ಕೋವಿಡ್ ಟೆಸ್ಟ್ ಕಡಿಮೆ ಮಾಡಿದ್ದೇವೆ: ಕಾರಣ ಕೊಟ್ಟ ಅಶ್ವತ್ಥ್ ನಾರಾಯಣ
* ರಾಜ್ಯದಲ್ಲಿ ಕೊರೋನಾ ಪರೀಕ್ಷೆಯನ್ನು ಕಡಿಮೆ ಮಾಡಲಾಗುತ್ತಿದೆ ಎನ್ನುವ ಆರೋಪ
* ಕೊರೋನಾ ಟೆಸ್ಟಿಂಗ್ ಕಡಿಮೆ ಬಗ್ಗೆ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಸ್ಪಷ್ಟನೆ
* ಕೋವಿಡ್ ಲಸಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ
ಬೆಂಗಳೂರು, (ಮೇ.12): ರಾಜ್ಯದಲ್ಲಿ ಕೊರೋನಾ ಪರೀಕ್ಷೆಯನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ಕೇಸ್‌ಗಳು ಕಡಿಮೆಯಾಗುತ್ತಿವೆ ಎನ್ನುವ ಸುದ್ದಿಗೆ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಸ್ಪಷ್ಟನೆ ಕೊಟ್ಟಿದ್ದಾರೆ.
ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೊವಿಡ್ ಟೆಸ್ಟ್ ಮಾಡುತ್ತಿದ್ದೆವು. ಇದರಿಂದ ಟೆಸ್ಟ್ ರಿಪೋರ್ಟ್ ಬರುವುದು ವಿಳಂಬವಾಗ್ತಿತ್ತು. ರಿಪೋರ್ಟ್ ಬೇಗ ಸಿಗುವಂತೆ ಮಾಡುವ ಉದ್ದೇಶದಿಂದ ರೋಗ ಲಕ್ಷಣ ಇರುವವರಿಗೆ ಮಾತ್ರ ಈಗ ಟೆಸ್ಟ್ ಮಾಡುತ್ತಿದ್ದೇವೆ. ಪಾಸಿಟಿವಿಟಿ ರೇಟ್ ಕಡಿಮೆ ತೋರಿಸಲು ಎಂಬುದು ಸುಳ್ಳು ಎಂದು ಡಾ. ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದರು.
ರೂಪಾಂತರಿ ಕಂಟ್ರೋಲ್ ಆಗದಿದ್ದರೆ ಮುಂದೆ ಅಪಾಯ!
ಕಡಿಮೆ ಟೆಸ್ಟ್ ಮಾಡಿದಾಗಲೇ ಹೆಚ್ಚು ಪಾಸಿಟಿವಿಟಿ ಇರುತ್ತೆ. ಸರ್ಕಾರ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡ್ತಿಲ್ಲ. ಬೇಗ ವರದಿ ಸಿಗಬೇಕೆಂದು ಟೆಸ್ಟ್ ಸೀಮಿತ ಮಾಡಿದ್ದೇವೆ ಅಷ್ಟೇ ಎಂದರು.
ಇನ್ನು ಲಸಿಕೆ ಬಗ್ಗೆ ಮಾತನಾಡಿದ ಡಾ. ಅಶ್ವತ್ಥ್ ನಾರಾಯಣ, ರಾಜ್ಯದಲ್ಲಿ ಹಂತ-ಹಂತವಾಗಿ ಕೊರೋನಾ ಲಸಿಕೆ ಕೊಡುತ್ತೇವೆ. ಎರಡನೇ ಡೋಸ್ ಮತ್ತು ಮೊದಲ ಡೋಸ್ ಸಮಸ್ಯೆ ಆಗ್ತಿದೆ. ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡವರಿಗೆ ಅವಕಾಶ ಮಾಡಿ ಕೊಡ್ತೇವೆ ಎಂದು ಹೇಳಿದರು.
ಮೊದಲೇ ಹಾಗೂ ಎಡನೇ ಡೋಸ್ ಲಸಿಕೆ ಪಡೆಯಲು ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನರು ಸರದಿ ಸಾಲುಗಳಲ್ಲಿ ನಿಲ್ಲತ್ತಿದ್ದಾರೆ. ಕೊನೆಗೆ ವ್ಯಾಕ್ಸಿನ್ ಸಿಗದೇ ಮನೆ ವಾಪಸ್ ಆಗುತ್ತಿದ್ದಾರೆ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಇದೀಗ ಎರಡನೇ ಡೋಸ್ ಪಡೆಯಲು ಲಸಿಕೆ ಕೊರತೆ ಎದುರಾಗಿದೆ.
ಆದ್ರೆ, ಸರ್ಕಾರದವರು ಮಾತ್ರ ಯಾವುದೇ ಲಸಿಕೆ ಕೊರತೆ ಇಲ್ಲ ಎಂದು ಹೇಳುತ್ತಿದೆ. ಕೋವಿಶೀಲ್ಡ್ ಇದೆ. ಆದ್ರೆ, ಕೋವ್ಯಾಕ್ಸಿನ್ ಕೊರತೆ ಎದುರಾಗಿದೆ. ಅತ್ತ ಕೇಂದ್ರ ಸರ್ಕಾರವೂ ಸಹ ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರು ಆಕ್ರೋಶ ವ್ಯಕಪಡಿಸುತ್ತಿದ್ದಾರೆ.