ಕರ್ನಾಟಕದಲ್ಲಿ ವನ್ಯಮೃಗಗಳ ದಾಳಿಗೆ ಮೂವರಿಗೆ ಗಂಭೀರ ಗಾಯ: ಬೆಚ್ಚಿಬಿದ್ದ ಜನತೆ
ರಾಜ್ಯದಲ್ಲಿ ವನ್ಯಮೃಗಗಳ ದಾಳಿಗೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ತೆರಳುವ ವೇಳೆ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿದೆ. ಇನ್ನು ಮತ್ತೊಂದು ಕಡೆ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು/ಚಾಮರಾಜನಗರ(ಜ.27): ರಾಜ್ಯದಲ್ಲಿ ವನ್ಯಮೃಗಗಳ ದಾಳಿಗೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ತೆರಳುವ ವೇಳೆ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿದೆ. ಇನ್ನು ಮತ್ತೊಂದು ಕಡೆ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ತೆರಳುವ ವೇಳೆ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿದೆ. ಇದರಿಂದ ಬೈಕಿನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೀಲಿಪ್, ಆಶಾ ಎಂಬುವರೇ ಕಾಡುಕೋಣದ ದಾಳಿಗೊಳಗಾದವರು. ಮೂಡಿಗೆರೆ ತಾಲೂಕಿನ ಮತ್ತಿಗಟ್ಟೆ ಬಳಿ ಘಟನೆ ನಡೆದಿದೆ.
Elephant attack: ಗುಂಡ್ಲುಪೇಟೆಯಲ್ಲಿ ರೈತನ ಮೇಲೆ ಆನೆ ದಾಳಿ: ಗಂಭೀರ ಗಾಯ
ಗಾಯಾಳುಗಳನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾತ್ರಿ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ. ಕಾಡುಕೋಣ ದಾಳಿಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
Chikkamagaluru: ಮತ್ತೆ ಮೂವರ ಮೇಲೆ ಒಂಟಿ ಕೊಂಬಿನ ಆನೆ ದಾಳಿ: ಗಂಭೀರ ಗಾಯ
ರೈತನ ಮೇಲೆ ಆನೆ ದಾಳಿ
ರೈತನ ಮೇಲೆ ಆನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ರೈತ ಮಹದೇವಪ್ಪನ ಮೇಲೆ ಆನೆ ದಾಳಿ ಮಾಡಿದೆ. ಮಹದೇವಪ್ಪನ ಎರಡೂ ಕಾಲುಗಳಿಗೆ ತೀವ್ರತರವಾದ ಗಾಯವಾಗಿದೆ ಅಂತ ತಿಳಿದು ಬಂದಿದೆ.
ಗೋಪಾಲಪುರ ಗ್ರಾಮದ ಜಮೀನಲ್ಲಿ ಘಟನೆ ನಡೆದಿದೆ. ಬೆಳಿಗ್ಗೆ ಜಮೀನಿಗೆ ಹಾಲು ಕರೆಯಲು ಹೋದಾಗ ಆನೆ ದಾಳಿ ಮಾಡಿದೆ. ಗಾಯಗೊಂಡ ರೈತ ಮಹದೇವಪ್ಪನನ್ನ ಸದ್ಯ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲು ಮಾಡಲು ವೈದ್ಯರು ಸೂಚಿಸಿದ್ದಾರೆ.