Karnataka rains: ರಾಜ್ಯದಲ್ಲಿ ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ
ಎರಡು ದಿನಗಳ ಸತತ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಸಿದ್ದ ಮಳೆ ಕೊಂಚ ಮಳೆ ಕಡಿಮೆಯಾಗಿತ್ತು. ಆದರೆ ರಾಜ್ಯದಲ್ಲಿ ಇಂದು ಮತ್ತೆ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಬಿರುಗಾಳಿ ಸಹಿತ, ಗುಡುಗು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು (ಮೇ.26) : ಎರಡು ದಿನಗಳ ಸತತ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಸಿದ್ದ ಮಳೆ ಕೊಂಚ ಮಳೆ ಕಡಿಮೆಯಾಗಿತ್ತು. ಆದರೆ ರಾಜ್ಯದಲ್ಲಿ ಇಂದು ಮತ್ತೆ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಬಿರುಗಾಳಿ ಸಹಿತ, ಗುಡುಗು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದುವರೆಯಲಿರುವ ವರ್ಷಧಾರೆ. ಕರಾವಳಿ, ದಕ್ಷಿಣ ಭಾಗದಲ್ಲಿ ಉಷ್ಣಾಂಶ 2-3 ಸೆಲ್ಸಿಯಸ್ ಹೆಚ್ಚಳವಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಇಂದು ಸಂಜೆ ಅಥವಾ ಅಥವಾ ರಾತ್ರಿಯ ವೇಳೆ ಬಿರುಗಾಳಿ ಸಹಿತ ಮಳೆ ಸಾಧ್ಯತೆಯಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆ, ಭಾನುವಾರದ ಬಳಿಕ ಇಳಿಕೆ
ಆಕಾಲಿಕ ಮಳೆ ತೋಟಗಾರಿಕೆ ಬೆಳೆ ಹಾನಿ
ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧೆಡೆ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಜನ-ಜಾನುವಾರು ಸೇರಿದಂತೆ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ.
ಸಿಂದಗಿ, ದೇವರ ಹಿಪ್ಪರಗಿ, ಮುದ್ದೇಬಿಹಾಳ ಹಾಗೂ ವಿಜಯಪುರ ತಾಲೂಕಿನಲ್ಲಿ ಲಿಂಬೆ, ದ್ರಾಕ್ಷಿ, ದಾಳಿಂಬೆ, ಈರುಳ್ಳಿ, ಪಪ್ಪಾಯಿ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಅಕಾಲಿಕ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಆಹೇರಿ ಗ್ರಾಮದ ರೈತ ಸಿದ್ದೇಶ್ವರ ವಿಜಯಪುರ ಅವರ 3 ಎಕರೆ ದ್ರಾಕ್ಷಿ ತೋಟ ಸಂಪೂರ್ಣ ನಾಶವಾಗಿದ್ದು, ದ್ರಾಕ್ಷಿ ಕಂಬಗಳು ಧರೆಗುರುಳಿವೆ.
ಆಲಿಕಲ್ಲು ಹೊಡೆತಕ್ಕೆ ದ್ರಾಕ್ಷಿ ಬಳ್ಳಿಯ ಎಲೆ, ಕಡ್ಡಿಗಳು ಪೂರ್ಣ ಪ್ರಮಾಣದಲ್ಲಿ ಕಿತ್ತು ಬಿದ್ದಿವೆ. ಕೆಲವೊಂದು ಗಿಡಗಳು ಬುಡ ಸಮೇತ ಕಿತ್ತಿಕೊಂಡು ಹೋಗಿದ್ದು ರೈತ ಸಿದ್ದೇಶ್ವರ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ.
ವಿಜಯಪುರ ತಾಲೂಕು ಒಂದರಲ್ಲೇ ಸುಮಾರು 50 ಎಕರೆಗೂ ಹೆಚ್ಚಿನ ಪ್ರಮಾಣದ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಆಹೇರಿ ಗ್ರಾಮದಲ್ಲಿ ಸುಮಾರು 200 ಮನೆಗಳ ಪತ್ರಾಸ್ ಕಿತ್ತು ಹೋಗಿದ್ದು ಬಡವರ ಬದುಕು ಬೀದಿಗೆ ಬೀಳುವಂತೆ ಮಡಿದೆ.
ಜಂಬಗಿ (ಆ) ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದ ಗ್ರಾಮದಲ್ಲಿ ಬೆಳೆದ ದಾಳಿಂಬೆ, ದ್ರಾಕ್ಷಿ, ನಿಂಬೆ, ಮಾವಿನ ಗಿಡಗಳು ಮುರಿದು ಧರೆಗೆ ಉರುಳಿ ಬಿದ್ದಿವೆ. ರೈತರ ವಾಸಕ್ಕೆ ಹಾಕಿರುವ ಪತ್ರಾಸ ಶೆಡ್ಡು, 20 ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಟಿ.ಸಿ.ಗಳು ಬಿದ್ದಿರುತ್ತವೆ.
ಚಿಕ್ಕಮಗಳೂರಲ್ಲಿ ರೇನ್ ಅಲರ್ಟ್, ಮಳೆ ಆರಂಭಕ್ಕೂ ಮುನ್ನವೇ ಎಲ್ಲ ಸಿದ್ಧತೆ
ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಸಿಡಿಲಿಗೆ ಮಲ್ಲಪ್ಪ ತಳವಾರ ಎಂಬುವರಿಗೆ ಸೇರಿದ ಎಮ್ಮೆ ಅಸುನೀಗಿದೆ. ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಬುಧವಾರ ಸಂಜೆ ಗಾಳಿ ಮಳೆಗೆ ಪತ್ರಾಸ್ ಶೆಡ್ ಹಾರಿ ನಾಲ್ಕು ಜನರಿಗೆ ಗಾಯವಾಗಿದೆ. ತಾಳಿಕೋಟಿ, ಕಲಕೇರಿ ಗ್ರಾಮದ ಮಾಬಣ್ಣಿ ಮೌಲಾಸಾಬ ಬಡಿಗೇರ ಅವರ ಮನೆ ಮೇಲೆ ಬೃಹತ್ ಮರ ಬಿದ್ದು ಮನೆ ಹಾನಿಯಾಗಿರುವುದು ವರದಿಯಾಗಿದೆ.
ವಾ ರಾತ್ರಿಯ ವೇಳೆ ಬಿರುಗಾಳಿ ಸಹಿತ ಮಳೆ ಸಾಧ್ಯತೆಯಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.