಲೇ ಇದೆ.

ಪ್ರತೀ​ಕಾ​ರ​ದ ಸಂಚು: ಕಳೆದ ವರ್ಷ ಡಿ.16ರಂದು ಮಂಗ​ಳೂ​ರಲ್ಲಿ ಪೊಲೀಸ್‌ ಕಾನ್ಸ್‌​ಟೇ​ಬಲ್‌ವೊಬ್ಬ​ರಿಗೆ ಚಾಕು​ವಿ​ನಿಂದ ಇರಿ​ಯ​ಲಾ​ಗಿತ್ತು. ಪ್ರಕ​ರ​ಣದಲ್ಲಿ ಬಂಧಿತರ ವಿಚಾ​ರಣೆ ವೇಳೆ ಸಿಎಎ ವಿರೋಧಿ ಪ್ರತಿ​ಭ​ಟನೆ ಸಂದ​ರ್ಭ​ದಲ್ಲಿ ನಡೆ​ದಿದ್ದ ಮಂಗಳೂರು ಗೋಲಿಬಾರ್‌ಗೆ ಪ್ರತೀಕಾರವಾಗಿ ಈ ದಾಳಿ ನಡೆ​ಸಿದ್ದ ವಿಚಾರ ಬೆಳ​ಕಿಗೆ ಬಂದಿತ್ತು. ಹೆಚ್ಚಿನ ವಿಚಾ​ರಣೆ ನಡೆ​ಸಿ​ದಾಗ ಈ ದಾಳಿ ಹಿಂದೆ ಸ್ಥಳೀ​ಯ​ವಾಗಿ ಹುಟ್ಟಿ​ಕೊಂಡಿದ್ದ ‘ಮಾಯಾ’ ಗ್ಯಾಂಗ್‌ನ ಪಾತ್ರ ಬಯ​ಲಾ​ಗಿ​ತ್ತು. ಈ ಗ್ಯಾಂಗ್‌ ಅಪ್ರಾ​ಪ್ತ​ನೊಬ್ಬ​ನಿಗೆ ಅಮ​ಲಿನ ಮಾತ್ರೆ ನೀಡಿ ಈ ಕೃತ್ಯಕ್ಕೆ ಬಳ​ಸಿ​ಕೊಂಡಿ​ರು​ವ ಆಘಾ​ತ​ಕಾರಿ ವಿಚಾ​ರವೂ ತನಿ​ಖೆ​ಯಲ್ಲಿ ಬೆಳ​ಕಿಗೆ ಬಂದಿ​ತ್ತು. ಕಾರ್ಖಾನಾ ಗ್ಯಾಂಗ್‌ ಕೂಡ ಮಾಯಾ ಗ್ಯಾಂಗ್‌ ಮಾದ​ರಿ​ಯಲ್ಲೇ ರಕ್ತ​ಪಾತ ನಡೆ​ಸಲು ಮುಂದಾ​ಗಿತ್ತು ಎಂದು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಏನಿದು ಕಾರ್ಖಾನಾ ಗ್ಯಾಂಗ್‌?: ಮಂಗಳೂರಿನ ಕುದ್ರೋಳಿ ಸಮೀಪ ಪ್ರದೇಶವೊಂದಕ್ಕೆ ‘ಕಾರ್ಖಾನಾ’ ಎಂದು ಹೆಸರು ನೀಡಿ ಅಲ್ಲಿ ಹುಟ್ಟಿಕೊಂಡಿರುವುದೇ ಕಾರ್ಖಾನಾ ಗ್ಯಾಂಗ್‌. ಈ ಗ್ಯಾಂಗ್‌ನಲ್ಲಿರುವ​ವ​ರು 25-40 ವರ್ಷ ವಯಸ್ಸಿನವರು. ಇವರು ಬೇರೆ ಬೇರೆ ಚಟುವಟಿಕೆ, ಹೋರಾಟದಲ್ಲಿ ಪಾಲ್ಗೊಂಡವ​ರು. ಇವರನ್ನು ಫಾಲೋ ಮಾಡುವವರು, ಸಲಹೆ ನೀಡುವವರು ಕೂಡ ಅನೇಕ ಮಂದಿ ಇದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿ​ದೆ ಎಂ​ದಿ​ದ್ದಾ​ರೆ ಕಮಿಷನರ್‌.

