ಐಐಟಿ, ಮೂಲಭೂತ ಸೌಕರ್ಯದ ಮೂಲಕ ಮುಂದಿನ ಜನಾಂಗದ ಭವಿಷ್ಯ ರೂಪಿಸಿದ ಮೋದಿ, ಸಿಎಂ ಶ್ಲಾಘನೆ!
ಐಐಟಿ ಕಾಲೇಜು ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ ಕರ್ನಾಟಕಕ್ಕೆ ನೀಡಿದ ಕೊಡುಗೆ ಸ್ಮರಿಸಿದ್ದಾರೆ. ಇದೇ ವೇಳೆ ಮುಂದಿನ ಜನಾಂಗವನ್ನು ಮೋದಿ ತಯಾರು ಮಾಡುತ್ತಿದ್ದಾರೆ ಎಂದರು.
ಧಾರವಾಡ(ಮಾ.12): ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಆದರೆ ಮುತ್ಸದ್ದಿ ನಾಯಕನ ಚಿಂತನೆ ಮುಂದಿನ ಜನಾಂಗವನ್ನು ತಯಾರು ಮಾಡುತ್ತ ಇರುತ್ತದೆ. ಪ್ರಧಾನಿ ಮೋದಿ ಐಐಟಿ ನೀಡುವ ಮೂಲಕ ಮುಂದಿನ ಜನಾಂಗವನ್ನು ಶಿಕ್ಷಣ, ಅವರ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವಾರಾಜ್ ಬೊಮ್ಮಾಯಿ ಹೇಳಿದ್ದಾರೆ.
ಯಾವತ್ತೂ ಕೂಡ ಇಷ್ಟ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಲ್ಲ. ಹೀಗಾಗಿ ವಿಶೇಷವಾಗಿ ನಿಮ್ಮಲ್ಲೆರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತೆ. ಆದರೆ ಮುತ್ಸದ್ದಿ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಮುಂದಿನ ಜನಾಂಗವನ್ನು ತಯಾರು ಮಾಡಬಲ್ಲ ಐಐಟಿಗೆ ಹಣಕೊಟ್ಟು, ಅನುಮೋದನೆ ನೀಡಿ ಇದೀಗ ಅವರೆ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಮುತ್ಸದ್ದಿ ನಾಯಕರು ಮಾಡುವ ಕೆಲಸ. ಮುತ್ಸದ್ದಿ ನಾಯಕ ಭವಿಷ್ಯವನ್ನು ಯೋಜಿಸುತ್ತಾರೆ. ಇದಕ್ಕೆ ಮೋದಿ ಸಾಕ್ಷಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
Photos: ಸಕ್ಕರೆ ನಾಡಿನಲ್ಲಿ ಮೋದಿ ಮೇಲೆ ಕೇಸರಿ ಹೂವಿನ ಮಳೆ, ರೋಡ್‌ಶೋನಲ್ಲಿ ವ್ಯಕ್ತವಾದ ಮಂಡ್ಯ ಪ್ರೀತಿ!
ಮೋದಿ ದೂರದೃಷ್ಟಿಯಿಂದ ಕರ್ನಾಟಕದಲ್ಲಿ ಎಲ್ಲಾ ಪ್ರಮುಖ ರೇಲ್ವೇ ಟ್ರ್ಯಾಕ್ ವಿದ್ಯುದ್ದೀಕರಣ ಮಾಡಲಾಗುತ್ತಿದೆ. ಬೆಂಗಳೂರು ಹುಬ್ಳಿ, ಮಂಗಳೂರು ಕೊಚ್ಚಿ ಸೇರಿದಂತೆ ಎಲ್ಲಾ ರೈಲಿನ ವಿದ್ಯುದ್ದೀಕರಣ ಮಾಡಲಾಗುತ್ತಿದೆ. 2022-23 ಹಾಗೂ 2023-24ರ ಬಜೆಟ್‌ನಲ್ಲಿ ರೈಲ್ವೇಗೆ ಅತೀ ಹೆಚ್ಚಿನ ಅನುದಾನ ನೀಡಿದ್ದಾರೆ. ಅದೇ ರೀತಿ ಕರ್ನಾಟಕಕ್ಕೆ ಅತೀ ಹೆಚ್ಚಿನ ಅನುದಾನ ನೀಡಿದ್ದಾರೆ. ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ಮೊತ್ತ ಕರ್ನಾಟಕಕ್ಕೆ ನೀಡಿದ್ದಾರೆ. ಇಷ್ಟು ದೊಡ್ಡ ಮೊತ್ತ ಇದುವರೆಗೆ ಯಾರು ಕರ್ನಾಟಕಕ್ಕ ನೀಡಿಲ್ಲ. ಇದು ಡಬಲ್ ಎಂಜಿನ್ ಸರ್ಕಾರಕ್ಕೆ ಮಾತ್ರ ಸಾಧ್ಯ ಎಂದು ಬೊಮ್ಮಾಯಿ ಹೇಳಿದ್ದಾರೆ.
ನವ ಕರ್ನಾಟಕ ಮಾಡುವ ಸಾಮಾರ್ಥ್ಯ, ಧಮ್ ಡಬಲ್ ಎಂಜಿನ್ ಸರ್ಕಾರಕ್ಕೆ ಮಾತ್ರ ಸಾಧ್ಯ. ಇಡೀ ದೇಶದಲ್ಲಿ ಅತೀ ಕಡಿಮೆ ನಿರುದ್ಯೋಗದ ರಾಜ್ಯ ಕರ್ನಾಟಕ. ಕಳೆದ 5 ವರ್ಷದಲ್ಲಿ 33 ಲಕ್ಷ ಉದ್ಯೋಗ ನೀಡಲಾಗಿದೆ. ಇದರ ಹಿಂದಿರುವುದು ಡಬಲ್ ಎಂಜಿನ ಸರ್ಕಾರ ಎಂದು ಬೊಮ್ಮಾಯಿ ಹೇಳಿದ್ದಾರೆ.
ಈ ಭಾಗದಲ್ಲಿ ಎಫ್ಎಂಸಿ, ಎಸ್ಆರ್ ಕೊಡಲಾಗಿದೆ. ಜಯದೇವ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗಿದೆ. ಧಾರವಾಡ ಬೆಳಗಾವಿ ರೈಲು ಟ್ರ್ಯಾಕ್ ಕಾಮಗಾರಿ ಆರಂಭಿಸಲಾಗಿದೆ. ಕರ್ನಾಟದಲ್ಲಿ ಸಂಪರ್ಕವನ್ನು ಸುಲಭ ಹಾಗೂ ಎಲ್ಲಾ ಮೂಲೆ ಮೂಲೆಗೆ ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮೋದಿ ಸರ್ಕಾರ ದೊಡ್ಡ ಕಾಣಿಕೆ ನೀಡಲಾಗಿದೆ.
ಮಾತಿನಲ್ಲಿ ಅಭಿವೃದ್ಧಿಯಾಗುವುದಿಲ್ಲ, ಅದನ್ನು ಮಾಡಿತೋರಿಸುವ ಛಾತಿ ಮೋದಿಗಿದೆ. ಶಿಕ್ಷಣ, ಮೂಲಭೂತ ಸೌಕರ್ಯ, ಕೈಗಾರಿಕೆ ಅಭಿವೃದ್ಧಿ ಪ್ರಧಾನಿ ಮೋದಿ ನೀಡಿದ್ದಾರೆ. ಮೋದಿ ಮುತ್ಸದ್ದಿ ನಾಯಕ, ಹೊಸ ಜನಾಂಗದ ಯುವ ಸಮೂಹವನ್ನು ಬಲಿಷ್ಠಗೊಳಿಸುತ್ತಿರುವ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿಗೆ ಎಲ್ಲರ ಸಹಕಾರ ಇರಲಿ ಎಂದು ಬೊಮ್ಮಾಯಿ ಹೇಳಿದ್ದಾರೆ.