ಮಾಯಾ ಲೋಕದ ಕಲ್ಪನೆ ಸೃಷ್ಟಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ ಈಗ ಎರಡೂವರೆ ತಿಂಗಳಿಂದ ಗೊಂದಲಮಯ ಭ್ರಮಾ ಲೋಕ ಸೃಷ್ಟಿಸಿದೆ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯವಾಡಿದರು.

ಶಿರಸಿ (ಜು.26) :  ಮಾಯಾ ಲೋಕದ ಕಲ್ಪನೆ ಸೃಷ್ಟಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ ಈಗ ಎರಡೂವರೆ ತಿಂಗಳಿಂದ ಗೊಂದಲಮಯ ಭ್ರಮಾ ಲೋಕ ಸೃಷ್ಟಿಸಿದೆ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯವಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಗಳಿಕೆಯ ಹಂಬಲದಲ್ಲಿ ಬಡವರನ್ನು ಇನ್ನಷ್ಟುಕಷ್ಟಕ್ಕೆ ನೂಕಿದ್ದಾರೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಬದುಕು ಇನ್ನಷ್ಟುಕಠಿಣವಾಗಿದೆ ಎಂದರು.

ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ

ಸರ್ಕಾರದ ಆಡಳಿತ ಗೊಂದಲದ ಗೂಡಾಗಿದೆ. ಸ್ಪಷ್ಟತೆ, ಪಾರದರ್ಶಕತೆ ಇಲ್ಲ. ಬೆಲೆ ಏರಿಕೆ ಒಂದೆಡೆಯಾದರೆ, ಅಭಿವೃದ್ಧಿ ಶೂನ್ಯ. ಅವರ ಗ್ಯಾರಂಟಿಗಳೇ ಗೊಂದಲಮಯವಾಗಿವೆ. ಉಳಿದ ಮಂತ್ರಿಗಳು ತಮ್ಮ ಇಲಾಖೆಯ ಕಾರ್ಯವಿಧಾನವನ್ನು ಸಹ ಇದುವರೆಗೆ ತಿಳಿದುಕೊಂಡಿಲ್ಲ. ಚುನಾವಣೆ ಪೂರ್ವ ಹೇಳಿದಂತೆ ಯಾವ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. 200 ಯುನಿಟ್‌ ಫ್ರೀ ವಿದ್ಯುತ್‌ ಎಂಬ ಭರವಸೆ ಅವರದ್ದಾಗಿತ್ತಾದರೂ, ವಿದ್ಯುತ್‌ ದರವನ್ನು ಎರಡು ಪಟ್ಟು ಏರಿಕೆ ಮಾಡಿದ್ದಾರೆ. ವಿದ್ಯುತ್‌ ಬಿಲ್‌ ನಿರೀಕ್ಷೆಗೂ ಮೀರಿ ಬರುತ್ತಿದೆ. ಇದರಿಂದಾಗಿ ಸಣ್ಣ ಕೈಗಾರಿಕೆ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.

ಪೂರ್ವ ಸಿದ್ಧತೆ ಇಲ್ಲದೇ..

ಉಚಿತ ಬಸ್‌ ಆರಂಭಿಸುವ ಮುನ್ನ ಸೂಕ್ತ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿಲ್ಲ. ಹೆಚ್ಚುವರಿ ಚಾಲಕ-ನಿರ್ವಾಹಕರನ್ನು ಸಂಸ್ಥೆಗೆ ನೀಡಿಲ್ಲ. ಖಾಸಗಿ ವಾಹನ ಪರಿಸ್ಥಿತಿ ಏನು ಎಂದು ಅರಿಯದೇ ಯೋಜನೆ ಜಾರಿಗೆ ತಂದಿದ್ದಾರೆ. ಆಟೋ, ಬಾಡಿಗೆ ವಾಹನಕ್ಕೆ ಸಮಸ್ಯೆ ಆಗಿದೆ. ಇನ್ನೊಂದೆಡೆ ಗೃಹ ಲಕ್ಷ್ಮೀ ಸರ್ವರ್‌ ಸರಿ ಇಲ್ಲ. ಕಾಂಗ್ರೆಸ್‌ ಈಗ ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯೂಸಿ ಆಗಿದೆ. ಆರಂಭದಲ್ಲಿಯೇ ಈ ರೀತಿ ಭ್ರಷ್ಟಾಚಾರ ಆರಂಭ ಆಗಿರುವುದು ಆತಂಕಕಾರಿಯಾಗಿದೆ ಎಂದರು.

