Asianet Suvarna News Asianet Suvarna News

ಸಿಎಂ ಪ್ರಾಸಿಕ್ಯೂಷನ್: ಯಡಿಯೂರಪ್ಪ ಬಳಿಕ ಬಳಿಕ ರಾಜ್ಯದಲ್ಲಿದು 2ನೇ ಕೇಸ್‌..!

ಯಡಿಯೂರಪ್ಪ, ಅವರ ಮಕ್ಕಳಿಗೆ ಸಂಬಂಧಿಸಿದ ರಾಚೇನಹಳ್ಳಿ ಡಿನೋಟಿಫಿ ಕೇಷನ್ ಪ್ರಕರಣ ಸಂಬಂಧ ವಕೀಲರಾದ ಸಿರಾಜಿನ್ ಬಾಷಾ ಮತ್ತಿತರ ನಿಯೋಗ ಸಲ್ಲಿಸಿದ್ದ ದೂರನ್ನು ಆಧರಿಸಿ ಪ್ರಾಸಿಕ್ಯೂಷನ್ ಗೆ ನೀಡಲಾಗಿತ್ತು. 

This is the 2nd case in karnataka after bs yediyurappa on CM Prosecution grg
Author
First Published Aug 18, 2024, 5:51 AM IST | Last Updated Aug 18, 2024, 5:51 AM IST

ಬೆಂಗಳೂರು(ಆ.18):  ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನು ಮತಿಸಿದ್ದಾರೆ. ಸಿಎಂ ಸ್ಥಾನದಲ್ಲಿರುವಾಗ ಪ್ರಾಸಿ ಕ್ಯೂಷನ್‌ಗೆ ಅನುಮತಿಸಿದ ರಾಜ್ಯದ 2ನೇ ಪ್ರಕರಣ 13 ವರ್ಷದ ಹಿಂದೆ ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ದ ಅಂದು ರಾಜ್ಯಪಾಲರಾಗಿದ್ದ ಹಂಸ ರಾಜ್ ಭಾರದ್ವಾಜ್ 2011 ಜ.29ರಂದು ಪ್ರಾಸಿ ಕ್ಯೂಷನ್‌ಗೆ ಅನುಮತಿಸಿದ್ದರು. 

ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿತ್ತು . ಯಡಿಯೂರಪ್ಪ, ಅವರ ಮಕ್ಕಳಿಗೆ ಸಂಬಂಧಿಸಿದ ರಾಚೇನಹಳ್ಳಿ ಡಿನೋಟಿಫಿ ಕೇಷನ್ ಪ್ರಕರಣ ಸಂಬಂಧ ವಕೀಲರಾದ ಸಿರಾಜಿನ್ ಬಾಷಾ ಮತ್ತಿತರ ನಿಯೋಗ ಸಲ್ಲಿಸಿದ್ದ ದೂರನ್ನು ಆಧರಿಸಿ ಪ್ರಾಸಿಕ್ಯೂಷನ್ ಗೆ ನೀಡಲಾಗಿತ್ತು. 

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇರಲ್ಲ: ಅಚ್ಚರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಸೋಮಣ್ಣ

ರಾಜ್ಯಪಾಲರು ಅನುಮತಿ ನಂತರ ಬಿಎಸ್ ವೈ ರಾಜೀನಾಮೆ ನೀಡಿರಲಿಲ್ಲ. ಪ್ರಾಸಿಕ್ಯೂಷನ್ ಅನುಮತಿ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು 2011ರ ಅ.14ರಂದು, ಅಂದರೆ 10 ತಿಂಗಳ ನಂತರ. ಆಗ ಅವರು ಸಿಎಂ ಸ್ಥಾನದಲ್ಲಿರಲಿಲ್ಲ. ಅಷ್ಟರಲ್ಲಾಗಲೇ ಅಂದಿನ ಲೋಕಾಯುಕ್ತ ನ್ಯಾಯಮುರ್ತಿ ಎನ್.ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಸಂಬಂಧ ನೀಡಿದ್ದ ವರದಿಯಿಂದಾಗಿ ಬಿಎಸ್‌ವೈ ರಾಜೀನಾಮೆ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios