ಕರ್ನಾಟಕ ಸರ್ಕಾರದ ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಡೆ
ರಾಜ್ಯದಲ್ಲಿ ಇತ್ತೀಚೆಗೆ ಇತರೆ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ದೆಹಲಿ (ಏ.25): ರಾಜ್ಯದಲ್ಲಿ ಇತ್ತೀಚೆಗೆ ಇತರೆ (ಸಾಮಾಜಿಕ) ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕರ್ನಾಟಕ ಸರ್ಕಾರದಿಂದ ರದ್ದುಗೊಳಿಸಲಾಗಿದ್ದ ಮುಸ್ಲಿಂ ಸಮುದಾಯದ ಒಬಿಸಿ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯನ್ನು ಕೊಟ್ಟಿದೆ. ಜೊತೆಗೆ, ಮೇ 9ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಈ ಕುರಿತು ವಾದ ಮಂಡನೆ ಮಾಡಿದ ರಾಜ್ಯ ಸರ್ಕಾರದ ಸಾಲಿಸಿಟರ್ ಜನರಲ್ ಕರ್ನಾಟಕದಲ್ಲಿ ಈವರೆಗೆ ನೇಮಕಾತಿ ಸೇರಿ ಯಾವುದೇ ವಿಷಯಗಳಲ್ಲಿ ಯಾವುದೇ ಕ್ರಮ ಇರುವುದಿಲ್ಲ. ಈ ವಿಚಾರಣೆಯನ್ನು ಮುಂದೂಡಿಕೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ದುಷ್ಯಂತ ದಾವೆ, ಪದೇ ಪದೇ ವಿಚಾರಣೆ ಮುಂದೂಡಿಕೆ ಕೇಳುವುದು ದುರಾದೃಷ್ಟಕರ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ದುಷ್ಯಂತ ದಾವೆ ವಾದ ಮಮಡಿಸಿದ್ದಾರೆ.
ಮುಸ್ಲಿಂ ಮೀಸಲಾತಿ ರದ್ದು: ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತವಾಗಿತ್ತು: ಸಿದ್ದರಾಮಯ್ಯ
ವಿಚಾರಣೆ ಮುಂದೂಡಿಕೆಗೆ ಅರ್ಜಿದಾರರ ಪರ ವಕೀಲ ಅಸಮಾಧಾನ: ಈ ಕುರಿತು ವಾದ ಮಂಡನೆ ಮಾಡಿದ ರಾಜ್ಯ ಸರ್ಕಾರದ ಸಾಲಿಸಿಟರ್ ಜನರಲ್ ಕರ್ನಾಟಕದಲ್ಲಿ ಈವರೆಗೆ ನೇಮಕಾತಿ ಸೇರಿ ಯಾವುದೇ ವಿಷಯಗಳಲ್ಲಿ ಯಾವುದೇ ಕ್ರಮ ಇರುವುದಿಲ್ಲ. ಈ ವಿಚಾರಣೆಯನ್ನು ಮುಂದೂಡಿಕೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ದುಷ್ಯಂತ ದಾವೆ, ಪದೇ ಪದೇ ವಿಚಾರಣೆ ಮುಂದೂಡಿಕೆ ಕೇಳುವುದು ದುರಾದೃಷ್ಟಕರ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ದುಷ್ಯಂತ ದಾವೆ ವಾದ ಮಮಡಿಸಿದ್ದಾರೆ.
ಸುಪ್ರೀಂ ಆದೇಶದ ವಿರುದ್ಧ ಅಸಮಾಧಾನ ಹೊರ ಹಾಕಿದ ಕೇಂದ್ರ ಸಚಿವೆ: ಸಂವಿಧಾನ ಪ್ರಕಾರ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡುವ ಬಗ್ಗೆ ಎಲ್ಲಿಯೂ ಇಲ್ಲ. ಆದರೆ ನಾವು ಸುಪ್ರೀಂ ಕೋರ್ಟ್ ಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ. ಶೇ. 4 ಪರ್ಸೆಂಟ್ ಮೀಸಲಾತಿ ತೆಗೆಯುವ ನಿರ್ಧಾರಕ್ಕೆ ಈಗಲೂ ನಾವು ಬದ್ದರಿದ್ದೇವೆ. ಈ ಹಿಂದೆ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಈ ಮೀಸಲಾತಿ ಯ ನಿರ್ಣಯ ಮಾಡಿದ್ದರು. ನಾವು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ ತಡೆಗೆ ನಮ್ಮ ಸಮ್ಮತಿ ಇಲ್ಲ. ಸುಪ್ರೀಂಕೋರ್ಟ್ ಕೂಡ ಸಂವಿಧಾನದಡಿಯಲ್ಲಿ ಕೆಲಸ ಮಾಡಲು ನಾವು ಮನವಿ ಮಾಡುತ್ತೇವೆ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ನಮ್ಮ ವಿರೋಧವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ರು: ಪ್ರತಾಪ್ ಸಿಂಹ
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಹೋರಾಟ: ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯವು ಸಾಮಾಜಿಕ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಪಡೆದುಕೊಮಡಿತ್ತು. ಆದರೆ, ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮುಸ್ಲಿಮರಿಗೆ ನೀಡಲಾಗಿದ್ದ ಸಾಮಾಜಿಕ ಹಿಂದುಳಿದ ವರ್ಗದ ಮೀಸಲಾತಿಯನ್ನು ರದ್ದುಗೊಳಿಸಿ ಅವರನ್ನು ಸಾಮಾನ್ಯ ವರ್ಗದ ಆರ್ಥಿಕ ಹಿಂದುಳಿದವರಿಗೆ ನೀಡಲಾಗುತ್ತಿದ್ದ ಶೇ.10 ಮೀಸಲಾತಿಗೆ ಸೇರ್ಪಡೆ ಮಾಡಲಾಗಿತ್ತು. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಸ್ಲಿಂ ಸಮುದಾಯ ರಾಜ್ಯಾದ್ಯಂತ ಹೋರಾಟವನ್ನೂ ಮಾಡಿತ್ತು.