Asianet Suvarna News Asianet Suvarna News

ಬೆಂಗಳೂರು ವಿಶ್ವ ನಂ.1 ಡೈನಾಮಿಕ್‌ ಸಿಟಿ ಆಗಿದ್ದು ಹೇಗೆ?

ಜಗತ್ತಿನ 131 ನಗರಗಳಲ್ಲಿ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ (ಜೆಎಲ್‌ಲ್) ನಡೆಸಿರುವ ಸಮೀಕ್ಷೆಯಲ್ಲಿ ಉದ್ಯಾನ ನಗರಿ ಬೆಂಗಳೂರು ‘ವಿಶ್ವದ ಅತ್ಯಂತ ಕ್ರಿಯಾ ಶೀಲ’ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆ ಮೂಲಕ ಕಳೆದ ವರ್ಷ ಮೊದಲನೇ ಸ್ಥಾನ ಪಡೆದಿದ್ದ ಹೈದರಾಬಾದನ್ನು ಗಾರ್ಡನ್ ಸಿಟಿ ಬೆಂಗಳೂರು ಹಿಂದಕ್ಕೆ ಹಾಕಿದೆ. ಬೆಂಗಳೂರಿಗೆ ಡೈನಾಮಿಕ್ ಸಿಟಿ ಎನ್ನುವ ಖ್ಯಾತಿ ಬಂದಿದ್ದೇಕೆ ಎಂಬ ವಿವರ ಇಲ್ಲಿದೆ.

This is how bengaluru tops list of world s most dynamic cities
Author
Bangalore, First Published Jan 17, 2019, 12:20 PM IST
 • Facebook
 • Twitter
 • Whatsapp

ಮಾನದಂಡ ಏನು?

ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ವಿಶ್ವದ 131 ನಗರಗಳ ಸದೃಢ ತಾಂತ್ರಿಕತೆ, ಆರ್ಥಿಕ ಮತ್ತು ಸಾಮಾಜಿಕ ಶ್ರೇಣಿ ಮತ್ತು ನಾವೀನ್ಯ ಪರಿಸರ ವ್ಯವಸ್ಥೆ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಾಗುತ್ತಿರುವ ಬೆಳವಳಿಣೆ ಆಧರಿಸಿ ಜೆಎಲ್‌ಎಲ್‌ ಈ ಬಾರಿ ವಿಶ್ವದ ಚಲನಶೀಲ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಉದಯೋನ್ಮುಖ ಉದ್ಯಮಗಳನ್ನು ಬೆಳವಣಿಗೆಯ ವೇಗ, ನಗರ ಅರ್ಥವ್ಯವಸ್ಥೆ ಮತ್ತು ರಿಯಲ್‌ ಎಸ್ಟೇಟ್‌ ಮಾರ್ಕೆಟ್‌ಗಳ ಬೆಳವಣಿಗೆ ಆಧರಿಸಿ ಈ ರಾರ‍ಯಂಕ್‌ ನೀಡಲಾಗಿದೆ.

ಯುರೋಪ್‌ ಅಮೆರಿಕದ ಯಾವ ನಗರಗಳೂ ಡೈನಾಮಿಕ್‌ ಅಲ್ಲ!

ಸದ್ಯ ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಜೆಎಲ್‌ಎಲ್‌ ಬಿಡುಗಡೆ ಮಾಡಿರುವ ‘ವಿಶ್ವದ ಡೈನಾಮಿಕ್‌ ನಗರ’ಗಳ ಪಟ್ಟಿಯಲ್ಲಿ ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ಬೆಳವಣಿಗೆ ದರವನ್ನು ವಿಭಾಗಿಸಲಾಗಿದೆ. ಈ ಬಾರಿ ಆಯ್ಕೆಯಾದ 20 ನಗರಗಳಲ್ಲಿ 19 ನಗರಗಳು ಏಷ್ಯಾಫೆಸಿಫಿಕ್‌ ನಗರಗಳಾಗಿವೆ. ಇಲ್ಲಿನ ನಗರಗಳ ಆರ್ಥಿಕ ಬೆಳವಣಿಗೆ ಮತ್ತು ನಗರೀಕರಣವು ಲ್ಯಾಟಿನ್‌ ಅಮೆರಿಮ, ಆಫ್ರಿಕನ್‌ ಏಶಗಳು ಮತ್ತು ಉತ್ತರ ಅಮೆರಿಕ ನಗರಗಳಿಗಿಂತ ವೇಗವಾಗಿದೆ ಎಂದು ಸಮೀಕ್ಷೆ ಹೇಳಿದೆ. ಚೀನಾ ಮತ್ತು ಭಾರತದ ನಗರಗಳ ನಡುವೆ ತೀವ್ರ ಪೈಪೋಟಿ ಇದ್ದು, ಅಗ್ರಗಣ್ಯ ನಗರಗಳ ಪೈಕಿ ವಿಯೆಟ್ನಾಂ, ಫಿಲಿಫೈನ್ಸ್‌ ಮತ್ತು ಥೈಲ್ಯಾಂಡ್‌ ಕೂಡ ಇವೆ. ವಿಶೇಷ ಎಂದರೆ ಯುರೋಪ್‌ ಮತ್ತು ಅಮೆರಿಕದ ಯಾವ ನಗರಗಳೂ ಈ ಪಟ್ಟಿಯಲ್ಲಿ ಇಲ್ಲ. ಏಷ್ಯಾಫೆಸಿಫಿಕ್‌ ಹೊರತಾದ ಒಂದೇ ಒಂದು ರಾಜ್ಯ ಎಂದರೆ ನೈರೋಬಿ ಮಾತ್ರ. ಅಲ್ಲೂ ಏಷ್ಯಾದ ಪ್ರಭಾವ ತೀವ್ರವಾಗಿದೆ. ಚೀನಾ ಸಾಕಷ್ಟುಬಂಡವಾಳ ಹೂಡಿಕೆ ಮಾಡುತ್ತಿದೆ.

