Asianet Suvarna News Asianet Suvarna News

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ

*  ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸುಧಕಾರನ್‌ಗೆ ಬಿಡುಗಡೆಯ ದಿನಾಂಕ ಫಿಕ್ಸ್
*  ಕಳೆದ 5 ವರ್ಷಗಳಿಂದ ಸೆರೆವಾಸ ಅನುಭವಿಸ್ತಿದ್ದ ಸುಧಾಕರನ್‌ಗೆ ಕೊನೆಗೂ ಜೈಲಿನಿಂದ ಮುಕ್ತಿ 
*  ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆ
 

Tamil Nadu Former CM J Jayalalithaa Adopted Son Sudhakaran Will Be Release From Jail grg
Author
Bengaluru, First Published Oct 15, 2021, 7:42 AM IST
  • Facebook
  • Twitter
  • Whatsapp

ಬೆಂಗಳೂರು(ಅ.15): ನಗರದ(Bengaluru) ಪರಪ್ಪನ ಅಗ್ರಹಾರದಲ್ಲಿರುವ(Parappana Agrahara) ತಮಿಳುನಾಡು(Tamil Nadu) ಮಾಜಿ ಸಿಎಂ ದಿ. ಜಯಲಲಿತಾ(J Jayalalithaa) ಅವರ ದತ್ತು ಪುತ್ರನಿಗೂ ಬಿಡುಗಡೆ ಭಾಗ್ಯ ದೊರೆತಿದೆ. ಹೌದು, 10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆಯಲ್ಲಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 

ಸುಧಕಾರನ್(Sudhakaran) ಬಿಡುಗಡೆ ಬಗ್ಗೆ ಪರಪ್ಪನ ಅಗ್ರಹಾರ(Jail) ಜೈಲಾಧಿಕಾರಿಗಳು ದಿನಾಂಕ ನಿಗದಿ ಮಾಡಿದ್ದಾರೆ. ಶಶಿಕಲಾ(V. K. Sasikala) ಜೈಲಿನಿಂದ ಬಿಡುಗಡೆ ಬಳಿಕ ಸುಧಾಕರನ್ ಭೇಟಿಗೆ ಯಾರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ. 10 ಕೋಟಿ ದಂಡ ಕಟ್ಟದೆ ಮತ್ತೊಂದು ವರ್ಷ ಹೆಚ್ಚುವರಿ ಜೈಲುವಾಸ ಮುಕ್ತಾಯವಾಗಲಿದೆ. 

ಪರಪ್ಪನ ಅಗ್ರಹಾರದಲ್ಲಿ ಜಯಾ ದತ್ತು ಪುತ್ರ ಕೂಗಾಡಿ, ರಂಪಾಟ ನಡೆಸಿದ್ದು ಏಕೆ ಗೊತ್ತಾ?

ಇನ್ನೆರಡು‌ ದಿನಗಳಲ್ಲಿ ಸುಧಾಕರನ್‌ಗೆ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಭಾಗ್ಯ ದೊರಕಲಿದೆ. ಕಳೆದ 5 ವರ್ಷಗಳಿಂದ ಸೆರೆವಾಸ ಅನುಭವಿಸ್ತಿದ್ದ ಸುಧಾಕರನ್‌ಗೆ ಕೊನೆಗೂ ಜೈಲಿನಿಂದ ಮುಕ್ತಿ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಧಾಕರನ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. 2017 ರಲ್ಲಿ ಶಶಿಕಲಾ, ಇಳವರಸಿ(Ilavarasi), ಸುಧಾಕರನ್‌ಗೆ 10 ಕೋಟಿ ದಂಡ(Fine) ವಿಧಿಸಲಾಗಿತ್ತು. ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ 10 ಕೋಟಿಯಂತೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದರು. ಸುಧಾಕರನ್ ದಂಡ ಕಟ್ಟದ ಹಿನ್ನಲೆ 1 ವರ್ಷ ಹೆಚ್ಚು ಜೈಲುವಾಸ ಮುಂದುವರಿಸಲಾಗಿತ್ತು. ಹೀಗಾಗಿ ಹೆಚ್ಚುವರಿ ಜೈಲು ಶಿಕ್ಷೆ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದು ಇದೇ ತಿಂಗಳು 16 ರಂದು ಬಿಡುಗಡೆಯಾಗಲಿದೆ. 
 

Follow Us:
Download App:
  • android
  • ios