ಭಟ್ಕಳ ಮನೆಯಲ್ಲೇ ಬಾಂಬ್ ತಯಾರಿಸಿದ್ದ ಡಾಕ್ಟರ್‌: ಪಾಕ್‌ನಲ್ಲಿ ತರಬೇತಿ!

2014ರಲ್ಲಿ ಸ್ಫೋಟಕವಸ್ತು ಸಂಗ್ರಹಣೆ ಪ್ರಕರಣದಲ್ಲಿ ಭಟ್ಕಳದ ವೈದ್ಯ ಹಾಗೂ ಐಎಂ ಶಂಕಿತ ಉಗ್ರ ಸೈಯದ್ ಇಸ್ಮಾಯಿಲ್ ಅಫಾಕ್ ನನ್ನು ಸಿಸಿಬಿ ಬಂಧಿಸಿತ್ತು. ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ. ಈತನ ತಪ್ಪೊಪ್ಪಿಗೆ ಹೇಳಿಕೆ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಇದರಲ್ಲಿ ತನ್ನ ಉಗ್ರ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ. 
 

Terrorist Syed Ismail Afaq  who made the Bomb in Bhatkal's House in Uttara Kannada grg

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು(ಡಿ.19):  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ದೇಶ ಪ್ರಮುಖ ನಗರಗಳಲ್ಲಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಭಟ್ಕಳದ ಮನೆಯಲ್ಲೇ ಸ್ಫೋಟಕ ತಯಾರಿಸಿ ನೂರಾರು ಜನರನ್ನು ಬಲಿ ಪಡೆದಿದ್ದ ಸಂಗತಿಯನ್ನು ಹೋಮಿಯೋಪತಿ ವೈದ್ಯ ಬಹಿರಂಗಪಡಿಸಿದ್ದಾನೆ. 

2014ರಲ್ಲಿ ಸ್ಫೋಟಕವಸ್ತು ಸಂಗ್ರಹಣೆ ಪ್ರಕರಣದಲ್ಲಿ ಭಟ್ಕಳದ ವೈದ್ಯ ಹಾಗೂ ಐಎಂ ಶಂಕಿತ ಉಗ್ರ ಸೈಯದ್ ಇಸ್ಮಾಯಿಲ್ ಅಫಾಕ್ ನನ್ನು ಸಿಸಿಬಿ ಬಂಧಿಸಿತ್ತು. ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ. ಈತನ ತಪ್ಪೊಪ್ಪಿಗೆ ಹೇಳಿಕೆ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಇದರಲ್ಲಿ ತನ್ನ ಉಗ್ರ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ. 

ಸ್ಫೋಟಕ ಪೂರೈಕೆ: ಮೂವರು ಭಟ್ಕಳ ಉಗ್ರರು ದೋಷಿ, ಕೋರ್ಟ್‌ ತೀರ್ಪು

ತಪ್ಪೊಪ್ಪಿಗೆಯಲ್ಲಿ ಹೇಳಿದ್ದೇನು?: 

