ಹಾಸ್ಯ ಕಲಾವಿದೆ ಸುಧಾ ಬರಗೂರು ಪತಿ ಜಯಪ್ರಕಾಶ್ ಬರಗೂರು ಇನ್ನಿಲ್ಲ!
ಪ್ರಖ್ಯಾತ ವಾಗ್ಮಿ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಡಾ.ಸಿಎನ್ ಮಂಜುನಾಥ್ ಶಸ್ತ್ರಚಿಕಿತ್ಸೆ ಮಾಡಿದ್ದರು.
ಬೆಂಗಳೂರು (ಡಿ.30): ಪ್ರಖ್ಯಾತ ವಾಗ್ಮಿ, ಹಾಸ್ಯ ಭಾಷಣದಿಂದಲೇ ಜನಪ್ರಿಯರಾಗಿದ್ದ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ನಿಧನರಾಗಿದ್ದಾರೆ. ಬಹಳ ಕಾಲದಿಂದ ಅನಾರೋಗ್ಯದಲ್ಲಿದ್ದ ಜಯಪ್ರಕಾಶ್ ಬರಗೂರು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಜಯಪ್ರಕಾಶ್ ಬರಗೂರು ಅವರಿಗೆ ಕೆಲವು ವರ್ಷಗಳಿಂದ ಹೃದಯ ಸಮಸ್ಯೆ ಭಾದಿಸುತ್ತಿತ್ತು. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಾಗೂ ಹಾಲಿ ಸಂಸದರಾಗಿರುವ ಡಾ.ಸಿಎನ್ ಮಂಜುನಾಥ್ ಇವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು. ಈ ಬಗ್ಗೆ ಸ್ವತಃ ಸುಧಾರ ಬರಗೂರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಹೃದಯ ಸಮಸ್ಯೆಯ ಕಾರಣದಿಂದಾಗಿಯೇ ಸಾವು ಕಂಡಿದ್ದಾರೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಜಯಪ್ರಕಾಶ್ ಬರಗೂರು ವರು ಪತ್ನಿ, ಓರ್ವ ಪುತ್ರಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ನಾಳೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕತ್ರಿಗುಪ್ಪೆಯ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿ ಇರುವ ಸುಧಾ ಬರಗೂರು ಅವರ ನಿವಾಸದಲ್ಲಿ ನಾಳೆ ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹಾಸ್ಯ ಕಾರ್ಯಕ್ರಮದಲ್ಲಿ ತಮ್ಮ ಪಟಪಟ ಮಾತುಗಳ ಮೂಲಕ ಸಖತ್ ಜನಪ್ರಿಯರಾಗಿದ್ದ ಸುಧಾ ಬರಗೂರು, ಹಾಸ್ಯದ ಮೂಲಕವೇ ಸಮಾಜದ ಸಮಸ್ಯೆಗಳನ್ನು ಜನರ ಮುಂದಿಡುತ್ತಿದ್ದರು. ಸಮಾಜದಲ್ಲಿ ಹೆಣ್ಣು-ಗಂಡುಗಳ ನಡುವಿನ ತಾರತಮ್ಯ, ಸಂಸಾರ, ಮದುವೆ ಬಗ್ಗೆ ತಮಾಷೆಯಾಗಿಯೇ ತಿಳಿಹೇಳುತ್ತಿದ್ದ ಸುಧಾ ಬರಗೂರು ಜೀವನದಲ್ಲೀಗ ಮೌನ ಆವರಿಸಿದೆ.
12 ಸಾವಿರ ನೃತ್ಯಪಟುಗಳೊಂದಿಗೆ ಭರತನಾಟ್ಯ, ನಟಿ ದಿವ್ಯಾ ಉನ್ನಿ ಹೆಸರಿಗೆ ಗಿನ್ನೆಸ್ ವಿಶ್ವದಾಖಲೆ!
ಕಳೆದ ವರ್ಷ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ಅವರ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ವೇಳೆಸ ಸುಧಾ ಬರಗೂರು ಒಂದು ವಿಟಿಯಲ್ಲಿ ಮಾತನಾಡಿದ್ದರು. ತಮ್ಮ ಪತಿ ಜಯಪ್ರಕಾಶ್ ಅವರು ಮಂಜುನಾಥ್ ಅವರ ಆರೈಕೆ ಹಾಗೂ ಚಿಕಿತ್ಸೆಯಿಂದಲೇ ಬದುಕುಳಿದಿದ್ದರು ಎಂದು ಅಸಲಿ ಸಂಗತಿಯನ್ನು ತಿಳಿಸಿದ್ದರು. ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್‌ನಲ್ಲಿ ಸಮಸ್ಯೆ ಇದ್ದ ದಿನದಲ್ಲಿ, ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಡಾ. ಮಂಜುನಾಥ್ ಎಂದು ಸುಧಾ ಬರಗೂರು ಹೇಳಿದ್ದರು. ಆದರೆ ಇಂದು ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ನಿಧನರಾಗಿದ್ದಾರೆ.
ಭಾರತದ ಮಹಿಳೆಯರ ಬಳಿ ಇದೆ 24 ಸಾವಿರ ಟನ್ ಚಿನ್ನ, ಇದು ವಿಶ್ವದ ಶೇ. 11 ರಷ್ಟು ಎಂದ ವರ್ಲ್ಡ್ ಗೋಲ್ಡ್ ಕೌನ್ಸಿಲ್!