ಅತ್ಯಂತ ಡೈನಾಮಿಕ್‌ ಸಿಟಿ: ವಿಶ್ವದಲ್ಲೇ ಬೆಂಗಳೂರು ನಂ.1 !

ಸ್ಟಾರ್ಟ್‌ ಅಪ್‌ ಸಂಸ್ಕೃತಿ

ಜೆಎಲ್‌ಎಲ್‌ ಸಮೀಕ್ಷೆಯಲ್ಲಿ ಈ 20 ನಗರಗಳು ರಾರ‍ಯಂಕ್‌ ಗಳಿಸಲು ಮೂಲ ಕಾರಣ ಆ ಎಲ್ಲಾ ನಗರಗಳು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳಿಗೆ ನೀಡುವ ಮಹತ್ವ. ತಂತ್ರಜ್ಞಾನಕ್ಕೆ ನೀಡುವ ಪ್ರಾಮುಖ್ಯತೆಯು ಆರ್ಥಿಕತೆ ಮತ್ತು ರಿಯಲ್‌ ಎಸ್ಟೇಟ್‌ ಎರಡೂ ಕ್ಷೇತ್ರದ ಬೆಳವಣಿಗೆಗೆ ಕೀಲಿ ಕೈ. ಜೊತೆಗೆ ಈ ನಗರಗಳಲ್ಲಿ ಉದಯೋನ್ಮುಖ ಉದ್ಯಮಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಅದರಲ್ಲೂ ಬೆಂಗಳೂರು, ಹೈದರಾಬಾದ್‌, ನೈರೋಬಿ, ಹೊ ಚಿ ಮಿನ್‌ ಸಿಟಿ ಮತ್ತು ಶೆಂಜೆಹೆನ್‌ಗಳಲ್ಲಿ ಸ್ಟಾರ್ಟ್‌ಅಪ್‌ ವೇಗವೇ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಲು ಕಾರಣ ಎಂದು ಹೇಳಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿನ ಬೆಳವಣಿಗೆ

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳೆಲ್ಲವುಗಳ ಮೂಲ ಆದ್ಯತೆ ರಿಯಲ್‌ ಎಸ್ಟೇಟ್‌. ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮದಿಂದ ಕೇವಲ ಬಂಡವಾಳ ಹೂಡಿಕೆ ಮತ್ತು ವಾಣಿಜ್ಯ ವ್ಯವಹಾರಗಳ ಹೆಚ್ಚಳ ಮಾತ್ರವಲ್ಲದೆ ಸುರಕ್ಷತೆ, ಪರಿಸರ ಸಂರಕ್ಷಣೆ ಬಗ್ಗೆಯೂ ಮುಂದಾಲೋಚನೆಯಲ್ಲಿ ಕೆಲಸ ಮಾಡಲಾಗುತ್ತದೆ. ಅದಕ್ಕೂ ಮೇಲಾಗಿ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇತ್ತೀಚೆಗೆ ಭಾರತದಲ್ಲಿ ವಿದೇಶಿ ನೆರ ಹೂಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಇದು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲೂ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಇದಕ್ಕೂ ಮೊದಲು ಇಲ್ಲಿ ಪಾರದರ್ಶಕತೆಯ ಕೊರತೆಯ ಕಾರಣದಿಂದ ವಿದೇಶಿ ಬಂಡವಾಳಗಾರರು ಹಿಂದೇಟು ಹಾಕುತ್ತಿದ್ದರು. ಸದ್ಯ ಕೇಂದ್ರ ಸರ್ಕಾರ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಅಭಿವೃದ್ಧಿ-ರೇರಾ)ಕಾಯ್ದೆ, ಜಿಎಸ್‌ಟಿಯಂತಹ ಸುಧಾರಣೆಗಳು ಮೂಲ ಸೌಕರ್ಯ ಸುಧಾರಣೆ ಹಾಗೂ ಉದ್ಯಮಸ್ನೇಹಿ ವಾತಾವರಣಕ್ಕೆ ಹೆಚ್ಚಿನ ಗಮನ ನೀಡಿದ್ದರಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸಿದೆ.

