ಗುಂಡ್ಲುಪೇಟೆ[ಜ.13]: ತಲೆಮರೆಸಿಕೊಂಡಿರುವ ಶಂಕಿತ ಉಗ್ರ, ‘ಅಲ್‌ ಉಮ್ಮದ್‌’ ಸಂಘಟನೆಯ ಮಾಜಿ ಸದಸ್ಯ ಮೆಹಬೂಬ್‌ ಪಾಷಾ ಮತ್ತು ಸಂಗಡಿಗರ ಜತೆಗೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಗುಂಡ್ಲುಪೇಟೆ ಮದರಸದ ಮೌಲ್ವಿ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ವಿಚಾರಣೆ ಬಳಿಕ ಇಬ್ಬರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.

"

ಆಂತರಿಕ ಭದ್ರತಾ ಪಡೆ, ಉಗ್ರ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರು ಶನಿವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿ ಪಟ್ಟಣದ ಮದರಸದ ಮೌಲ್ವಿ ಸದಾಖತ್‌ ಉಲ್ಲಾಖಾನ್‌(35) ಹಾಗೂ ಅಯೂಬ್‌ ಖಾನ್‌ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಯೂಬ್‌ ಖಾನ್‌ನನ್ನು ಗುಂಡ್ಲುಪೇಟೆ ಹೊರ ವಲಯದಲ್ಲಿ ವಿಚಾರಣೆ ನಡೆಸಿದ ಬಳಿಕ ಶನಿವಾರವೇ ಬಿಟ್ಟು ಕಳುಹಿಸಿದ್ದು, ಮೌಲ್ವಿ ಸದಾಖತ್‌ ಉಲ್ಲಾಖಾನ್‌ನನ್ನು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದು, ಬಳಿಕ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!

ತಮಿಳುನಾಡಿನಲ್ಲಿ ಕೆಲ ಸಮಯದ ಹಿಂದೆ ನಡೆದಿದ್ದ ಶೂಟೌಟ್‌ ಪ್ರಕರಣದ ಆರೋಪಿಗಳಿಗೆ ಹಾಗೂ ಶಂಕಿತ ಉಗ್ರ ಮೆಹಬೂಬ್‌ ಪಾಷಾ ಜತೆ ಮೌಲ್ವಿ ಸದಾಖತ್‌ ಉಲ್ಲಾಖಾನ್‌ ಹಾಗೂ ಅಯೂಬ್‌ಖಾನ್‌ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.