ವಿಶ್ವಕರ್ಮ ಅಭಿವೃದ್ಧಿ ಪರ ನಿಲ್ಲೋ ಪಕ್ಷಕ್ಕೆ ಸಮಾಜದ ಬೆಂಬಲ: ಶಿವಸುಜ್ಞಾನ ಶ್ರೀ
ವಿಶ್ವಕರ್ಮ ಸಮಾಜದ ಉನ್ನತಿ, ಅಭಿವೃದ್ಧಿಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವ ಹಾಗೂ ಸಮುದಾಯದ ಮಠಾಧೀಶರ ಪರ ನಿಲ್ಲುವ ಪಕ್ಷಕ್ಕೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯ ಹಾಗೂ ಮಠಾಧೀಶರು ಬೆಂಬಲ ನೀಡಲಿದ್ದಾರೆ ಎಂದು ಹಾಸನದ ಅರಮಾದನಹಳ್ಳಿಮಠದ ಶಿವಸುಜ್ಞಾನ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರು (ಫೆ.02): ವಿಶ್ವಕರ್ಮ ಸಮಾಜದ ಉನ್ನತಿ, ಅಭಿವೃದ್ಧಿಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವ ಹಾಗೂ ಸಮುದಾಯದ ಮಠಾಧೀಶರ ಪರ ನಿಲ್ಲುವ ಪಕ್ಷಕ್ಕೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯ ಹಾಗೂ ಮಠಾಧೀಶರು ಬೆಂಬಲ ನೀಡಲಿದ್ದಾರೆ ಎಂದು ಹಾಸನದ ಅರಮಾದನಹಳ್ಳಿಮಠದ ಶಿವಸುಜ್ಞಾನ ಸ್ವಾಮೀಜಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ವಿಶ್ವಕರ್ಮ ಸಮಾಜ ರಾಜಕೀಯವಾಗಿ ಹಿಂದುಳಿದಿದೆ. ಈ ಸಮುದಾಯಕ್ಕೆ ಹಿಂದಿನಿಂದಲೂ ಪ್ರಾಮುಖ್ಯತೆ ದೊರಕಿಲ್ಲ.
ಹೀಗಾಗಿ, ಯಾವ ಪಕ್ಷ ಸಮುದಾಯದ ಪರ ನಿಲ್ಲುವುದೋ ಆ ಪಕ್ಷವನ್ನು ಬೆಂಬಲಿಸಲು ಸಮಾಜ ಹಾಗೂ ಮಠಾಧೀಶರು ತೀರ್ಮಾನಿಸಿದ್ದಾರೆ. ಸಮುದಾಯಕ್ಕೆ ಯಾವ ಕೊಡುಗೆಗಳು ದೊರಕಲಿವೆ ಎಂಬುದನ್ನು ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಸೂಚಿಸಬೇಕು. ಯಾವ ಪಕ್ಷ ಸಮುದಾಯಕ್ಕೆ ಪ್ರಾಮುಖ್ಯತೆ ನೀಡುವುದೋ ಆ ಪಕ್ಷ ಅದು ಯಾವುದಾಗಿದ್ದರೂ ಸಮುದಾಯ ಅದರ ಪರ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಿಂದುಳಿದ ಸಮುದಾಯವಾದ ವಿಶ್ವಕರ್ಮ ಸಮಾಜಕ್ಕೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಅಗತ್ಯ ಕಾರ್ಯಕ್ರಮಗಳನ್ನು ಪಕ್ಷಗಳು ಘೋಷಿಸಬೇಕು.
ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ: ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಅಂತ್ಯ
ಪ್ರಣಾಳಿಕೆಯಲ್ಲಿ ಈ ಬಗ್ಗೆ ಸ್ಪಷ್ಟ ಭರವಸೆಗಳು ದೊರೆಯಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕನಿಷ್ಠ ಮೂರು ಸಾವಿರದಿಂದ 30 ಸಾವಿರದವರೆಗೂ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮುದಾಯ ಹಿಂದುಳಿದ ವರ್ಗಗಳಲ್ಲಿ ಪ್ರಮುಖ ಸಮುದಾಯವಾಗಿದೆ. ಸಮುದಾಯದ ಜನಸಂಖ್ಯೆಗೆ ತಕ್ಕಂತೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಭ್ಯುದಯ ಸಾಧ್ಯವಾಗಿಲ್ಲ. ಈವರೆಗಿನ ಚುನಾವಣೆಗಳಲ್ಲಿ ಯಾವುದೇ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಭರವಸೆಗಳನ್ನು ನೀಡಿಲ್ಲ.
ಬಜೆಟ್ ಕುರಿತು 12 ದಿನ ಬಿಜೆಪಿ ದೇಶವ್ಯಾಪಿ ಅಭಿಯಾನ: ಇಂದು ಎಲ್ಲ ಸಿಎಂಗಳ ಸುದ್ದಿಗೋಷ್ಠಿ
ಈ ಬಾರಿ ಅದು ಪುನರಾವರ್ತನೆಯಾಗಬಾರದು ಎಂಬುದು ಸಮುದಾಯದ ಬೇಡಿಕೆ. ಹೀಗಾಗಿ ಪ್ರಣಾಳಿಕೆಯಲ್ಲೇ ಸಮುದಾಯದ ಪರ ನಿರ್ದಿಷ್ಟಬೆಂಬಲ ನೀಡುವ ಪಕ್ಷದ ಪರ ನಿಲ್ಲಬೇಕು ಎಂಬುದು ಸಮುದಾಯದ ಒತ್ತಾಸೆ. ಇದಕ್ಕೆ ಪೂರಕವಾಗಿ ವಿಶ್ವಕರ್ಮ ಸಮುದಾಯದ ಮಠಾಧೀಶರು ಪ್ರಣಾಳಿಕೆಯಲ್ಲಿ ನಿರ್ದಿಷ್ಟಭರವಸೆಗಳನ್ನು ನೀಡಿ, ಅದನ್ನು ಜಾರಿಗೊಳಿಸುವ ಬದ್ಧತೆ ಪ್ರಕಟಿಸುವ ಪಕ್ಷದ ಪರ ನಿಲ್ಲಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಸಮುದಾಯದ ಮುಖಂಡರು ಹೇಳುತ್ತಾರೆ.