ಪಾಳು ಬಿದ್ದ ಗಂಗಜ್ಜಿ ಮನೆಯತ್ತ ಸಚಿವ ತಂಗಡಗಿ ದೃಷ್ಟಿಹರಿಸುವರೇ?

ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿ, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್‌ ಅವರು ಧಾರವಾಡದ ಮನೆ ಪಾಳು ಬಿದ್ದಿದ್ದು, ಅಭಿವೃದ್ಧಿಗಾಗಿ ಕಾಯುತ್ತಿದೆ. ಆ. 22ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಧಾರವಾಡಕ್ಕೆ ಆಗಮಿಸುತ್ತಿದ್ದು, ಅವರ ದೃಷ್ಟಿಪಾಳು ಮನೆಯ ಮೇಲೆ ಬೀಳಲಿದೆಯೇ ಎಂಬ ನಿರೀಕ್ಷೆ ಧಾರವಾಡದ ಸಂಗೀತಪ್ರಿಯರದ್ದಾಗಿದೆ.

This is the house of a famous hindustani singer gangubai Hanagal in dharawad rav

ಧಾರವಾಡ (ಆ.22) :  ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿ, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್‌ ಅವರು ಧಾರವಾಡದ ಮನೆ ಪಾಳು ಬಿದ್ದಿದ್ದು, ಅಭಿವೃದ್ಧಿಗಾಗಿ ಕಾಯುತ್ತಿದೆ. ಆ. 22ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಧಾರವಾಡಕ್ಕೆ ಆಗಮಿಸುತ್ತಿದ್ದು, ಅವರ ದೃಷ್ಟಿಪಾಳು ಮನೆಯ ಮೇಲೆ ಬೀಳಲಿದೆಯೇ ಎಂಬ ನಿರೀಕ್ಷೆ ಧಾರವಾಡದ ಸಂಗೀತಪ್ರಿಯರದ್ದಾಗಿದೆ.

ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಸಾಹಿತಿ, ಕಲಾವಿದರ ಸಭೆ ಸಚಿವ ಶಿವರಾಜ ತಂಗಡಗಿ(Shivaraj tangadagi) ನೇತೃತ್ವದಲ್ಲಿ ಧಾರವಾಡದಲ್ಲಿ ನಡೆಯಲಿದೆ. ಗಂಗಜ್ಜಿ ಹುಟ್ಟಿಬೆಳೆದ ಮನೆಯನ್ನು ವೀಕ್ಷಿಸಿ ಅದರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಲ್ಲಿಯ ಶುಕ್ರವಾರ ಪೇಟೆಯಲ್ಲಿ ಗಂಗಜ್ಜಿ ಹುಟ್ಟಿದ ಮನೆಯಿದೆ. ಗಾನ ಕೋಗಿಲೆ ಹುಟ್ಟಿಬೆಳೆದ ಮನೆಯನ್ನು ಈ ಮೊದಲು ಸರ್ಕಾರ ಸ್ಮಾರಕವನ್ನಾಗಿ ಮಾಡಿತ್ತು. ಆದರೆ, ಸ್ಮಾರಕವಾದ ಹತ್ತೇ ವರ್ಷದಲ್ಲಿ ನಿರ್ವಹಣೆ ಸಮಸ್ಯೆಯಿಂದ ಅದು ನೆಲಕಚ್ಚಿತು. ಈಗ ಭೂತ ಬಂಗಲೆಯಾಗಿ ಪರಿವರ್ತನೆಯಾಗಿದೆ. ಸ್ಮಾರಕದ ಸ್ವರೂಪ ಕಳೆದುಕೊಂಡು ಪಾಳುಬಿದ್ದಿದೆ.

ಧಾರವಾಡ: ಕಟ್ಟಡ ಕುಸಿತದ ಜಾಗದಲ್ಲಿ ಹಾವುಗಳ ಸಾಮ್ರಾಜ್ಯ..!

