ಸುಳ್ಳಿನ ಸುಳಿಯೇ ಕಾಂಗ್ರೆಸ್ಸಿಗೆ ಮಾರಕವಾಗಲಿದೆ: ಸಿಎಂ ಕಿಡಿ
ಸಿದ್ದರಾಮಯ್ಯ ಆಡಳಿತವು ದೇಶದಲ್ಲಿಯೇ ಅತಿ ಹೆಚ್ಚು ಭ್ರಷ್ಟಸರ್ಕಾರ ಎಂದು ಮೂರು ಸಮೀಕ್ಷೆಗಳು ತಿಳಿಸಿವೆ. ಟೆಂಡರ್‌ಶ್ಯೂರ್ ರಸ್ತೆಗೆ ಅನುಮತಿ ನೀಡುವಾಗ ಶೇ.50ಕ್ಕಿಂತ ಹೆಚ್ಚು ಭ್ರಷ್ಟಾಚಾರ(Curruption) ನಡೆದಿತ್ತು. ಇವರು ನಮ್ಮ ಸರ್ಕಾರದ ಬಗ್ಗೆ 40 ಪರ್ಸೆಂಟ್ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಕಾಲದಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಕಾಂಗ್ರೆಸ್ ವಿರುದ್ಧ ಸಿಎಂ ಕಿಡಿ
ವಿಧಾನಸಭೆ (ಫೆ.21) : ರಾಜ್ಯಪಾಲರ ಭಾಷಣವನ್ನು ತೌಡು ಕುಟ್ಟುವುದಕ್ಕೆ ಹೋಲಿಕೆ ಮಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್ ಪಕ್ಷ ಸುಳ್ಳಿನ ಸುಳಿಯಲ್ಲಿ ಸಿಲುಕಿದೆ. ಅದೇ ಸುಳ್ಳು ಅವರಿಗೆ ಮಾರಕವಾಗಲಿದೆ. ಹಿಂದೆ ಎಸಿಬಿ ರಚನೆ ಮಾಡಿ ಲೋಕಾಯುಕ್ತವನ್ನು ಕಾಂಗ್ರೆಸ್ ಸರ್ಕಾರ ನಿಷ್ಕಿ್ರಯಗೊಳಿಸಿತ್ತು. ಈಗ ನಾವು ತನಿಖೆಯಾಗದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ (Siddaramaiah)ಅವರು ಹೇಳಿದಂತೆ ನಮ್ಮ ಸರ್ಕಾರವು ತೌಡು ಕುಟ್ಟುವ ಕೆಲಸ ಮಾಡಿಲ್ಲ. ಬದಲಿಗೆ ಭತ್ತ ಹಾಕಿ ಅಕ್ಕಿ ತೆಗೆಯುವ ಕೆಲಸ ಮಾಡಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
Kuvempu Airport: ಶಿವಮೊಗ್ಗ ಏರ್‌ಪೋರ್ಟ್ ಗೆ ಕುವೆಂಪು ಹೆಸರು: ಸಂಪುಟ ಸಭೆ ನಿರ್ಧಾರ...
Read more at: https://kannada.asianetnews.com/latest-news
ಸೋಮವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ರಾಜ್ಯಪಾಲರು(Governor) ವಾಸ್ತವಾಂಶ ಮತ್ತು ಸತ್ಯದ ಆಧಾರದ ಮೇಲೆ ಭಾಷಣ ಮಾಡಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣವನ್ನು ತೌಡು ಕುಟ್ಟುವ ಭಾಷಣ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರವು ಹಿಂದೆಲ್ಲಾ ತೌಡನ್ನೇ ಕುಟ್ಟಿದೆ. ಅವರ ಅನುಭವದ ಮೇಲೆ ಕಾಂಗ್ರೆಸ್ಸಿಗರು ಮತ್ತು ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ರಾಜ್ಯಕ್ಕೆ ‘ಭಾಗ್ಯ’ ನೀಡುವವರು ಬಂದು ದೌರ್ಭಾಗ್ಯವನ್ನು ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಮಾತಿನ ಚಕಮಕಿ:
ಸಿದ್ದರಾಮಯ್ಯ ಆಡಳಿತವು ದೇಶದಲ್ಲಿಯೇ ಅತಿ ಹೆಚ್ಚು ಭ್ರಷ್ಟಸರ್ಕಾರ ಎಂದು ಮೂರು ಸಮೀಕ್ಷೆಗಳು ತಿಳಿಸಿವೆ. ಟೆಂಡರ್‌ಶ್ಯೂರ್ ರಸ್ತೆಗೆ ಅನುಮತಿ ನೀಡುವಾಗ ಶೇ.50ಕ್ಕಿಂತ ಹೆಚ್ಚು ಭ್ರಷ್ಟಾಚಾರ(Curruption) ನಡೆದಿತ್ತು. ಇವರು ನಮ್ಮ ಸರ್ಕಾರದ ಬಗ್ಗೆ 40 ಪರ್ಸೆಂಟ್ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಕಾಲದಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದ ಗುತ್ತಿಗೆದಾರರು ಯಾವುದೇ ದಾಖಲೆ ನೀಡಿಲ್ಲ. ಯಾವ ಕಾರಣಕ್ಕಾಗಿ ದೂರು ನೀಡಿಲ್ಲ, ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಪ್ರತಿಪಕ್ಷಕ್ಕೆ ಸಿಗುತ್ತಿದ್ದ 40 ಪರ್ಸೆಂಟ್ ನಿಂತು ಹೋಯಿತಲ್ಲ ಎಂಬ ಸಂಕಟದಿಂದ ನಮ್ಮ ಸರ್ಕಾರದ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಕಾಂಗ್ರೆಸ್ಸಿಗರು ಆಕ್ಷೇಪ ವ್ಯಕ್ತಪಡಿಸಿದಾಗ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ನಮ್ಮ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಕಾಂಗ್ರೆಸ್ಸಿಗರ ಮಾತುಗಳೇ ದೊಡ್ಡ ಸುಳ್ಳು. ಕಾಂಗ್ರೆಸ್ ಅವಧಿಯಲ್ಲಿ ಗೋಲಿಬಾರ್‌ನಿಂದ ಅತಿ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. 