ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!

ಸಿಲಿಕಾನ್ ಸಿಟಿ ಮೇಲೆ 3 ದುಷ್ಟ ಶಕ್ತಿಗಳ ಕಣ್ಣು ಬಿದ್ದಿದೆ. ಉಗ್ರರು, ಜಿಹಾದಿಗಳ ಬಳಿಕ ಖಲಿಸ್ತಾನ್ ಪ್ರತ್ಯೇಕವಾದಿಯನ್ನು ಖಾಕಿ ಹೆಡೆಮುರಿ ಕಟ್ಟಿದ್ದಾರೆ. ಸಿಸಿಬಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ ಮೂಲಕ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ 6 ತಿಂಗಳಿಂದ ವಾಸವಿದ್ದ ಸಿದ್ದುವನ್ನು ಬಂಧಿಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು[ಜ.12]: ಸಿಲಿಕಾನ್ ಸಿಟಿ ಮೇಲೆ 3 ದುಷ್ಟ ಶಕ್ತಿಗಳ ಕಣ್ಣು ಬಿದ್ದಿದೆ. ಉಗ್ರರು, ಜಿಹಾದಿಗಳ ಬಳಿಕ ಖಲಿಸ್ತಾನ್ ಪ್ರತ್ಯೇಕವಾದಿಯನ್ನು ಖಾಕಿ ಹೆಡೆಮುರಿ ಕಟ್ಟಿದ್ದಾರೆ. ಸಿಸಿಬಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ ಮೂಲಕ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ 6 ತಿಂಗಳಿಂದ ವಾಸವಿದ್ದ ಸಿದ್ದುವನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ದ. ಭಾರತದಲ್ಲಿ ಉಗ್ರ ಜಾಲ, ಶಂಕಿತ ಉಗ್ರರು ಬಿಚ್ಚಿಟ್ರು ಸ್ಫೋಟಕ ಸತ್ಯ!

ಮೂಲತಃ ಇಂಜಿನಿಯರ್ ಆಗಿದ್ದ ಸಿದ್ದು ಮೂಲ ಹೈದ್ರಾಬಾದ್ ಮೂಲದವರು. ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿದ್ದ ಜರ್ನಲ್ ಸಿಂಗ್ ಸಿದ್ದು ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಡುತ್ತಿದ್ದರೆನ್ನಲಾಗಿದೆ. ಪಂಜಾಬ್ ನ್ನು ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟ ಮಾಡುತ್ತಿದ್ದ ಸಿದ್ದು ವಿರುದ್ಧ 2019ರಲ್ಲಿ ಮೊಹಾಲಿಯಲ್ಲಿ ISD ಪ್ರಕರಣ ದಾಖಲಾಗಿದೆ. 

ದ. ಭಾರತದಲ್ಲಿ ಉಗ್ರ ಜಾಲ, ಶಂಕಿತ ಉಗ್ರರು ಬಿಚ್ಚಿಟ್ರು ಸ್ಫೋಟಕ ಸತ್ಯ!

ಸಿದ್ದು ಪಾಕಿಸ್ತಾನದ ISI ಜೊತೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಮೊಹಾಲಿಯ ISI ಏಜೆಂಟ್ ನಿಹಾಲ್ ಸಿಂಗ್ ಸ್ನೇಹಿತನೆಂಬ ವಿಚಾರವೂ ಬೆಳಕಿಗೆ ಬಂದಿದೆ. ಸದ್ಯ ಬೆಂಗಳೂರಿನ ಸಿಸಿಬಿ OCW ವಿಂಗ್ ನಿಂದ ಜರ್ನಲ್ ಸಿಂಗ್ ಬಂಧನವಾಗಿದೆ. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದ್ದು, ಆರೋಪಿಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಲಾಗಿದೆ.

Related Video