This is how bengaluru tops list of world s most dynamic cities

ಎಲೆಕ್ಟ್ರಾನಿಕ್‌ ಮತ್ತು ತಂತ್ರಜ್ಞಾನ

ಡೈನಾಮಿಕ್‌ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ಗಿಟ್ಟಿಸಿಕೊಳ್ಳಲು ಕಾರಣ ವಿನ್ಯಾಸ ಮತ್ತು ವಿದ್ಯುನ್ಮಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿನ ವೇಗದ ಬೆಳವಣಿಗೆಯು ಜಾಗತಿಕವಾಗಿ ಬೆಂಗಳೂರಿನ ಗೌರವವನ್ನು ಹೆಚ್ಚಿಸಿರುವುದು. ಅದರೊಂದಿಗೆ ಬೆಂಗಳೂರು ಸ್ಟಾರ್ಟ್‌ ಅಪ್‌ ಉದ್ಯಮಗಳಿಗೆ ನೀಡುವ ಆದ್ಯತೆ. ಇನ್ನು ಹೈದರಾಬಾದ್‌ ಎರಡನೇ ಸ್ಥಾನ ಗಳಿಸಿದೆ. ಕಾರಣ ತಾಂತ್ರಜ್ಞಾನ ಆಧಾರಿತ ಯಶಸ್ವಿ ಸ್ಟಾರ್ಟ್‌ಅಪ್‌ಗಳಿಗೆ ಹೈದರಾಬಾದ್‌ ಹೋಂ ಟೌನ್‌ ಆಗಿರುವುದು. ಭಾರತದ ಅತಿದೊಡ್ಡ ಸ್ಟಾರ್ಟ್‌ ಅಪ್‌ ಎಂದು ಹೆಸರು ಪಡೆದಿರುವ ‘ಟಿ-ಹಬ್‌’ ಕೂಡ ಹೈದರಾಬಾದ್‌ನಲ್ಲಿಯೇ ಇದೆ.

ಈ ವೇಗ ಒಳ್ಳೆಯದೇ?

ನಗರಗಳ ಬೆಳವಣಿಗೆಯ ವೇಗವು ಧನಾತ್ಮಕವಾಗಿ ಮತ್ತು ಋುಣಾತ್ಮಕವಾಗಿಯೂ ಪರಿಣಾಮ ಬೀರಬಲ್ಲದು. ಇದರಿಂದ ಬಂಡವಾಳಹೂಡಿಕೆಯನ್ನು, ಜನರನ್ನು ಕಂಪನಿಗಳನ್ನು ಆಕರ್ಷಿಸಬಹುದು. ಆದರೆ ಸಾಮಾಜಿಕ ಅಸಮಾನತೆ, ದಟ್ಟಣೆ, ಪರಿಸರದ ನಿರಂತರ ಅವನತಿ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾಲಿನ್ಯ, ದಟ್ಟಣೆ ಅತಿದೊಡ್ಡ ಸವಾಲಾಗುತ್ತದೆ. ವಿಶೇಷ ಎಂದರೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ನಗರಗಳು ಕ್ರಿಯಾಶೀಲ ನಗರಗಳ ಪಟ್ಟಿಸೇರಿವೆ. ಇದಕ್ಕೆ ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮ. ಅದು ಇಂತಹ ಸವಾಲುಗಳಿಗೆ ಉತ್ತರವಾಗಿ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದು.

ವಿಶ್ವದ 20 ಡೈನಾಮಿಕ್‌ ನಗರಗಳಿವು

 1. ಬೆಂಗಳೂರು
 2. ಹೈದರಾಬಾದ್‌
 3. ಹನೋಯಿ
 4. ದೆಹಲಿ]
 5. ಪುಣೆ
 6. ನೈರೋಬಿ
 7. ಚೆನ್ನೈ
 8. ಹೊ ಚಿ ಮಿನ್‌ ಸಿಟಿ
 9. ಕ್ಸಿ-ಯಾನ್‌
 10. ಗುವಾಂಗ್ಹೌ
 11. ನಾಂಜಿಂಗ್‌
 12. ಮನಿಲಾ
 13. ಬೀಜಿಂಗ್‌
 14. ಶಾಂಘೈ
 15. ಕೊಲ್ಕತ್ತಾ
 16. ಚಾಂಗಿಂಗ್‌
 17. ಹಾಂಗ್‌ ಝೌ
 18. ಬ್ಯಾಂಕಾಕ್‌
 19. ಶೆಂಜಹನ್‌
 20. ಚೆಂಗ್ಡು
Follow Us:
Download App:
 • android
 • ios