3800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬಂದಾಗ ಸುಮಾರು ಒಂದು ಸಾವಿರದಷ್ಟುರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆ ಬಂದಾಗ ಕಾಂಗ್ರೆಸ್ಸಿಗೆ ರೈತರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡುವುದಲ್ಲ. ಯಾವುದೇ ದಾಖಲೆಗಳಿದ್ದರೆ ನೇರವಾಗಿ ನೀಡಬೇಕು. ಭ್ರಷ್ಟಾಚಾರ ಕುರಿತು ತನಿಖೆ ಮಾಡಲು ನಾವು ಸಿದ್ಧವಿದ್ದೇವೆ. ಹಾಲು, ಹಾಲಾಗಲಿ- ನೀರು, ನೀರಾಗಲಿ. ರಾಜ್ಯಪಾಲರ ಭಾಷಣದ ಮೇಲೆ ಪ್ರತಿಪಕ್ಷ ನಾಯಕರು ಮಾತನಾಡಿಲ್ಲ. ಕೇವಲ ಟೀಕೆ ಮಾಡಬೇಕು ಎಂಬ ಕಾರಣಕ್ಕಾಗಿ ಟೀಕೆಗಳನ್ನು ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಸದನಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಕೂಗಾಡಿದರು. ನಮ್ಮ ಕಾಲದಲ್ಲಿ ಅಕ್ರಮಗಳಾಗಿದ್ದರೆ ತನಿಖೆಗೆ ವಹಿಸಿ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಬಿಎಂಪಿಯಲ್ಲಿ ನಡೆದ ಅಕ್ರಮಗಳು ಸೇರಿದಂತೆ ಕಾಂಗ್ರೆಸ್ ಅವಧಿಯಲ್ಲಿ ನಡೆದ ಅವ್ಯವಹಾರಗಳ ಕುರಿತು ಎಸಿಬಿಯಲ್ಲಿ ಹಲವು ದೂರುಗಳು ದಾಖಲಾಗಿವೆ. ಅದನ್ನು ತನಿಖೆ ಮಾಡಲು ಅಂದಿನ ಸರ್ಕಾರ ಮುಂದೆ ಹೋಗಿಲ್ಲ. ಎಸಿಬಿ ರಚನೆ ಮಾಡಿ ಲೋಕಾಯುಕ್ತವನ್ನು ನಿಷ್ಕಿ್ರಯಗೊಳಿಸಿದೆ. ಈಗ ನಾವು ತನಿಖೆಯಾಗದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಉತ್ತಮ ಉದ್ದೇಶವನ್ನಿಟ್ಟುಕೊಂಡು ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ನ್ಯಾ.ನಾಗಮೋಹನ್ ದಾಸ್ ವರದಿ ಬಂದರೂ ಒಂದೂವರೆ ವರ್ಷ ಏನೂ ಆಗಿರಲಿಲ್ಲ. ನಾವು ಬದ್ಧತೆಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಸಾಮಾಜಿಕ ನ್ಯಾಯ ಕೇವಲ ಭಾಷಣವಾಗಬಾರದು. ಅದು ಕಾರ್ಯರೂಪದಲ್ಲಿ ಕಾಣಬೇಕು. ನಾವು ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಮತ್ತೊಮ್ಮೆ ಜನಬೆಂಬಲ ಸಿಗುವ ವಿಶ್ವಾಸ ನಮಗಿದೆ ಎಂದರು.
ಈಡಿಗ- ಬಿಲ್ಲವರಿಗೆ ಗುಡ್ ನ್ಯೂಸ್: ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದ ಸರ್ಕಾರ
ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ:
ಐದು ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಕೆ ಮಾಡಿಲ್ಲ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ 173 ಭರವಸೆಗಳನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಐದು ವರ್ಷ ಆಡಳಿತ ನಡೆಸಿದ ವೇಳೆ ಕೇವಲ 67 ಭರವಸೆಗಳನ್ನು ಮಾತ್ರ ಈಡೇರಿಕೆ ಮಾಡಿದೆ. ಕೇವಲ ಶೇ.38ರಷ್ಟುಮಾತ್ರ ಆಶ್ವಾಸನೆಗಳನ್ನು ಪೂರೈಸಿದೆ. ಪ್ರತಿ ಪಂಚಾಯಿತಿಯಲ್ಲಿ ಪಶು ಆಸ್ಪತ್ರೆ, ಸ್ಲಂ ಮುಕ್ತ ಪ್ರದೇಶ, 100 ಕಿ.ಮೀ.ಗೆ ಒಂದು ಟ್ರಾಮಾ ಸೆಂಟರ್, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು, ಸ್ತ್ರೀಶಕ್ತಿ ಭವನ ಸೇರಿದಂತೆ ಹಲವು ಆಶ್ವಾಸನೆಗಳು ಎಲ್ಲಿ ಈಡೇರಿವೆ. ಮಾತಿಗೆ ತಪ್ಪಿದ ಕಾಂಗ್ರೆಸ್ಸಿಗರು ನಮಗೆ ಹೇಳುತ್ತಾರೆ ಎಂದು ಮುಖ್ಯಮಂತ್ರಿಗಳು ಲೇವಡಿ ಮಾಡಿದರು.