ಸಾಧಕರ ಗುರುತಿಸುವ ಕಾರ್ಯ ದೊಡ್ಡದು: ಸಚಿವ ಸತೀಶ ಜಾರಕಿಹೊಳಿ
ಪ್ರತಿಯೊಂದು ಕ್ಷೇತ್ರದಲ್ಲೂ ಎಂಜಿನಿಯರುಗಳ ಪಾತ್ರ ಮುಖ್ಯ ಮತ್ತು ಅನಿವಾರ್ಯ. ಬೆಂಗಳೂರಿನಿಂದ ದೂರದಲ್ಲಿ ಯಾವುದೋ ಮೂಲೆಯಲ್ಲಿರುವವರನ್ನು ಗುರುತಿಸಿ, ಇಡೀ ನಾಡಿಗೆ, ದೇಶಕ್ಕೆ ಪರಿಚಯಿಸುವ ಕೆಲಸ ಮೆಚ್ಚುವಂತಹದ್ದು. ಇನ್ನು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸ ಮಾಡುವ ವಿಶ್ವಾಸವಿದೆ’ ಎಂದು ಸಚಿವರು ಹೇಳಿದ ಲೊಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ

ಬೆಂಗಳೂರು(ಅ.29): ಕೃಷಿ, ಕಲೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿರುವ ಕನ್ನಡ ಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್, ಈಗ ಪ್ರತಿಭಾನ್ವಿತ ಎಂಜಿನಿಯರ್‌ಗಳನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಲೊಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಪ್ರತಿಯೊಂದು ಕ್ಷೇತ್ರದಲ್ಲೂ ಎಂಜಿನಿಯರುಗಳ ಪಾತ್ರ ಮುಖ್ಯ ಮತ್ತು ಅನಿವಾರ್ಯ. ಬೆಂಗಳೂರಿನಿಂದ ದೂರದಲ್ಲಿ ಯಾವುದೋ ಮೂಲೆಯಲ್ಲಿರುವವರನ್ನು ಗುರುತಿಸಿ, ಇಡೀ ನಾಡಿಗೆ, ದೇಶಕ್ಕೆ ಪರಿಚಯಿಸುವ ಕೆಲಸ ಮೆಚ್ಚುವಂತಹದ್ದು. ಇನ್ನು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸ ಮಾಡುವ ವಿಶ್ವಾಸವಿದೆ’ ಎಂದು ಸಚಿವರು ಹೇಳಿದರು.
ದೇಶದ ಪ್ರಗತಿಗೆ ಎಂಜಿನಿಯರಿಂಗ್ ಕೌಶಲ್ಯ ಹೆಚ್ಚಬೇಕು: ರವಿ ಹೆಗಡೆ
‘ಪ್ರಶಸ್ತಿ ಪಡೆದವರಲ್ಲಿ ಬಹುತೇಕರು ಗ್ರಾಮಾಂತರ ಪ್ರದೇಶ ಮತ್ತು ಬಡತನದ ಹಿನ್ನೆಲೆಯವರು. ಸಾಧನೆಗೆ ಬಡತನ, ಗ್ರಾಮೀಣ ಹಿನ್ನೆಲೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಬರೀ ನಗರ ಪ್ರದೇಶದವರು ಮಾತ್ರವೇ ಸಾಧನೆ ಮಾಡಬಲ್ಲರು ಎನ್ನುವುದನ್ನು ಇವರು ಸುಳ್ಳಾಗಿಸಿ, ಯಾರು ಬೇಕಾದರೂ ಸಾಧನೆ ಮಾಡಬಹುದು ಎಂದು ತೋರಿಸಿದ್ದಾರೆ. ಹೀಗಾಗಿ, ಎಲ್ಲರಿಗೂ ಅಭಿನಂದನೆಗಳು. ಈ ಪ್ರಶಸ್ತಿ ಬೇರೆಯವರಿಗೆ ಪ್ರೇರಣೆ ನೀಡಲಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.