Asianet Suvarna News Asianet Suvarna News

ನಟ ಶಿವಣ್ಣರನ್ನು 'ಚೆಲುವ ಚಾಮರಾಜನಗರ ಬ್ರ್ಯಾಂಡ್'ಗೆ ರಾಯಭಾರಿಯಾಗಿ ನೇಮಿಸಲು ಒತ್ತಾಯ: ಇಲ್ಲದಿದ್ರೆ ಹೋರಾಟದ ಎಚ್ಚರಿಕೆ

ಚಾಮರಾಜನಗರ ಜಿಲ್ಲೆ ಎಂದ್ರೆ ಸಂಸ್ಕೃತಿ ಹಾಗೂ ಪ್ರಕೃತಿಯ ಅದ್ಭುತ ಸಮಾಗಮ. ಆದರೆ ಇಲ್ಲಿನ ಪ್ರಾಕೃತಿಕ ಸೌಂದರ್ಯ ಹಾಗೂ ಪ್ರವಾಸಿ ತಾಣಗಳು ಸರಿಯಾದ ರೀತಿಯಲ್ಲಿ ಬಿಂಬಿತವಾಗಿಲ್ಲ.
 

The push to appoint actor Shivarajkumar as the ambassador of the Cheluva Chamarajanagara brand has started gvd
Author
First Published Aug 13, 2024, 6:27 PM IST | Last Updated Aug 13, 2024, 6:27 PM IST

ವರದಿ: ಪುಟ್ಟರಾಜು.ಆರ್.ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.13): ಚಾಮರಾಜನಗರ ಜಿಲ್ಲೆ ಎಂದ್ರೆ ಸಂಸ್ಕೃತಿ ಹಾಗೂ ಪ್ರಕೃತಿಯ ಅದ್ಭುತ ಸಮಾಗಮ. ಆದರೆ ಇಲ್ಲಿನ ಪ್ರಾಕೃತಿಕ ಸೌಂದರ್ಯ ಹಾಗೂ ಪ್ರವಾಸಿ ತಾಣಗಳು ಸರಿಯಾದ ರೀತಿಯಲ್ಲಿ ಬಿಂಬಿತವಾಗಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಚಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ  ಪ್ರಮೋಷನ್ ವಿಡಿಯೋ ಜಿಲ್ಲಾಡಳಿತ ಸಿದ್ದಪಡಿಸಿತ್ತು. ಪುನೀತ್ ನಿಧನದ ಬಳಿಕ ಇದೀಗ ಡಾ ರಾಜ್ ಕುಟುಂಬದ ಮತ್ತೊಬ್ಬರನ್ನೂ ಬ್ರ್ಯಾಂಡ್ ಅಂಬಾಸಿಡರ್ ಮಾಡುವಂತೆ ಕೂಗು ಎದ್ದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. 

ಇದು ಪೂರ್ವ, ಪಶ್ಚಿಮ ಘಟ್ಟಗಳ ಬೆಸುಗೆಯ ವಿಶಿಷ್ಟ ತಾಣವಾದ ಚಾಮರಾಜನಗರ ಜಿಲ್ಲೆ ಪಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ  ಪರಂಪರೆ ಹೊಂದಿರುವ ಕೆಲವೇ ಜಿಲ್ಲೆಗಳ ಪೈಕಿ ಚಾಮರಾಜನಗರ ಕೂಡ ಒಂದು. ಬಂಡೀಪುರ ಹುಲಿರಕ್ಷಿತಾರಣ್ಯ, ಬಿ.ಆರ್.ಟಿ. ಹುಲಿರಕ್ಷಿತಾರಣ್ಯ, ಮಲೆ ಮಹದೇಶ್ವರ ವನ್ಯಧಾಮ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತ  ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ,ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಇತಿಹಾಸ ಸಾರುವ  ಹತ್ತಾರು ಪಾರಂಪರಿಕ ಸ್ಥಳಿಗಳಿವೆ, ಗೊರವರ ಕುಣಿತ, ನೀಲಗಾರರ ಪರಂಪರೆ, ಬುಡಕಟ್ಟು ಸೋಲಿಗರ ಗೊರುಕನ ಕುಣಿತದಂತಹ  ಜಾನಪದ ಕಲೆಗಳ ಕಣಜವಾಗಿದೆ.

