ಸುಪ್ರೀಂ ಕೋರ್ಟ್‌ನಲ್ಲಿ ಹೋಳಿ ಹಬ್ಬದ ನಂತರ ಹಿಜಾಬ್ ಪ್ರಕರಣ ವಿಚಾರಣೆ!
ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರ, ಸುಪ್ರೀಂ ಕೋರ್ಟ್‌ನಲ್ಲಿ ಮಾರ್ಚ್ 17ಕ್ಕೆ ಅಥವಾ ಹೋಳಿ ಹಬ್ಬದ ಬಳಿಕ ವಿಚಾರಣೆಗೆ ಬರಲಿದೆ. ಸ್ವತಃ ಸಿಜೆಐ ಡಿವೈ ಚಂದ್ರಚೂಡ್ ಈ ವಿಚಾರ ತಿಳಿಸಿದ್ದಾರೆ.
ನವದೆಹಲಿ (ಮಾ.3): ರಾಜ್ಯದಲ್ಲಿ ಧರ್ಮದಂಗಲ್‌ಗೆ ಮೂಲ ಕಾರಣವಾಗಿದ್ದ ಹಿಜಾಬ್ ವಿಚಾರವನ್ನು ವಿಚಾರಣೆ ಮಾಡಲು ಒಪ್ಪಿಕೊಂಡಿದ್ದ ಸುಪ್ರೀಂ ಕೋರ್ಟ್, ಈಗ ದಿನಾಂಕ ನಿಗದಿ ಮಾಡಿದೆ. ಹೋಳಿ ಹಬ್ಬದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ಕೇಸ್‌ನ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಮಾರ್ಚ್ 9 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ತುರ್ತಾಗಿ ವಿಚಾರಣೆ ನಡೆಸುವಂತೆ ವಕೀಲರು ಪ್ರಸ್ತಾಪ ಮಾಡಿದ್ದರು. ಅದರೆ, ಇದಕ್ಕೆ ನೀವು ತಡವಾಗಿ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದು ಸಿಜೆಐ ಉತ್ತರ ನೀಡಿದ್ದರು. ಎರಡು ಬಾರಿ ಪೀಠದ ಮುಂದೆ ಪ್ರಸ್ತಾಪ ಮಾಡಿರುವುದಾಗಿ ವಕೀಲರು ಹೇಳಿಕೆ ನೀಡಿದ್ದರೂ, ಮಾಚ್೯ 17ರ ನಂತರದ ದಿನಗಳಲ್ಲಿ ಮುಂದಿನ ವಿಚಾರಣೆ ನಡೆಸಲಿದ್ದೇವೆ ಎಂದು ಸಿಜೆಐ ತಿಳಿಸಿದ್ದಾರೆ.