- ಜನರು ತಮ್ಮಿಷ್ಟದ ಅದ್ಭುತ ಸೂಚಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಿ- ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು ಅಭಿಯಾನ- ಜನರಿಂದಲೇ ರಾಜ್ಯದ ಏಳು ಅದ್ಭುತಗಳ ನಾಮನಿರ್ದೇಶನ
ಬೆಂಗಳೂರು (ಮೇ. 5): ಪ್ರಪಂಚದ ಏಳು ಅದ್ಭುತಗಳ ಮಾದರಿಯಲ್ಲಿ (world seven wonders ) ಕರ್ನಾಟಕದ ಏಳು ಅದ್ಭುತಗಳನ್ನು (Karnataka Seven Wonders) ಗುರುತಿಸಲು ‘ಏಷ್ಯಾನೆಟ್ ಸುರ್ವಣ ನ್ಯೂಸ್ ಮತ್ತು ಕನ್ನಡಪ್ರಭ’ ಆರಂಭಿಸಿರುವ ‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಅಭಿಯಾನದಲ್ಲಿ ನಾಡಿನ ಎಲ್ಲ ನಾಗರಿಕರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ‘ಕನ್ನಡಪ್ರಭ’ ಪ್ರಧಾನ ಸಂಪಾಧಕ ರವಿ ಹೆಗಡೆ (kannada prabha News paper Editor ravi hegde) ಮನವಿ ಮಾಡಿದ್ದಾರೆ.
ರಾಜ್ಯ ಪ್ರವಾಸೋದ್ಯಮ (State tourism department) ಇಲಾಖೆಯ ಸಹಭಾಗಿತ್ವದಲ್ಲಿ ಆರಂಭಿಸಿರುವ ಈ ವಿಶೇಷ ಅಭಿಯಾನದಲ್ಲಿ ‘ಕರ್ನಾಟಕದ ಏಳು ಅದ್ಭುತಗಳನ್ನು’ ಜನಸಾಮಾನ್ಯರಿಂದಲೇ ನಾಮನಿರ್ದೇಶನ ಪಡೆಯಲಾಗುತ್ತದೆ. ಹಾಗಾಗಿ ನಾಡಿನ ಪ್ರತಿಯೊಬ್ಬ ನಾಗರಿಕನೂ ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಊರು, ತಾಲ್ಲೂಕು, ಜಿಲ್ಲೆ ಅಥವಾ ರಾಜ್ಯದ ಯಾವುದೇ ಭಾಗದ ತಮ್ಮಿಷ್ಟದ ಅದ್ಭುತವನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಮೂರು ಹಂತದಲ್ಲಿ ನಡೆಯುವ ಅಭಿಯಾನದಲ್ಲಿ ಸಾರ್ವಜನಿಕರ ಓಟಿಂಗ್ ಮೂಲಕ ಅಂತಿಮವಾಗಿ 7 ಅದ್ಭುತಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
"
ಪ್ರವಾಸೋದ್ಯಮ ಅಂದರೆ ರಾಜಸ್ಥಾನ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಬಗ್ಗೆಯೇ ಯೋಚನೆ ಮಾಡುವ ಸ್ಥಿತಿ ನಮ್ಮಿಂದ ದೂರವಾಗಬೇಕು. ಪ್ರಪಂಚದ ಅದ್ಭುತಗಳಂತೆ ನಮ್ಮ ರಾಜ್ಯಗಳಲ್ಲೂ ಸಾಕಷ್ಟುಅದ್ಭುತ ಸ್ಥಳಗಳಿವೆ. ಅವುಗಳನ್ನು ಗುರುತಿಸಿ ಬ್ರಾಂಡಿಂಗ್ ಮಾಡಿ ಪ್ರಚಾರ ನೀಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಇದು ಹಲವು ತಿಂಗಳ ಯೋಜನೆ. ನಮ್ಮ ಅಭಿಯಾನಕ್ಕೆ ಸರ್ಕಾರ ಆದ್ಯತೆ ನೀಡಿದೆ. ಮುಖ್ಯಮಂತ್ರಿ ಅವರು, ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಕೆಎಸ್‌ಟಿಡಿಸಿ ಅಧಿಕಾರಿಗಳು ಕೂಡ ಸಹಕಾರ ನೀಡಿದೆ ಅವರೆಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.
