ರಾತ್ರಿ ಗಸ್ತಿನಲ್ಲಿದ್ದ ಡಿಸಿಪಿ ಅವರು ಠಾಣೆಗೆ ಭೇಟಿ ನೀಡಿದ್ದ ವೇಳೆ ನಿದ್ರೆ ಮಾಡುತ್ತಿದ್ದ ಆರೋಪದ ಮೇರೆಗೆ ಮಹದೇವಪುರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಇಬ್ಬರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಬೆಂಗಳೂರು (ಜು.12) : ರಾತ್ರಿ ಗಸ್ತಿನಲ್ಲಿದ್ದ ಡಿಸಿಪಿ ಅವರು ಠಾಣೆಗೆ ಭೇಟಿ ನೀಡಿದ್ದ ವೇಳೆ ನಿದ್ರೆ ಮಾಡುತ್ತಿದ್ದ ಆರೋಪದ ಮೇರೆಗೆ ಮಹದೇವಪುರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಇಬ್ಬರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಮಹಾದೇವಪುರ ಠಾಣೆ(mahadevapur police station) ಹೆಡ್‌ ಕಾನ್‌ಸ್ಟೇಬಲ್‌ ಎ.ಎನ್‌.ಜಯರಾಮ… ಹಾಗೂ ಕಾನ್‌ಸ್ಟೇಬಲ… ಈರಪ್ಪ ಉಂಡು ಅಮಾನತುಗೊಂಡಿದ್ದು, ಎರಡು ದಿನಗಳ ಹಿಂದೆ ರಾತ್ರಿ ಪಾಳೆಯದಲ್ಲಿ ಕರ್ತವ್ಯದಲ್ಲಿದ್ದಾಗ ಇಬ್ಬರು ನಿದ್ರೆ ಮಾಡುತ್ತಿದ್ದರು. ಈ ಬಗ್ಗೆ ನಗರ ಸಶಸ್ತ್ರ ಮೀಸಲು ಪಡೆ (ಕೇಂದ್ರ) ಡಿಸಿಪಿ ಅವರು ನೀಡಿದ ವರದಿ ಮೇರೆಗೆ ಇಬ್ಬರ ತಲೆದಂಡವಾಗಿದೆ.

ಜು.9ರ ರಾತ್ರಿ ಠಾಣೆಯ ಎಸ್‌ಎಚ್‌ಒ ಪ್ರಭಾರ ಹೊತ್ತಿದ್ದ ಎಚ್‌ಸಿ ಜಯರಾಮ್‌ ಹಾಗೂ ಸೆಂಟ್ರಿಯಾಗಿ ಕಾನ್‌ಸ್ಟೇಬಲ್‌ ಈರಪ್ಪ ಕರ್ತವ್ಯದಲ್ಲಿದ್ದರು. ಆಗ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್‌ ಡಿಸಿಪಿ ಅವರು, ಮಹದೇವಪುರ ಠಾಣೆಗೆ ತೆರಳಿದ್ದರು. ಆ ವೇಳೆ ಇಬ್ಬರು ಪೊಲೀಸರು ನಿದ್ರೆ ಮಾಡುತ್ತಿದ್ದನ್ನು ಗಮನಿಸಿದ ಸಿಎಆರ್‌ ಡಿಸಿಪಿ ಅವರು, ಮರುದಿನ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅವರಿಗೆ ವರದಿ ನೀಡಿದ್ದರು. ಅದರನ್ವಯ ವಿಚಾರಣೆ ನಡೆಸಿ ಎಚ್‌ಸಿ ಹಾಗೂ ಕಾನ್‌ಸ್ಟೇಬಲ್‌ನನ್ನು ಡಿಸಿಪಿ ಗಿರೀಶ್‌ ಅಮಾನತುಗೊಳಿಸಿದ್ದಾರೆ.

ಬೆಂಗಳೂರು: ಕರ್ತವ್ಯ ಲೋಪ ಹಿನ್ನಲೆ, ಅಶೋಕನಗರ ಇನ್ಸ್‌ಪೆಕ್ಟರ್ ಸಸ್ಪೆಂಡ್