ಸ್ಮಾರಕವಾದ ಬಳಿಕ ಇಲ್ಲಿಯೇ ಕೆಲವು ದಿನಗಳ ವರೆಗೆ ಗಂಗೂಬಾಯಿ(gangubai hangal) ಅವರ ಶಿಷ್ಯ ಬಳಗದಿಂದ ಸಂಗೀತ ತರಗತಿ ನಡೆಸಲಾಗುತ್ತಿತ್ತು. ಪರ ಊರುಗಳಿಂದ ಆಗಮಿಸುತ್ತಿದ್ದ ಸಂಗೀತಾಸಕ್ತರು, ಗಣ್ಯರು ಭೇಟಿ ನೀಡುತ್ತಿದ್ದರು. ಆನಂತರ ಕಟ್ಟಡ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಇದೀಗ ಮೊದಲ ಬಾರಿಗೆ ಧಾರವಾಡದಲ್ಲಿ ಬೆಳಗಾವಿ ವಿಭಾಗದ ಸಾಹಿತಿ ಹಾಗೂ ಕಲಾವಿದರ ಸಭೆಯನ್ನು ಆಯೋಜಿಸಲಾಗಿದೆ. ಸಚಿವ ಶಿವರಾಜ ತಂಗಡಗಿ ಧಾರವಾಡಕ್ಕೆ ಆಗಮಿಸುತ್ತಿದ್ದು, ಈ ಕಡೆ ಗಮನ ಹರಿಸಲಿ ಅನ್ನೋದು ಸ್ಥಳೀಯರ ಆಗ್ರಹ.

ಕನ್ನಡ ಮತ್ತ ಸಂಸ್ಕೃತಿ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾದ ಗಂಗಜ್ಜಿಯ ಸ್ಮಾರಕ ಹಾಳಾಗುವ ಮುಂಚೆ ಇಲ್ಲಿದ್ದ ಪರಿಕರಗಳನ್ನು ಇಲಾಖೆ ಕಚೇರಿಯಲ್ಲಿ ಭದ್ರವಾಗಿ ಇಡಲಾಗಿದೆ. ಸಣ್ಣ ಪುಟ್ಟದುರಸ್ತಿಗಳನ್ನು ನಿರ್ಲಕ್ಷಿಸಿದ್ದರಿಂದ ಇಡೀ ಕಟ್ಟಡವನ್ನೇ ಮತ್ತೊಮ್ಮೆ ನಿರ್ಮಿಸುವ ಸ್ಥಿತಿ ಬಂದೊದಗಿದೆ. ಸುಮಾರು .15 ಲಕ್ಷ ವೆಚ್ಚ ವ್ಯಯಿಸಿ ನಿರ್ಮಿಸಿದ್ದ ಕಟ್ಟಡವನ್ನು ಕಾಪಾಡಿಕೊಳ್ಳಲಾಗಿಲ್ಲ. ಇದೀಗ ಮತ್ತೆ ಲಕ್ಷಾಂತರ ರು. ಖರ್ಚು ಮಾಡಿ ಎಲ್ಲವನ್ನು ಸರಿಪಡಿಸಬೇಕಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರ ಬರೆದಿದೆ. ಆದರೆ ಮೂರು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿ, ಒಂದು ಅಂದಾಜು ವೆಚ್ಚದ ನೀಲನಕ್ಷೆ ತಯಾರಿಸಿಲ್ಲ ಎಂಬುದೇ ಬೇಸರದ ಸಂಗತಿ.

ಧಾರವಾಡ ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಸಚಿವ ಪರಮೇಶ್ವರ್!

ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿ ಸಾಕಾಗಿದೆ. ನಮ್ಮ ನಾಡಿನ ಹೆಮ್ಮೆ ಅಂದರೆ ಅದು ಗಂಗಜ್ಜಿ. ಆ ಅಜ್ಜಿಯ ನೆನಪಿಗೋಸ್ಕರ ಅವರು ಹುಟ್ಟಿಬೆಳೆದ ಮನೆಯನ್ನು ಸ್ಮಾರಕವನ್ನಾಗಿ ಅಥವಾ ಮ್ಯೂಸಿಯಂನ್ನಾಗಿ ಮಾಡಬೇಕಿದೆ. ಆದರೆ ಸರ್ಕಾರಕ್ಕೆ ಗಂಗೂಬಾಯಿ ಅವರ ಬಗ್ಗೆ ಗೌರವವೇ ಇಲ್ಲ. ಸಚಿವ ಶಿವರಾಜ ತಂಗಡಗಿ ಸಚಿವರಾದ ಬಳಿಕ ಮೊದಲ ಬಾರಿಗೆ ವಿದ್ಯಾಕಾಶಿಗೆ ಬರುತ್ತಿದ್ದಾರೆ. ಅವರು ಒಮ್ಮೆ ಈ ಮನೆಯ ಸ್ಥಿತಿಯನ್ನು ನೋಡಬೇಕು. ಕ್ರೀಯಾಶೀಲರಾಗಿರುವ ಅವರಿಂದಾದರೂ ಗಂಗೂಬಾಯಿ ಅವರಿಗೆ ಗೌರವ ಸಿಗುವಂತಾಗಲಿ.

ಶಂಕರ ಹಲಗತ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

Latest Videos
Follow Us:
Download App:
  • android
  • ios