ನಾನು ಬೆಳಗಾವಿಯ ಎ.ಎಂ.ಶೇಖ್ ಕಾಲೇಜ್ ನಲ್ಲಿ ವಿಎಚ್‌ಎಂಎಸ್ ಓದಿ ಭಟ್ಕಳದಲ್ಲಿ ಸ್ವಂತ ಕ್ಲಿನಿಕ್ ನಡೆಸಿಕೊಂಡಿದ್ದೆ. ಆಗ ಪಿಎಫ್‌ಐ ಮತ್ತು ಇಂಡಿಯನ್ ಮುಜಾ ಹಿದೀನ್ ಸಂಘಟನೆ ಜತೆ ಜಿಹಾದಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. 2013ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದೆ. 2004-08 ವರೆಗೆ ಭಟ್ಕಳದಲ್ಲಿ ಐಎಂನ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಪೀಫ್, ಸುಲ್ತಾನ್ ರನ್ನು ಭೇಟಿಯಾಗಿದ್ದೆ. ಅವರ ಮನೆಯಲ್ಲೇ ನಡೆಯುತ್ತಿದ್ದ ಜಿಹಾದಿ ತರಬೇತಿಗೆ ಹೋಗುತ್ತಿದ್ದೆ. ಅಲ್ಲಿ ಇಸ್ಮಾಯಿಲ್ ಅಂಕಲ್ ಅಲಿಯಾಸ್ ವೈಟ್ ಅಂಕಲ್ ಸಹ ಬೋಧಕರಿದ್ದರು. ವಿದ್ಯಾರ್ಥಿಗಳನ್ನು ಜಿಹಾದ್ ಚಟುವಟಿಕೆಗೆ ಆರಿಸುತ್ತಿದ್ದರು. ಪ್ರಭಾವಿತನಾಗಿದ್ದೆ. 2005ರಲ್ಲಿ ನಾನು ಪಾಕಿಸ್ತಾನದ ಕರಾಚಿ ಮೂಲದ ಯುವತಿ ಜತೆ ಮದುವೆಯಾದ ನಾಲ್ಕು ವರ್ಷಗಳ ಬಳಿಕ ಪ್ರಥಮ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಅಲ್ಲಿಂದ ದುಬೈಗೆ ತೆರಳಿ ಭಟ್ಕಳದ ಮೂಲ ಆಪೀಫ್, ಶಫಿ, ಸುಲ್ತಾನ್, ಫಾರ್, ಜಾಸಿಂ, ಅಬ್ದುಲ್ ವಾಹಿದ್, ಅನ್ವರ್ ಭೇಟಿಯಾದೆ. 

ದುಬೈನಿಂದ ವಾಪಸಾದ ಬಳಿಕ ಮತ್ತೆ ಶಾರ್ಜಾಗೆ ಹೋಗಿ ರಿಯಾಜ್ ಭಟ್ಕಳ್ ಹಾಗೂ ಇಟ್ಬಾಲ್ ಭಟ್ಕಳ್‌ನನ್ನು ಭೇಟಿಯಾದೆ. ಅಲ್ಲಿ ಭಾರತದಲ್ಲಿ ಬಾಂಬ್ ಸ್ಫೋಟಗೊಳಿಸಿ ಜಿಹಾದ್ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯಿತು. ನನಗೆ ಸ್ಫೋಟಕ ಸಾಮಗ್ರಿ, ಸಂಗ್ರಹ ಹಾಗೂ ಸರಬರಾಜು ಹೊಣೆಯನ್ನು ವಹಿಸಿದರು. 

10 ಕೇಜಿ ಅಮೋನಿಯಂ ನೈಟ್ರೇಟ್: 

ನನಗೆ 200 ಜಿಲೆಟಿನ್ ಕಡಿಗಳು ಹಾಗೂ ಅಮೋನಿಯಂ ನೈಟ್ರೇಟ್ ಸಂಗ್ರಹಿಸುವಂತೆ ರಿಯಾಜ್ ಸೂಚಿಸಿದ್ದ. ಆಗ ಕುಂದಾಪುರದಲ್ಲಿ ಸ್ನೇಹಿತ ಜೈನುಲ್ಲಾಬುದ್ದೀನ್ ವೈದ್ಯನನ್ನು ಬಾಂಬ್ ತಜ್ಞನನ್ನಾಗಿ ಮಾಡಿದ್ದ ಭಟ್ಕಳ್ ಸೋದರರು ಗೆ ₹25-30 ಸಾವಿರ ಹಣ ನೀಡಿ 150 ಜಿಲೆಟಿನ್ ಕಡ್ಡಿಗಳು, 10 ಕೆ.ಜಿ. ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದೆ. ಇದಕ್ಕೆ ನನಗೆ 50 ಸಾವಿರ ಸಿಕ್ಕಿತ್ತು. 

1988ರ ಬಳಿಕ ಸ್ವರ್ಣಮಂದಿರದಲ್ಲಿ ಇದೇ ಮೊದಲ ಅತಿದೊಡ್ಡ ದಾಳಿ

ಪುಣೆ ಜರ್ಮನ್ ಸ್ಫೋಟಕ್ಕೂ ನನ್ನದೇ ಬಾಂಬ್: 

