ಕಲ್ಲಿದ್ದಲು ಕೊರತೆಯಿಲ್ಲ, ಸರಬರಾಜಿನಲ್ಲಿ ವ್ಯತ್ಯಯ: ಸಚಿವ ಪ್ರಹ್ಲಾದ ಜೋಶಿ

ರಾಜ್ಯದಲ್ಲಿ ಯಾವುದೇ ರೀತಿಯ ಕಲ್ಲಿದ್ದಲು ಕೊರತೆಯಿಲ್ಲ. ಆದರೆ, ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 

There is no shortage of coal a variation in supply says union minister prahlad joshi gvd

ರಾಯಚೂರು (ಏ.23): ರಾಜ್ಯದಲ್ಲಿ (Karnataka) ಯಾವುದೇ ರೀತಿಯ ಕಲ್ಲಿದ್ದಲು (Coal) ಕೊರತೆಯಿಲ್ಲ. ಆದರೆ, ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ (Prahlad Joshi) ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ವಿವಿಧ ಕಲ್ಲಿದ್ದಲು ಗಣಿಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ, ಇದನ್ನು ಸರಿಪಡಿಸಲಾಗುವುದು. ಆದರೆ, ಕಾಂಗ್ರೆಸ್‌ (Congress) ಆರೋಪಿಸಿದಷ್ಟು ಕಲ್ಲಿದ್ದಲಿನ ಸಮಸ್ಯೆ ರಾಜ್ಯಕ್ಕೆ ಉಂಟಾಗುವುದಿಲ್ಲ ಎಂದರು.

ಪ್ರತಿನಿತ್ಯ ದೇಶದಲ್ಲಿ ಗರಿಷ್ಠ 3.2 ಬಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲು ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ರಷ್ಯಾದಿಂದ ಬರುತ್ತಿದ್ದ ಗ್ಯಾಸ್‌ ಸ್ಥಗಿತಗೊಂಡಿರುವ ಕಾರಣ ಹೈಡ್ರೋ ವಿದ್ಯುತ್‌ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರಿಂದ ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬನೆ ಆಗಿರುವುದರಿಂದ ನಿತ್ಯ ಉತ್ಪಾದಿಸುವ ಕಲ್ಲಿದ್ದಲು ಅಂದೇ ಖಾಲಿಯಾಗುತ್ತಿದೆ. ನಿಯಮದ ಪ್ರಕಾರ ವಿದ್ಯುತ್‌ ಉತ್ಪಾದನೆ ಕೇಂದ್ರಗಳಲ್ಲಿ 17 ದಿನಕ್ಕಾಗುವಷ್ಟುಕಲ್ಲಿದ್ದಲು ಸಂಗ್ರಹ ಇರಬೇಕು. ಆದರೆ, ಇದೀಗ 8 ರಿಂದ 10 ದಿನಗಳಿಗೆ ಆಗುವಷ್ಟು ಮಾತ್ರ ಸಂಗ್ರಹವಿದೆ.  ಇರುವ ಕಲ್ಲಿದ್ದಲು ಪೂರ್ಣ ಪ್ರಮಾಣದಲ್ಲಿ ಮುಗಿಯುವಷ್ಟರಲ್ಲಿ ಗಣಿಯಿಂದ ಸರಬರಾಜು ಮಾಡುತ್ತಿದ್ದೇವೆ. 

ಹುಬ್ಬಳ್ಳಿ ಗಲಭೆಯಲ್ಲಿ ‌ಯಾರೇ ಇರಲಿ ಬಿಡುವ ಪ್ರಶ್ನೆಯೇ ‌ಇಲ್ಲ Pralhad Joshi

ರಾಜ್ಯದಲ್ಲಿ ಪ್ರತಿದಿನ ಅಂದಾಜು 2 ಮಿಲಿಯನ್‌ ಟನ್‌ ಕಲ್ಲಿದ್ದಲು ಖರ್ಚಾಗುತ್ತಿದ್ದು, ಅಷ್ಟನ್ನು ಗಣಿಗಳಿಂದ ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದರು. ಬೇರೆ ಮೂಲಗಳಿಂದ ವಿದ್ಯುತ್‌ ಲಭ್ಯವಾಗುತ್ತಿರುವ ಕಾರಣ, ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಬೇಡಿಕೆ ಕಡಿಮೆಗೊಳಿಸಿ ಘಟಕಗಳನ್ನು ಸ್ಥಗಿತ ಮಾಡಿರುವುದಾಗಿ ರಾಜ್ಯ ಇಂಧನ ಸಚಿವ ಸುನಿಲ್‌ ಕುಮಾರ ತಿಳಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ ಆಡಳಿತದ 10 ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ನೀಡುತ್ತಿದ್ದ ಕಲ್ಲಿದ್ದಲಿನ ಪ್ರಮಾಣಕ್ಕಿಂತ 1.5 ಪಟ್ಟು ಹೆಚ್ಚಿಗೆ ಕಲ್ಲಿದ್ದಲನ್ನು ನೀಡಲಾಗುತ್ತಿದೆ. ಸಿಂಗರೇಣಿ ಕೋಲ್‌ ಫೀಲ್ಡ್‌ನಿಂದ ಬರುವ ಕಲ್ಲಿದ್ದಲಿನ ರೇಕುಗಳ ಪ್ರಮಾಣವನ್ನು 7ರಿಂದ 10ಕ್ಕೆ ಹೆಚ್ಚಿಸಲಾಗಿದೆ. 