ಕಿಸಾನ ಸಮ್ಮಾನ ಯೋಜನೆ ವಾಪಸ್‌ ಪಡೆದು ರೈತರ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತೀರಿ? ವಿದ್ಯಾನಿಧಿ ಏಕೆ ಸ್ಥಗಿತಗೊಳಿಸಬೇಕಿತ್ತು? ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜಾರಿಗೆ ತರುವಲ್ಲಿಯೂ ರಾಜ್ಯ ಸರ್ಕಾರ ವಿಳಂಬ ಮಾಡಿದ್ದು, ಬೆಳೆಹಾನಿಯಾದ ರೈತರಿಗೆ ಯಾವುದೇ ಪರಿಹಾರ ಇಲ್ಲದಂತಾಗಿದೆ ಎಂದು ವಿಷಾಧಿಸಿದರು.

ಇನ್ನೊಂದೆಡೆ ಮದ್ಯ ಮಾರಾಟ ದರ, ಮೋಟಾರ್‌ ವಾಹನದ ಟ್ಯಾP್ಸ… ಏರಿಸಿದ್ದಾರೆ. ಶಾಲಾ ವಾಹನದ ಟ್ಯಾP್ಸ… ಸಹ ಮನಸೋ ಇಚ್ಛೇ ಏರಿಸಿದ್ದಾರೆ. ಬಡವರಿಗೆ ಅಕ್ಕಿ ಕೊಡುವ ಆಸಕ್ತಿಯೂ ಸರ್ಕಾರಕ್ಕಿಲ್ಲ. ಪ್ರಾಮಾಣಿಕವಾಗಿ ಅಕ್ಕಿ ಕೊಡಬೇಕೆಂಬ ಹಂಬಲ ಇದ್ದರೆ ಕೇಂದ್ರದ ಆಹಾರ ಸಚಿವರನ್ನು ಆರಂಭದಲ್ಲಿಯೇ ಹೋಗಿ ಭೇಟಿ ಮಾಡಬೇಕಿತ್ತು. ಅತಿವೃಷ್ಟಿಹಾನಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಎನ್‌ಡಿಆರ್‌ಎಫ್‌ ಹಣ ಒಂದರಿಂದಲೇ ಈಗ ಪರಿಹಾರ ನೀಡುವಂತಾಗಿದೆ ಎಂದ ಅವರು, ಸಭಾಧ್ಯಕ್ಷನಾಗಿ ನಾನು ಕ್ಷೇತ್ರದಲ್ಲಿ ಆರಂಭಿಸಿದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಗೇರಿ ಆಗ್ರಹಿಸಿದರು.

ಪ್ರತಿ ಪಕ್ಷ ನಾಯಕನ ಆಯ್ಕೆಯಲ್ಲಿ ಕೇಂದ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದ ಆಗು ಹೋಗು ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಕಾಗೇರಿ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು ಎಸಳೆ, ನಂದನ ಸಾಗರ, ಆರ್‌.ಡಿ. ಹೆಗಡೆ, ಗಣಪತಿ ನಾಯ್ಕ, ಸದಾನಂದ ಭಟ್‌, ರವಿ ಹೆಗಡೆ ಇದ್ದರು.

ನೈತಿಕತೆ ಬಗ್ಗೆ ಮಾತು ಸಾಲದು, ನೈಸ್‌ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ

ಡಿ.ಕೆ. ಶಿವಕುಮಾರ ಸರ್ಕಾರ ಕೆಡವಲು ಯಾರು ಪ್ರಯತ್ನ ಮಾಡ್ತಿದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿ. ಅವರ ಹೇಳಿಕೆ ಜವಾಬ್ದಾರಿ ಸ್ಥಾನದ ಲಕ್ಷಣ ಅಲ್ಲ. ಕಾಂಗ್ರೆಸ್‌ ಒಳಗಿನಿಂದಲೇ ಅಭದ್ರತೆ ನಿರ್ಮಾಣ ಆಗುತ್ತಿದೆ. ಇದನ್ನು ಬೇರೆಯವರ ಮೇಲೆ ತಿರುಗಿಸಿ ತಮಾಸೆಯ ಆಡಳಿತ ಮಾಡುವುದು ಕಾಂಗ್ರೆಸ್‌ ರೂಢಿಯಾಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ವೀಕರ್‌