ರಿಯಾಜ್ ಸೂಚನೆ ಮೇರೆಗೆ ಸೈಯದ್ ಮೂಲಕ 6-7 ಡಿಟೋನೇಟರ್‌ಗಳು ಹಾಗೂ ಅಮೋನಿಯಂ ನೈಟ್ರೇಟನ್ನು ಕಳುಹಿಸಿದೆ. ನನ್ನಿಂದ ತೆಗೆದುಕೊಂಡು ಹೋದ ಈ ಸ್ಫೋಟಕಗಳನ್ನು ಅಫೀಪ್, ರಿಯಾಜ್ ಹಾಗೂ ಇಕ್ಸಾಲ್ ಎಲ್ಲೆಲ್ಲಿ ಉಪಯೋಗಿ ಸಿದ್ದಾ ರೆಂಬುದು ನಿಖರವಾಗಿ ಗೊತ್ತಿಲ್ಲ. ಸ್ಫೋಟಕಗಳನ್ನು ಕೊಟ್ಟ ಬಳಿಕ ಪುಣೆಯ ಜರ್ಮನ್ ಬೇಕರಿ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸ್ಫೋಟವಾಗಿದ್ದವು. 2011ರಲ್ಲಿ ನನಗೆ ಕರಾಚಿಗೆ ಬರುವಂತೆ ಅಫೀಫ್ ಸೂಚಿಸಿದ. ಅದರಂತೆ ನಾನು ಕರಾಚಿಗೆ ಹೋದಾಗ ಬಾಂಬ್‌ಗೆ ಬಳಸುವ ಎಲೆಕ್ಟ್ರಾನಿಕ್ ಸರ್ಕೀಟ್ ಗಳನ್ನು ತಯಾರಿಸುವುದು, ಎಕೆ-47 ಬಳಕೆ ಹೇಳಿಕೊಟ್ಟ, ಆಗಾಗ್ಗೆ ಬೆಂಗಳೂರಿಗೆ ಬಂದು ಎಸ್‌ಪಿ ರಸ್ತೆಯಲ್ಲಿ ಸರ್ಕೀಟ್ ಬೋರ್ಡ್ ತಯಾರಿಕೆಗೆ ಅಗತ್ಯವಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿದ್ದೆ.  ಟೈಮರ್ ಗಳನ್ನು ಭಟ್ಕಳದಲ್ಲಿ ಖರೀದಿಸಿದೆ. ನನ್ನ ಮನೆಯಲ್ಲಿ 4-5 ಸರ್ಕೀಟ್ ಬೋರ್ಡ್‌ಗಳನ್ನು ಸಿದ್ದಗೊಳಿಸಿದ್ದೆ. ತಿಂಗಳಲ್ಲೇ ಮುಂಬೈನಲ್ಲಿ ಬಾಂಬ್ ಸ್ಫೋಟವಾಗಿದ್ದವು. 50 ಸಾವಿರ ಸಂದಾಯವಾಗಿತ್ತು. 

ಪುಣೆ ಬ್ಲಾಸ್ಟ್ ಕೇಸ್: 

2012ರ ಜೂನ್‌ನಲ್ಲಿ ರಿಯಾಜ್‌ನಿಂದ ಜಿಲಿಟನ್ ಕಡ್ಡಿಗಳು ಹಾಗೂ ಸರ್ಕೀಟ್ ಬೋರ್ಡ್‌ ಗಳಿಗೆ ಬೇಡಿಕೆ ಬಂತು. ಸೂಚ ನೆಯಂತೆ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿ ಯೊಬ್ಬನಿಗೆ ತಲುಪಿಸಿದೆ. ಕೆಲ ದಿನಗಳಲ್ಲಿ ಪುಣೆಯಲ್ಲಿ ಬಾಂಬ್ ಸಿಡಿಯಿತು. 2013ರಲ್ಲಿ ಜನವರಿಯಲ್ಲಿ ರಿಯಾಜ್ ಸೂಚನೆ ಮೇರೆಗೆ ಜಿಲೆಟನ್ ಸಂಗ್ರಹಿಸಿ ಮಂಗಳೂರಿನಲ್ಲಿ ಮತ್ತೊಬ್ಬನಿಗೆ ಕೊಟ್ಟ ನಂತರ ಹೈದ ರಾಬಾದ್‌ನಲ್ಲಿ ಸ್ಫೋಟವಾಯಿತು ಎಂದಿದ್ದಾನೆ.

Latest Videos
Follow Us:
Download App:
  • android
  • ios