ಈ ಬಸವೇಶ್ವರ ಮೂರ್ತಿಯನ್ನು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಲಂಡನ್‌ನಲ್ಲಿ ಸ್ಥಾಪನೆಯಾದ ಮೊದಲ ಬಸವೇಶ್ವರ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲಂಡನ್‌ (ಮೇ 30, 2023): ಬ್ರಿಟನ್‌ ಪ್ರವಾಸದಲ್ಲಿರುವ ಅದಮ್ಯ ಚೇತನ ಟ್ರಸ್ಟ್‌ನ ಸ್ಥಾಪಕಿ, ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್‌ ಅವರು ಲ್ಯಾಂಬೆತ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಲ್ಯಾಂಬೆತ್‌ನ ಬಸವೇಶ್ವರ ಫೌಂಡೇಶನ್‌ ಹಾಗೂ ಬ್ರಿಟನ್‌ನ ಬಸವ ಸಮಿತಿ ಆಯೋಜನೆ ಮಾಡಿತ್ತು.

ತೇಜಸ್ವಿನಿ ಅನಂತ್‌ಕುಮಾರ್‌ ಅವರು ತಮ್ಮ ಪುತ್ರಿ ವಿಜೇತಾ ಅನಂತ್‌ಕುಮಾರ್‌ ಅವರೊಂದಿಗೆ ಲ್ಯಾಂಬೆತ್‌ಗೆ ಭೇಟಿ ನೀಡಿದ್ದು, ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು. ಈ ವೇಳೆ ಲ್ಯಾಂಬೆತ್‌ ಬಸವೇಶ್ವರ ಪ್ರತಿಷ್ಠಾನದ ಮುಖ್ಯಸ್ಥ ನೀರಜ್‌ ಪಾಟೀಲ್‌ ಸೇರಿದಂತೆ ಲ್ಯಾಂಬೆತ್‌ನ ಹಲವು ಕನ್ನಡಿಗರು ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನೀರಜ್‌ ಪಾಟೀಲ್‌, 1997ರಲ್ಲಿ ಅದಮ್ಯ ಚೇತನ ಎಂಬ ಟ್ರಸ್ಟ್‌ ಸ್ಥಾಪನೆ ಮಾಡಿದ ತೇಜಸ್ವಿನಿ ಅವರು ಅನ್ನ, ಅಕ್ಷರ, ಆರೋಗ್ಯ ಸೇರಿದಂತೆ ಹಲವು ಉಪಕ್ರಮಗಳ ಕುರಿತಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: Uttara Kannada: ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ

ಈ ಬಸವೇಶ್ವರ ಮೂರ್ತಿಯನ್ನು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಲಂಡನ್‌ನಲ್ಲಿ ಸ್ಥಾಪನೆಯಾದ ಮೊದಲ ಬಸವೇಶ್ವರ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: Raichur ಭಾವೈಕ್ಯತೆಗೆ ಸಾಕ್ಷಿಯಾದ ಬಸವ ಜಯಂತಿ, ರಂಜಾನ್