ಸರ್ಕಾರದ ಅನ್ನಭಾಗ್ಯ ಯೋಜನೆ ಯಶಸ್ವಿ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು (ಜೂ.24) : ಸರ್ಕಾರದ ಅನ್ನಭಾಗ್ಯ ಯೋಜನೆ ಯಶಸ್ವಿ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಕ್ಕಿ ಕೊಡುವಂತೆ ನಾವೇನೂ ಪುಕ್ಕಟೆ ಕೇಳುತ್ತಿಲ್ಲ. ಹಣ ಕೊಡ್ತೀವಿ ಅಂದ್ರೂ ಕೊಡ್ತಿಲ್ಲ. ಬಡವರ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಕು ಅಂತಿದ್ದಾರೆ. ಅಕ್ಕಿ ಇಟ್ಟುಕೊಂಡು ಕೊಡುತ್ತಿಲ್ಲ. ಖಾಸಗಿಯವರಿಗೆ ಕೊಡ್ತಿದ್ದಾರೆ. ಇಂಥವರನ್ನು ಬಡವರ ವಿರೋಧಿ ಅನ್ನಬೇಕಾ? ಬಡವರ ಪರ ಅನ್ನಬೇಕಾ? ಜನರೇ ಯೋಚನೆ ಮಾಡಬೇಕು ಎಂದರು.

ಜೂನ್, ಜುಲೈ ಆಯ್ತು, ಈಗ ಆಗಸ್ಟ್‌ಗೆ ಮುಂದೂಡಿಕೆಯಾದ ಅನ್ನಭಾಗ್ಯ ಯೋಜನೆ

ನಮ್ಮ ಸರ್ಕಾರ ಬಡವರಿಗೆ ಅಕ್ಕಿ ಕೊಡಬೇಕು ಅದಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಜಾರಿಗೆ ತಂದಿದ್ದೇವೆ. ಅದರಂತೆ ಜುಲೈ 1 ರಿಂದ ಕೊಡಲು ತೀರ್ಮಾನ ಮಾಡಿದ್ವಿ. ಆದರೆ ಅಕ್ಕಿ ಸಿಗುತ್ತಿಲ್ಲ. ತೆಲಂಗಾಣ ದವರು ಭತ್ತ ಕೊಡ್ತೀವಿ ಎಂದರು, ಛತ್ತೀಸಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡ್ತಿವಿ ಅಂತ ಹೇಳಿದ್ದಾರೆ. ಪಂಜಾಬ್ ನವರು ನವೆಂಬರ್ ನಿಂದ ಕೊಡ್ತೀವಿ ಅಂದಿದ್ದಾರೆ.
ಹೀಗಾಗಿ NCCF ಕೇಂದ್ರಿಯ ಭಂಡಾರ, ನಫೆಡ್ ನಿಂದ ಕೊಟೆಷನ್ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ವನ್ನ ನೋಡಿಕೊಂಡು ತೀರ್ಮಾನ ಮಡ್ತೀವಿ ಎಂದರು. 

ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ರೆ ಓಪನ್ ಮಾರ್ಕೆಟ್‌ನಿಂದ ಖರೀದಿ ಮಾಡಬೇಕು ಟೆಂಡರ್ ಕರೆಯಬೇಕಾಗುತ್ತೆ ಅದಕ್ಕೆ ಸಮಯ ಬೇಕಾಗುತ್ತೆ. ರಾಗಿ, ಜೋಳ ಎರಡೆರಡು ಕೆ ಜಿ ಕೊಡಬಹುದು, ಆದರೆ ಇನ್ನೂ 3 ಕೆ ಜಿ ಅಕ್ಕಿ ಕೊಡಬೇಕಲ್ಲ. That is a problem ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಶೀಘ್ರದಲ್ಲಿಯೇ ಅಕ್ಕಿ ದರ 10 ರೂ. ಹೆಚ್ಚಳ

ಎಲ್ಲ ಸಮಸ್ಯೆ ಎದುರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ:

ನಿನ್ನೆಯಿಂದ ಮಳೆ ಬರ್ತಾ ಇದೆ. ಆದರೆ ವ್ಯಾಪಕವಾಗಿ ಬರ್ತಿಲ್ಲ. ಒಂದು ವೇಳೆ ಸಮಸ್ಯೆಯಾದ್ರೆ, ಎಲ್ಲ ಸಮಸ್ಯೆಯನ್ನ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ. ಮಳೆ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದೇವೆ ಬಿತ್ತನೆ ಕೆಲವಕಡೆ ಶುರುವಾಗಿದೆ ಕೆಲವು ಕಡೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ‌ ಎಂದು ಭರವಸೆ ನೀಡಿದರು.