ಆದರೆ ಈ ಎಲ್ಲಾ ಪಾಕೃತಿಕ ಸೌಂದರ್ಯ ತಾಣಗಳು, ಜಾನಪದ ಕಲೆಗಳು ಹೊರ ಜಗತ್ತಿನಲ್ಲಿ ಹೆಚ್ಚಾಗಿ ಬಿಂಬಿತವಾಗಿಲ್ಲ. ಜಿಲ್ಲಾಡಳಿತ ಚೆಲುವ ಚಾಮರಾಜನಗರ ಎಂಬ ಜಿಲ್ಲಾ ಪ್ರವಾಸಿ ತಾಣಗಳ  ಕೈಪಿಡಿ ಹೊರತಂದು,ಇದೀಗಾ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಚಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ  ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿತ್ತು.ಆದ್ರೆ ನಟ ಪುನೀತ್ ಅಕಾಲಿಕ ನಿಧನದಿಂದ ಈ ಯೋಜನೆ ಜಾರಿಗೆ ಹಿನ್ನಡೆಯಾಯಿತು.ಇದೀಗ ಮತ್ತೇ ಚಾಮರಾಜನಗರದಲ್ಲಿ ಡಾ ರಾಜ್ ಕುಟುಂಬದ ಕುಡಿ ನಟ ಶಿವರಾಜ್ ಕುಮಾರ್ ಅವರನ್ನು ಚಲುವ ಚಾಮರಾಜನಗರ ರಾಯಭಾರಿ ಮಾಡುವಂತೆ ಅಭಿಮಾನಿಗಳಿಂದ ಕೂಗು ಎದ್ದಿದೆ. ಇನ್ನೂ ಚಾಮರಾಜನಗರ ಡಾ ರಾಜ್ ತವರೂರು.

Love Failure: ಆಳ್ವಾಸ್ ಕಾಲೇಜಿನ ಕ್ಲಾಸ್‌ ರೂಮ್‌ಗೆ ನುಗ್ಗಿ ಯುವತಿಗೆ ಕತ್ತರಿಯಲ್ಲಿ ಇರಿದ ಪಾಗಲ್ ಪ್ರೇಮಿ!

ತವರೂರಿನ ಋಣ ತೀರಿಸಲು ನಟ ಪುನೀತ್ ರಾಯಭಾರಿಯಾಗಲೂ ಮನಸ್ಸು ಮಾಡಿದರು.ಆದ್ರೆ ಅಕಾಲಿನ ನಿಧನದಿಂದ ಅವರ ಆಸೆಯೂ ಈಡೇರಲಿಲ್ಲ.ನಟ ಪುನೀತ್ ಬದಲೂ ಡಾ ಶಿವರಾಜ್ ಕುಮಾರ್ ರಾಯಭಾರಿಯಾಗಲೂ ರೆಡಿ ಎಂದಿದ್ದರು.ಈ ಮಧ್ಯೆ ಶಿವರಾಜ್ ಕುಮಾರ್ ಅಷ್ಟೇ ಅಲ್ಲದೇ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೇಮಕ ಮಾಡಿದ್ರೂ ಕೂಡ ಪ್ರವಾಸೋದ್ಯಮ ದೃಷ್ಟಿಯಿಂದ ಅನುಕೂಲವಾಗುತ್ತೆ ಅನ್ನೋ ಅಭಿಪ್ರಾಯ ಕೂಡ ಅಭಿಮಾನಿಗಳಿಂದ ವ್ಯಕ್ತವಾಗ್ತಿದೆ. ಒಟ್ನಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಚಾಮರಾಜನಗರದ ರಾಯಭಾರಿಯಾಗಲೂ ಶಿವಣ್ಣ ಹಿಂದೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿ ಶಿವಣ್ಣ ಅಥವಾ ಅಶ್ವಿನಿ ಇಬ್ಬರಲ್ಲಿ ಒಬ್ಬರನ್ನು ರಾಯಭಾರಿಯಾಗಿಸಲೂ ಮನಸ್ಸು ಮಾಡಲಿ ಅನ್ನೋದು ದೊಡ್ಮನೆ  ಅಭಿಮಾನಿಗಳ ಆಶಯವಾಗಿದೆ.

Latest Videos
Follow Us:
Download App:
  • android
  • ios