ಹೆದ್ದಾರಿ ಪ್ರಾಧಿಕಾರ ಭೂ ಪರಿಹಾರ ನೀಡಿಲ್ಲವೆಂದು ಮನನೊಂದು ಎರಡು ಕುಟುಂಬಗಳ ಮೂವರು ಸದಸ್ಯರು ಕೀಟನಾಶಕ ಸೇವಿಸಿ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಪಿಲ್ಲರ್ ಮೇಲೆ ಹತ್ತಲು ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. 

ಕೋಲಾರ (ಆ.6):  ಹೆದ್ದಾರಿ ಪ್ರಾಧಿಕಾರ ಭೂ ಪರಿಹಾರ ನೀಡಿಲ್ಲವೆಂದು ಮನನೊಂದು ಎರಡು ಕುಟುಂಬಗಳ ಮೂವರು ಸದಸ್ಯರು ಕೀಟನಾಶಕ ಸೇವಿಸಿ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಪಿಲ್ಲರ್ ಮೇಲೆ ಹತ್ತಲು ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. 

ತಾಲೂಕಿನ ಎಸ್‌.ಗೊಲ್ಲಹಳ್ಳಿಯ ರೈತ ಕೃಷ್ಣಮೂರ್ತಿ, ಅಭಿಗೌಡ, ವೆಂಕಟೇಶಪ್ಪ, ಕೋಲಾರದ ಹಾರೋಹಳ್ಳಿ ಬಡಾವಣೆಯ ಕೃಷ್ಣಮೂರ್ತಿ, ವೆಂಕಟೇಶಪ್ಪ ಹಾಗೂ ಲಕ್ಷ್ಮೀಸಾಗರದ ಅಭಿಗೌಡ ವಿಷ ಕುಡಿದ ರೈತರು. ಇವರನ್ನು ಕೂಡಲೇ ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್‌ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ

 ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಕಾರಿಡಾರ್‌ಗೆ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿಗೆ ನಾಲ್ಕು ಎಕರೆ ಭೂಮಿ ವಶಪಡಿಸಿಕೊಂಡಿದ್ದು, ಇನ್ನೂ ಪರಿಹಾರ ನೀಡದ ಹಿನ್ನೆಲೆ ವಿಷ ಸೇವಿಸಿದ್ದಾರೆ. ಪಿ.ನಂಬರ್ ಜಮೀನಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿರುವ ಕೋಲಾರ ಜಿಲ್ಲಾಡಳಿತ. ಇದರಿಂದ ಆಘಾತ, ಆಕ್ರೋಶಗೊಂಡು ಕ್ರಿಮಿನಾಶಕ ಸೇವನೆ ಮಾಡಿದ್ದಾರೆ. ಸ್ಥಳಕ್ಕೆ ಕೋಲಾರ ತಹಶಿಲ್ದಾರ್ ಹರ್ಷವರ್ಧನ ಭೇಟಿ ನೀಡಿದಾಗ, ಜಮೀನು ಕಳೆದುಕೊಂಡ ಅಭಿಲಾಷ ಆಕ್ರೋಶಗೊಂಡು ಕಾಮಗಾರಿಗೆ ಅಡ್ಡಿಪಡಿಸಲು ಮುಂದಾಗಿದ್ದಾರೆ.

ಕೋಲಾರ: ಅವ್ಯವಸ್ಥೆಗಳ ಅಗರವಾದ ಇಂದಿರಾ ಕ್ಯಾಂಟೀನ್‌, ಸ್ವಚ್ಛತೆ ಇಲ್ಲಿ ಮರೀಚಿಕೆ

ಸದ್ಯ ICU ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಪ್ರಾಣಾಪಾಯದಿಂದ ಪಾರು. ಘಟನೆ ಮಾಹಿತಿ ತಿಳಿದು ಜಿಲ್ಲಾಸ್ಪತ್ರೆಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಸಂಸದ ಮುನಿಸ್ವಾಮಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೃಷ್ಣಮೂರ್ತಿ ಹಾಗೂ ಅಭಿಗೌಡರ ಆರೋಗ್ಯ ವಿಚಾರಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.