ಬೆಂಗಳೂರು, [ಡಿ.04]  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಿಂದ ಸದ್ಯಕ್ಕೆ ಬಿಎಸ್​ವೈಗೆ ಬಿಗ್ ರಿಲೀಫ್ ಸಿಕ್ಕಿದೆ.

ಸಿರಾಜಿನ್ ಬಾಷಾ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಡಿನೋಟಿಫಿಕೇಷನ್ ಅರ್ಜಿಯನ್ನ ಇತ್ಯರ್ಥ ಪಡಿಸಿ, ರಾಜ್ಯ ಹೈಕೋರ್ಟ್​ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಎರಡು ಕೇಸ್‌ಗಳಲ್ಲಿ ಬಿ.ಎಸ್.ಯಡಿಯೂರಪ್ಪ ಖುಲಾಸೆ

ಕೇಸನ್ನು ವಜಾಗೊಳಿಸಿ  ಹೈಕೋರ್ಟ್ ವರ್ಗಾಯಿಸಿದ್ದು, ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಲಿ ಎಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿಕ್ರಿ ದ್ವಿಸದಸ್ಯ ಪೀಠ ಆದೇಶ ನೀಡಿದೆ.

ಸಿಎಂ ಆಗಿದ್ದಾಗ ಅಕ್ರಮವಾಗಿ ಭೂಮಿ ಕಬಳಿಸಿದ್ದಾರೆಂಬ ಆರೋಪ ಮೇಲೆ ಯಡಿಯೂರಪ್ಪ ಹಾಗೂ ಕುಟುಂಬದವರ ವಿರುದ್ಧ ಸಿರಾಜಿನ್ ಬಾಷಾ ಅವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.

ಇನ್ನು ರಾಜ್ಯ ಬಿಜೆಪಿ ಸುಪ್ರೀಂ ಕೋರ್ಟ್ ನಲ್ಲಿ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದೆ. ಒಂದು ಕಡೆ ಸ್ರುಪೀಂ ಕೋರ್ಟ್ ನಲ್ಲಿ ಡಿಯೂರಪ್ಪಗೆ ರಿಲೀಫ್​ ಸಿಕ್ಕಂತಾಗುತ್ತದೆ.