ವಿರಕ್ತಮಠದ ಆಸ್ತಿ ದಾಖಲೆಯಲ್ಲೂ ‘ವಕ್ಫ್‌’ ಹೆಸರು: ಸಂಸದ ಗೋವಿಂದ ಕಾರಜೋಳ ಹೇಳಿದ್ದೇನು?

ವಿಜಯಪುರ ಜಿಲ್ಲೆ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ಕೂಡ ವಕ್ಫ್‌ ಬೋರ್ಡ್ ಆಸ್ತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಿರಕ್ತಮಠದ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಹೆಸರು ಸೇರ್ಪಡೆಯಾಗಿರುವುದು ಶ್ರೀಗಳು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 

The name of Waqf is also in the Property record of Viraktamatha gvd

ಸಿಂದಗಿ (ಅ.30): ವಿಜಯಪುರ ಜಿಲ್ಲೆ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ಕೂಡ ವಕ್ಫ್‌ ಬೋರ್ಡ್ ಆಸ್ತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಿರಕ್ತಮಠದ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಹೆಸರು ಸೇರ್ಪಡೆಯಾಗಿರುವುದು ಶ್ರೀಗಳು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿರಕ್ತಮಠದ ಸರ್ವೇ ನಂಬರ್ 1020ರ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರ್ಪಡೆಯಾಗಿದೆ. 2018-19ರಲ್ಲಿಯೇ ಪಹಣಿಯ ಕಾಲಂ 11ರಲ್ಲಿ ‘ಸಿಂದಗಿ ಸುನ್ನಿ ವಕ್ಫ್‌ ಆಸ್ತಿ’ ಎಂದು ಹೆಸರು ಸೇರ್ಪಡೆಯಾಗಿದೆ. ಸಾಲಕ್ಕಾಗಿ ಹೊಸ ಉತಾರೆ ತೆಗೆದಾಗ ವಕ್ಫ್‌ ಹೆಸರು ಸೇರ್ಪಡೆ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ನೋಟಿಸ್ ನೀಡದೆಯೇ ವಕ್ಫ್‌ ಹೆಸರು ಸೇರ್ಪಡೆಯಾಗಿದೆ.

ಶ್ರೀಗಳ ಆಕ್ರೋಶ: ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಿಂದಗಿ ವಿರಕ್ತಮಠದ ಬಸವಪ್ರಭು ಮಹಾಸ್ವಾಮಿಯವರು, ಬಸವಣ್ಣನವರ ಕಾಲದಿಂದಲೇ ರಾಣಿ ಅಬ್ಬಕ್ಕನಿಂದ ಬಳುವಳಿಯಾಗಿ ಬಂದ ಮಠದ ಆಸ್ತಿಯನ್ನು ನಿನ್ನೆ ಮೊನ್ನೆ ಹುಟ್ಟಿಕೊಂಡ ವಕ್ಫ್‌ ಬೋರ್ಡ್ ತನ್ನ ಹೆಸರಿಗೆ ಪರಭಾರೆ ಮಾಡಿಕೊಳ್ಳುತ್ತದೆ ಎಂದರೆ ಇದು ಅನ್ಯಾಯದ ಪರಮಾವಧಿ. ಅಲ್ಲದೇ ರೈತರು, ಸಾರ್ವಜನಿಕರು ತಮ್ಮ ಆಸ್ತಿ ಯಾವಾಗ ಯಾರು ಕೊಳ್ಳೆ ಹೊಡೆಯುತ್ತಾರೋ ಎನ್ನುವ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇದಕ್ಕೆ ಸರ್ಕಾರವೇ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿ ಒಂದೇ ವರ್ಷ 2 ಲಕ್ಷ ಕಿರಾಣಿ ಅಂಗಡಿ ಬಂದ್‌: ಅಧ್ಯಯನದಲ್ಲಿ ಬೆಳಕಿಗೆ!

ಶ್ರೀಗಳಿಗೆ ಗೊತ್ತಿಲ್ಲದೆಯೇ ಹೆಸರು ಬದಲು: ಈ ಮಧ್ಯೆ, ಮಂಗಳವಾರ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ಸಂಸದ ಗೋವಿಂದ ಕಾರಜೋಳ, ಈ ಕುರಿತು ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, 2019ರ ಜನವರಿಯಲ್ಲಿಯೇ ಮಠದ ಆಸ್ತಿ ಬದಲಾವಣೆ ಮಾಡಿದ್ದಾರೆ. ಆದರೆ, ಶ್ರೀಗಳಿಗೆ ಗೊತ್ತಿಲ್ಲ. ಆಸ್ತಿ ಸರ್ವೇ ನಂ.1020ರಲ್ಲಿ 1.36 ಎಕರೆ ಉತಾರಿಯಲ್ಲಿ ದಾಖಲು ತೋರಿಸಿದ್ದಾರೆ. ಹೀಗಾಗಿ, ಜಿಲ್ಲಾ ಸಚಿವರು ಮೌಖಿಕವಾಗಿ ಕ್ರಮ ಕೈಗೊಳ್ಳಿ ಎಂದು ಹೇಳಿದಾಗ ಕ್ರಮ ಕೈಗೊಳ್ಳುವ ನೈತಿಕತೆ ಯಾವ ಅಧಿಕಾರಿಯೂ ಇರುವುದಿಲ್ಲ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios