ಇನ್ಮುಂದೆ ಫೀವರ್‌ ಕ್ಲಿನಿಕ್‌ಗಳಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹ

ಸೋಮವಾರದಿಂದ ಹೈರಿಸ್ಕ್‌ ಪ್ರದೇಶಗಳಲ್ಲಿ ರಾರ‍ಯಂಡಮ್‌ ಟೆಸ್ಟ್‌| ಬಿಬಿಎಂಪಿ ಜ್ವರ ತಪಾಸಣಾ ಕೇಂದ್ರಗಳಲ್ಲಿ ಕೊರೋನಾ ಸೋಂಕಿನ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಲು ತೀರ್ಮಾನ| ಮೊಬೈಲ್‌ ಘಟಕ ಸಿದ್ಧಪಡಿಸಿ ನಗರದಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಲು ಯೋಜನೆ ಸಿದ್ಧ|

Swab collection In Fever Clinics in Bengaluru

ಬೆಂಗಳೂರು(ಜೂ.19):  ಶೀಘ್ರ ಕೊರೋನಾ ಸೋಂಕು ಪತ್ತೆಗಾಗಿ ಆರಂಭಿಸಲಾದ ಜ್ವರ ತಪಾಸಣಾ ಕೇಂದ್ರಗಳಲ್ಲಿ (ಫೀವರ್‌ ಕ್ಲಿನಿಕ್‌) ಇನ್ಮುಂದೆ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸೋಮವಾರದಿಂದ ಮಾರುಕಟ್ಟೆ, ಬಸ್‌ ನಿಲ್ದಾಣ, ಆರೋಗ್ಯ ಕೇಂದ್ರ, ಮಾಲ್‌, ಹೋಟೆಲ್‌, ಬಸ್‌ ನಿಲ್ದಾಣ ಸೇರಿದಂತೆ ಹೈರಿಸ್ಕ್‌ ಇರುವ ಪ್ರದೇಶದಲ್ಲಿ ರಾರ‍ಯಂಡಮ್‌ ಕೊರೋನಾ ಸೋಂಕು ಪರೀಕ್ಷೆ ಆರಂಭಿಸಲಾಗುತ್ತಿದೆ. ಅದಕ್ಕೆ ಬೇಕಾದ ಸಿಬ್ಬಂದಿ ವ್ಯವಸ್ಥೆ, ಸಾಧನ ಸಲಕರಣೆಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಬಿಬಿಎಂಪಿ ಜ್ವರ ತಪಾಸಣಾ ಕೇಂದ್ರಗಳಲ್ಲಿ ಕೊರೋನಾ ಸೋಂಕಿನ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕ್ವಾರಂಟೈನ್‌ನಲ್ಲಿ ಇರುವವರ ಕಣ್ಗಾವಲಿಗೆ ತಂಡ: ನಿಯಮ ಉಲ್ಲಂಘಿಸಿದ್ರೆ FIR

ಈಗ ನಗರದಲ್ಲಿ ದಿನಕ್ಕೆ ಸುಮಾರು ಎರಡು ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾರ‍ಯಂಡಮ್‌ ಪರೀಕ್ಷೆ ಆರಂಭಗೊಂಡರೆ ಪರೀಕ್ಷೆ ಸಂಖ್ಯೆ ಐದು ಸಾವಿರಕ್ಕೆ ಏರಿಕೆಯಾಗಲಿದೆ. ಪರೀಕ್ಷಾ ವರದಿ ಶೀಘ್ರದಲ್ಲಿ ಕೈ ಸೇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಇನ್ನು ಮೊಬೈಲ್‌ ಘಟಕ ಸಿದ್ಧಪಡಿಸಿ ನಗರದಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಎಷ್ಟುಮೊಬೈಲ್‌ ಘಟಕಗಳಲ್ಲಿ, ಎಲ್ಲಲ್ಲಿ ರಾರ‍ಯಂಡಮ್‌ ಪದ್ಧತಿಯಲ್ಲಿ ಪರೀಕ್ಷೆ ನಡೆಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಲಾಗುತ್ತಿದೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios