ಚಾರಣಕ್ಕೆ ಹೋಗಿ ದಾರಿ ಕಾಣದೆ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದ 9 ಕಾಲೇಜು ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ರಕ್ಷಣೆ ಮಾಡಿದ್ದಾರೆ.

ಬೆಳಗಾವಿ (ಡಿ.30): ಚಾರಣಕ್ಕೆ ಹೋಗಿ ದಾರಿ ಕಾಣದೆ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದ 9 ಕಾಲೇಜು ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ರಕ್ಷಣೆ ಮಾಡಿದ್ದಾರೆ.

ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಾವಾಣಿ ಫಾಲ್ಸ್ ನೋಡಲು ಹೋಗಿದ್ದ ಬೆಳಗಾವಿ ಜಿಎಸ್‌ಎಸ್ ಕಾಲೇಜಿನ 9 ವಿದ್ಯಾರ್ಥಿಗಳು. ಪಾರವಾಡ ಗ್ರಾಮದಿಂದ ಮೂರು ಕಿ.ಮೀ ದೂರದವರೆಗೆ ಬೈಕ್ ಮೇಲೆ ತೆರಳಿದ್ದ ಯುವಕರು ಬಳಿಕ ಕಾಲು ದಾರಿಯಲ್ಲೇ ಕಣಕುಂಬಿ ಅರಣ್ಯ ಪ್ರದೇಶದ ಜಾವಾಣಿ ಫಾಲ್ಸ್‌ವರೆಗೆ ಹೋಗಿ ಎಂಜಾಯ್ ಮಾಡಿದ್ದರು. ಆದರೆ ನಿನ್ನೆ ಸಂಜೆಯ ಹೊತ್ತಿಗೆ ಕತ್ತಲಾವರಿಸಿದ್ದರಿಂದ ಮರಳಿ ಬರುವಾಗ ದಾರಿ ಗೊತ್ತಾಗದೇ ದಟ್ಟ ಕಾಡಿನಲ್ಲೇ ಯುವಕರು ಕಣ್ಮರೆಯಾಗಿದ್ದರು.

ಸ್ನೇಹಿತನ ಜೊತೆ ಚಾರಣಕ್ಕೆ ಬಂದು ನಾಪತ್ತೆ ಪ್ರಕರಣ; 4 ದಿನಗಳ ಬಳಿಕ ಶವವಾಗಿ ಪತ್ತೆ!

ಕಾಡಿನಲ್ಲಿ ದಾರಿ ತಪ್ಪಿರುವುದು ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಮೊಬೈಲ್ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದರು. ವಿದ್ಯಾರ್ಥಿಗಳು ಕುಟುಂಬಸ್ಥರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿ ರಾತ್ರಿಯಿಡಿ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಖಾನಾಪುರ ‌ಎಸಿಎಫ್ ಸಂತೋಷ ಚಹ್ವಾನ್ ಮಾರ್ಗದರ್ಶನದಲ್ಲಿ ಕಣಕುಂಬಿ ‌ಆರ್‌ಎಫ್‌ಒ ಶಿವಕುಮಾರ್, ಭೀಮಗಡ ಆರ್‌ಎಫ್ಒ ರಾಕೇಶ, ಖಾನಾಪುರ ಆರ್‌ಎಫ್ಒ ನಾಗರಾಜ, ಡಿಆರ್‌ಎಫ್‌ಒ‌ ವಿನಾಯಕ ಪಾಟೀಲ, ಗೋವಾದ ಮಹಾದಾಯಿ ವೈಲ್ಡ್ ಲೈಫ್ ಡಿಎಫ್‌ಒ ಆನಂದ ಒಟ್ಟು ಮೂವತ್ತು ಸಿಬ್ಬಂದಿಯಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಶೋಧಕಾರ್ಯ ನಡೆಸಲಾಗಿತ್ತು ಕೊನೆಗೂ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ. 

ಉಳ್ಳಾಲ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು!

ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅರಣ್ಯಾಧಿಕಾರಿಗಳು.