ಮಾಯಾ ಗ್ಯಾಂಗ್‌ನ ಸದ​ಸ್ಯ​ನೊ​ಬ್ಬ​ನಿಗೆ ಗೋಲಿಬಾರ್‌ನಲ್ಲಿ ಮೃತಪಟ್ಟಿ​ದ್ದ ಯುವಕ ಹಾಗೂ ಆತನ ಕುಟುಂಬದವರ ಸಂಪರ್ಕ ಇತ್ತು. ಕಾರ್ಖಾನಾ ಗ್ಯಾಂಗ್‌ಗೆ ಮಾಯಾ ಗ್ಯಾಂಗ್‌ ಜತೆ ಉತ್ತಮ ಒಡ​ನಾಟ ಇತ್ತು. ಆದರೆ ಗೋಲಿ​ಬಾ​ರ್‌​ನಲ್ಲಿ ಮೃತನ ಕುಟುಂಬ ಸದಸ್ಯರಾರ‍ಯರೂ ಈ ಗ್ಯಾಂಗ್‌ಗಳಲ್ಲಿ ಇಲ್ಲ ಎಂದು ಕಮಿಷನರ್‌ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಎಲ್ಲವೂ ಪೂರ್ವಯೋಜಿತ: ಕಾರ್ಖಾನೆ ಗ್ಯಾಂಗ್‌ ಸದ​ಸ್ಯರು ದಾಳಿ​ಗಾಗಿ ತಮ್ಮದೇ ಯೋಜನೆ ರೂಪಿ​ಸಿ​ಕೊಂಡಿ​ದ್ದ​ರು. ದಾಳಿಗೆ ಮೊದಲು ಹಾಗೂ ನಂತರ ಹೇಗಿರಬೇಕು? ಪೊಲೀ​ಸರ ಕೈಗೆ ಸಿಕ್ಕಿ​ಬಿ​ದ್ದರೆ ಹೇಗೆ ದಾರಿ ತಪ್ಪಿ​ಸ​ಬೇ​ಕು? ಬಂಧ​ನ​ಕ್ಕೊ​ಳ​ಗಾ​ದರೆ ಯಾರಾರ‍ಯರ ಹೆಸರು ಬಾಯ್ಬಿ​ಡ​ಬಾ​ರದು? ಜೈಲಲ್ಲಿ ಹೇಗಿ​ರ​ಬೇ​ಕು ಎಂಬ ಬಗ್ಗೆ ವ್ಯವಸ್ಥಿತ ತರ​ಬೇತಿ ಗ್ಯಾಂಗ್‌ನ ಸದ​ಸ್ಯ​ರಿಗೆ ನೀಡ​ಲಾ​ಗಿ​ತ್ತು. ಇದ​ಲ್ಲದೆ ಬಂಧನ ಬಳಿಕ ಆರೋ​ಪಿಯ ಜಾಮೀನು, ಮನೆಗೆ ಆರ್ಥಿಕ ನೆರವು ನೀಡುವ ಕುರಿತೂ ಈ ತಂಡ​ದ ಬಳಿ ಯೋಜನೆ ಇತ್ತು ಎನ್ನ​ಲಾ​ಗಿ​ದೆ.

ಪೊಲೀಸರು ಯಾರು ಸಿಕ್ಕಿದರೂ ಅವರ ಮೇಲೆ ದಾಳಿಗೆ ಈ ಗ್ಯಾಂಗ್‌​ನ​ವರು ಸಂಚು ರೂಪಿಸಿದ್ದ​ರು. ನಗರದಲ್ಲಿ ಸಾಮಾನ್ಯವಾಗಿ ಪೊಲೀಸರು ಒಂಟಿ​ಯಾಗಿ ಕರ್ತವ್ಯದಲ್ಲಿರುವ 3-4 ಸ್ಥಳಗಳ ಬಗ್ಗೆಯೂ ಆರೋ​ಪಿ​ಗಳ ಬಳಿ ಮಾಹಿತಿ ಇತ್ತು ಎನ್ನು​ತ್ತಾರೆ ಕಮಿ​ಷ​ನರ್‌ ಶಶಿ​ಕು​ಮಾ​ರ್‌.

ಈ ಗ್ಯಾಂಗ್‌​ಗಳ ಹಿಂದೆ ಯಾವ ಸಂಘಟನೆ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ತನಿಖೆ ನಡೆಯುತ್ತಿರುವುದರಿಂದ ಅವರು ಕೇವಲ ಆರೋಪಿಗಳಷ್ಟೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಮಾತುಗಳು ಹರಿದಾಡುವುದು ಬಿಟ್ಟರೆ ಬೇರೇನೂ ಇಲ್ಲ ಎಂದು ಕಮಿಷನರ್‌ ಸ್ಪಷ್ಟಪಡಿಸಿದರು.

ಪ್ರಕ​ರ​ಣಕ್ಕೆ ಸಂಬಂಧಿಸಿ ಅಪ್ರಾಪ್ತ ಸೇರಿ ಈಗಾ​ಗಲೇ 11 ಮಂದಿ​ಯನ್ನು ಬಂಧಿ​ಸ​ಲಾ​ಗಿ​ದೆ.

ಏನಿದು ಕಾರ್ಖಾನೆ ಗ್ಯಾಂಗ್‌?

ಮಂಗಳೂರಿನ ಕುದ್ರೋಳಿ ಸುತ್ತಮುತ್ತ ವಾಸವಾಗಿದ್ದ ಜನರ ತಂಡಕ್ಕೆ ಕಾರ್ಖಾನಾ ಗ್ಯಾಂಗ್‌ ಎಂದು ಹೆಸರಿಟ್ಟಿದ್ದರು.

25-30 ವರ್ಷ ವಯಸ್ಸಿನವರು ಈ ಗ್ಯಾಂಗ್‌ನಲ್ಲಿದ್ದರು

ಪೊಲೀಸರ ಮೇಲೆ ದಾಳಿ ಮಾಡುವ ಬಗ್ಗೆ ಇವರಿಗೆ ತರಬೇತಿ

ಬಂಧನವಾದರೆ, ಜೈಲಿಗೆ ಹೋದರೆ ಏನು ಮಾಡಬೇಕೆಂಬ ಪಾಠ

Latest Videos
Follow Us:
Download App:
  • android
  • ios