ಅದೇ ರೀತಿ ಮಹಾನದಿ ಕೋಲ್‌ ಫೀಲ್ಡ್ಸ್‌ನಿಂದ ಹಾಗೂ ಡಬ್ಲ್ಯೂಸಿಎಲ್‌ನಿಂದ ರಸ್ತೆ ಹಾಗೂ ರೈಲಿನ ಮೂಲಕ ಕಲ್ಲಿದ್ದನ್ನು ಸರಬರಾಜು ಮಾಡಲು ತಿಳಿಸಿದ್ದು, ಇದರಲ್ಲಿ ಕೆಲವೊಂದಿಷ್ಟನ್ನು ಲಿಫ್ಟ್ ಮಾಡಲು ರಾಜ್ಯ ಸರ್ಕಾರಕ್ಕೆ ಸಮಸ್ಯೆಯಾಗುತ್ತಿದೆ. ಬೇಡಿಕೆಯಾನುಸಾರ ಸಬರಾಜು ಮಾಡಿಕೊಳ್ಳುತ್ತಿದ್ದು, ಕರ್ನಾಟಕಕ್ಕೆ ರೇಕ್‌ಗಳನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು. ಕರ್ನಾಟಕಕ್ಕೆ ಈಗಾಗಲೇ ಮೂರ್ನಾಲ್ಕು ಕೋಲ್‌ ಬ್ಲಾಕ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಕಲ್ಲಿದ್ದಲು ಹಂಚಿಕೆಯ ಪ್ರಮಾಣವನ್ನು ಸಹ ಜಾಸ್ತಿ ಮಾಡಲಾಗಿದೆ ಎಂದರು.

Hubli Violence ಬಂಧಿತರು ಅಮಾಯಕರೆಂದು ಎಚ್ಡಿಕೆಗೆ ಹೇಗೆ ಗೊತ್ತು, ಜೋಶಿ ಪ್ರಶ್ನೆ!

ದೆಹಲಿ ಆಪ್ ಪರಿವಾರ ರಾಜಕೀಯ: ಬಿಜೆಪಿಗೆ ಭ್ರಷ್ಟಾಚಾರ, ಗುಂಡಾ ಹಿನ್ನೆಲೆ ‌ನಾಯಕರು  ಬರುತ್ತಿದ್ದಾರೆಂಬ ಆಪ್ ಮುಖ್ಯಸ್ಥ ಕೇಜ್ರಿವಾಲ್ ಆರೋಪಕ್ಕೆ ‌ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ  ಅಲ್ಲ‌ಗಳೆದರು. ರಾಜ್ಯಸಭಾಕ್ಕೆ ಅವರ ಅಳಿಯನ್ನು ಕಳಿಸಿದ್ದಾರಲ್ಲ ಅದಕ್ಕೇನಂತಾರೆ. ನಾವು ಪರಿವಾರ ರಾಜಕೀಯ ವಾದ ವಿರೋಧಿಸುತ್ತೇವೆ. ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದರೆ ಬುಲ್ಡೋಜರ್ ಮೂಲಕ ಧ್ವಂಸ ಮಾಡುತ್ತೇವೆ. ಸಕ್ರಮ ಇದ್ರೆ ಬಿಡುತ್ತೇವೆ ಎಂದರು. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸರಿಯಾದ ದಿಕ್ಕಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ, ನಷ್ಟ‌,‌ ತುಷ್ಟೀಕರಣ ಸಂಸ್ಕೃತಿ ಕಾಂಗ್ರೆಸ್ ಬಿಡಬೇಕು. ಐಕ್ಯತೆಗೆ ಒತ್ತು ಕೊಡಬೇಕು. ಎಲ್ಲ ಮುಸ್ಲಿಂರು ಮತಾಂದರಲ್ಲ ಕೆಲವು ಕಿಡಿಗೇಡಿಗಳು ಕಲ್ಲು ಹಾಕುತ್ತಿದ್ದಾರೆ ಅವರ ಸಹಿಸಲು ಸಾಧ್ಯವಿಲ್ಲ ಎಂದು ಜೋಷಿ ಹೇಳಿದರು.

Latest Videos
Follow Us:
Download App:
  • android
  • ios