Asianet Suvarna News Asianet Suvarna News

ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ: ವಿಸಿ ಭೇಟಿಯಾದ ನಿಯೋಗ !

ಮಂಗಳೂರು ವಿವಿಯ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಉಪಕುಲಪತಿ ಅನುಮತಿ ವಿಚಾರ ಸಂಬಂಧಿಸಿ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. 

The delegation met the VC against ganeshutsava at Mangala Auditorium at mangaluru rav
Author
First Published Sep 7, 2023, 2:30 PM IST

ಮಂಗಳೂರು: ಮಂಗಳೂರು ವಿವಿಯ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಉಪಕುಲಪತಿ ಅನುಮತಿ ವಿಚಾರ ಸಂಬಂಧಿಸಿ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. 

ವಿವಿ ಉಪಕುಲಪತಿ ಜಯರಾಜ್ ಅಮೀನ್ ಭೇಟಿಯಾದ ಸಮಾನ ಮನಸ್ಕರ ನಿಯೋಗ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಮುಖಂಡರು, ಎನ್ಎಸ್ ಯುಐ, ಡಿವೈಎಫ್ಐ ಹಾಗೂ ಮಾಜಿ ಸಿಂಡಿಕೇಟ್ ಸದಸ್ಯರು ಭೇಟಿಯಾಗಿದ್ದಾರೆ. ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್, ಎನ್ಎಸ್ ಯುಐ ಮುಖಂಡ ಸುಹಾನ್ ಆಳ್ವ ನೇತೃತ್ವದ ನಿಯೋಗ ಉಪಕುಲಪತಿ ಭೇಟಿಯಾಗಿ ಚರ್ಚಿಸಿದೆ. 

ವಿವಿಗೆ ಅದರದ್ದೇ ಆದ ಗೌರವ ಹಾಗೂ ನಿಯಮ ಇದೆ. ಸಂವಿಧಾನದ ಅಡಿಪಾಯ ಕೂಡ ಇದೆ, ಅಲ್ಲಿ ಧಾರ್ಮಿಕ ಆಚರಣೆ ಸರಿಯಲ್ಲ‌. ಈ ಹಿಂದೆ ವಿವಿಯ ಹಾಸ್ಟೆಲ್ ನಲ್ಲಿ ಗಣೇಶೋತ್ಸವ ಆಚರಣೆ ಆಗ್ತಿತ್ತು. ಆದರೆ ಈಗ ಮಂಗಳ ಆಡಿಟೋರಿಯಂನಲ್ಲೇ ಆಗಬೇಕು ಅನ್ನೋದು ಸರಿಯಲ್ಲ. ಶಾಸಕ ವೇದವ್ಯಾಸ ಕಾಮತ್ ವಿವಿಯ ಉಪಕುಲಪತಿ ಕಚೇರಿಗೆ ಬಂದು ಗೂಂಡಾಗಿರಿ ಮಾಡಿದ್ದಾರೆ. ದಬ್ಬಾಳಿಕೆ ಎಸಗಿ ಉತ್ತರ ಭಾರತದ ಮಾದರಿಯಲ್ಲಿ ಬೆದರಿಕೆ ಹಾಕಿದ್ದಾರೆ. ವಿವಿಯೇ ಗಣೇಶೋತ್ಸವ ಆಚರಿಸಬೇಕು, ಹಣ ಕೊಡಬೇಕು ಅನ್ನೋದು ಸರಿಯಲ್ಲ. ಸದ್ಯ ಒತ್ತಡಕ್ಕೆ ಬಿದ್ದ ಉಪಕುಲಪತಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್: ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿ!

ವಿವಿಯೇ ದುಡ್ಡು ಕೊಟ್ಟು ಗಣೇಶೋತ್ಸವ ಆಚರಿಸಬೇಕು ಅನ್ನೋದು ಸರಿಯಲ್ಲ. ಶಾಸಕ ವೇದವ್ಯಾಸ ಕಾಮತ್ ಗೂಂಡಾಗಿರಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಸದ್ಯ ಉಪಕುಲಪತಿ ತುಂಬಾ ಒತ್ತಡಕ್ಕೆ ಒಳಗಾಗಿದ್ದಾರೆ. ಮಂಗಳಾ ಆಡಿಟೋರಿಯಂನಲ್ಲೇ ಮಾಡಬೇಕು ಅನ್ನೋದು ತಪ್ಪು. ಸದ್ಯ ಅವರು ಮಂಗಳಾ ಆಡಿಟೋರಿಯಂನ ಒಳಾಂಗಣದಲ್ಲಿ ಮಾಡುವುದು ಅಂತಿದಾರೆ. ಈಗ ವಿಸಿ ಬೆದರಿಕೆ ಮತ್ತು ಒತ್ತಡಕ್ಕೆ ಒಳಗಾಗಿ ಈ ತೀರ್ಮಾನ ಮಾಡಿದ್ದಾರೆ. ನಾವು ಇದನ್ನ ಖಂಡಿಸ್ತೇವೆ, ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

 ಸರ್ಕಾರ ಎಲ್ಲಿ ಮಾಡಬೇಕು ಅನ್ನೋದನ್ನ ತೀರ್ಮಾನ ಮಾಡಲಿ. ಈಗ ಮಂಗಳ ಆಡಿಟೋರಿಯಂನಲ್ಲಿ ಮಾಡ್ತಾರೆ ಅಂದ್ರೆ ಇದು ಶಾಸಕರ ಗೂಂಡಾಗಿರಿಗೆ‌ ಬೆದರಿದ ಹಾಗೆ ಆಗುತ್ತೆ. ಸರ್ಕಾರ ಹಾಗೂ ದ.ಕ ಜಿಲ್ಲಾಧಿಕಾರಿ ತಕ್ಷಣ ಮಧ್ಯ ಪ್ರವೇಶ ಮಾಡಲಿ. ಜೊತೆಗೆ ವಿಸಿ ಚೇಂಬರ್ ನ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಲಿ. ಇದರಲ್ಲಿ ಶಾಸಕ ವೇದವ್ಯಾಸ ಕಾಮತ್ ಗೂಂಡಾಗಿರಿ ಗೊತ್ತಾಗಲಿದೆ. ಸದ್ಯ ಸರ್ಕಾರಕ್ಕೆ ವಿಸಿ ಪತ್ರ ಬರೆದ ಕಾರಣ ಅದರಂತೆ ನಿರ್ಧಾರಕ್ಕೆ ಕಾಯಲಿ‌. ಈಗ ಅವರು ನಿರ್ಧಾರ ಮಾಡಲು ಆಗಲ್ಲ, ಪತ್ರ ಬರೆದಾಗಿದೆ ಎಂದಿದ್ದಾರೆ.

 

Follow Us:
Download App:
  • android
  • ios