ರಾಜ್ಯದ ಅದ್ಭುತ ಗುರುತಿಸಲು ಸಕಾಲ: ನಟ ರಮೇಶ್
ಬೆಂಗಳೂರು: ಪ್ರವಾಸೋದ್ಯಮ ವಿಚಾರ ಬಂದಾಗ ಪ್ರಪಂಚದ ಏಳು ಅದ್ಭುತ ತಾಣಗಳು, ಬೇರೆ ದೇಶ, ರಾಜ್ಯಗಳ ಪ್ರವಾಸಿ ತಾಣಗಳ ಬಗ್ಗೆಯೇ ಮಾತನಾಡುವ ನಮಗೆ ಈಗ ನಮ್ಮ ರಾಜ್ಯದಲ್ಲೇ ಇರುವ ಅದ್ಭುತಗಳನ್ನು ಗುರುತಿಸುವ ಸಕಾಲ ಬಂದಿದೆ ಎಂದು ‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಅಭಿಯಾನದ ರಾಯಭಾರಿ ಖ್ಯಾತ ನಟ ರಮೇಶ್ ಅರವಿಂದ (Actor Ramesh Aravind) ಅಭಿಪ್ರಾಯಪಟ್ಟರು.
ನನಗೆ ದೇಶ, ರಾಜ್ಯದ ಮೂಲೆ ಮೂಲೆಯ ಬೆಟ್ಟಗುಡ್ಡ, ಅರಣ್ಯ, ನದಿ, ಸಮುದ್ರ ತೀರದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಅವಕಾಶಗಳು ಸಿಕ್ಕಿದೆ. ಪ್ರತಿಯೊಂದು ಒಳ್ಳೆಯ ತಾಣಕ್ಕೆ ಹೋದಾಗ ನಮ್ಮ ಆಪ್ತರ ಜೊತೆ ಹಂಚಿಕೊಳ್ಳಬೇಕು, ಕುಟುಂಬದವರನ್ನು ಕರೆದುಕೊಂಡು ಹೋಗಬೇಕು ಅನಿಸಿದೆ. ಅವುಗಳಿಗೆ ಭೇಟಿ ನೀಡಿದಾಗ ನಾವು, ನೀವು ಪಟ್ಟಖುಷಿಯನ್ನು ಎಲ್ಲರಿಗೂ ಸಿಗುವಂತೆ ಮಾಡಬೇಕಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ಸಾಕಷ್ಟುಅದ್ಭುತಗಳಿವೆ. ಅವುಗಳನ್ನು ಪ್ರಪಂಚಕ್ಕೆ ಗೊತ್ತುಪಡಿಸಬೇಕಿದೆ ಅನಿಸಿತು.
ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು, ವಿಶೇಷ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ!
ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಏಳು ಅದ್ಭುತಗಳನ್ನು ಗುರುತಿಸುವ ಕಾಲ ಈಗ ಬಂದಿದೆ. ಬನ್ನಿ ಪ್ರತಿಯೊಬ್ಬರೂ ‘ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ’ ಆರಂಭಿಸಿರುವ ‘ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು’ ವಿಶೇಷ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ: ರಾಜೇಶ್ ಕಾಲ್ರಾ
ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ದೇಶ
ಭಾರತದ ನೂರು ಅದ್ಭುತ ತಾಣಗಳನ್ನು ಗುರುತಿಸಿದರೆ ಅದರಲ್ಲಿ ಕರ್ನಾಟಕದ ಅನೇಕ ತಾಣಗಳು ಸ್ಥಾನ ಪಡೆಯುವ ಅರ್ಹತೆ ಹೊಂದಿವೆ. ಭಾರತದ ಪ್ರವಾಸೋದ್ಯಮ ಅಂದರೆ ತಾಜ್ ಮಹಲ್, ರೆಡ್‌ಫೋರ್ಟ್ ಎಂದು ಭಾವಿಸಲಾಗುತ್ತಿದೆ. ಅದನ್ನು ಹೊರತುಪಡಿಸಿ ಸಾಕಷ್ಟುತಾಣಗಳಿವೆ. ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ರಾಜ್ಯ.ಆದರೆ, ಇದಕ್ಕೆ ಸಿಗಬೇಕಾಗಿದ್ದ ಮಾನ್ಯತೆ ಸಿಕ್ಕಿಲ್ಲ ಎಂಬುದು ಬೇಸರದ ಸಂಗತಿ. ರಾಜ್ಯದ ಅದ್ಭುತ ತಾಣಗಳನ್ನು ಈಗ ಸಾಮಾನ್ಯಜನರೇ ಗುರುತಿಸುವ ಅಭಿಯಾನಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವೇದಿಕೆ ಕಲ್ಪಿಸುತ್ತಿದೆ. ಇಂತಹ ಒಂದು ಅಭಿಯಾನದಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು.
- ರಾಜೇಶ್ ಕಾಲ್ರಾ, ಕಾರ್ಯನಿರ್ವಾಹಕ ಅಧ್ಯಕ್ಷ, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್
