ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರು : ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಮೊದಲ ಎಐ ಪರ್ಸನಲ್‌ ಕಂಪ್ಯೂಟರ್‌ ಆಗಿದೆ. ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು ಎನ್ನಲಾಗಿದೆ.

ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಕೆಇಒ’ ಅಂದರೆ ಜ್ಞಾನ ಆಧಾರಿತ, ಕಡಿಮೆ ಖರ್ಚಿನ, ಓಪನ್ ಸೋರ್ಸ್‌ ರಿಸ್ಕ್‌-ವಿ ಪ್ರೊಸೆಸರ್‌ ಆಧಾರಿತ ಎಐ ಕಂಪ್ಯೂಟರ್‌ ಎಂದರ್ಥ. ಚಿಪ್ ಸೇರಿ ಎಲ್ಲವನ್ನೂ ಸಂಪೂರ್ಣವಾಗಿ ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಿ ನಿರ್ಮಿಸಲಾಗಿದೆ. ಅಲ್ಲದೆ, ಇದು ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ನ.18ರಿಂದ ಕಿಯೋನೆಕ್ಸ್ಟ್‌ಪೋರ್ಟಲ್‌ ಅಲ್ಲಿ ಪ್ರೀಬುಕ್ಕಿಂಗ್ ಲಭ್ಯವಿದೆ. 2 ತಿಂಗಳ ನಂತರ ಡೆಲಿವರಿ ಆರಂಭವಾಗುತ್ತದೆ ಎಂದು ತಿಳಿಸಿದರು.

ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಿಯೋ, ಕಂಪ್ಯೂಟಿಂಗ್‌ನ ನೈಜ ಅನುಭವ ನೀಡುತ್ತದೆ. 4ಜಿ, ವೈ-ಫೈ, ಎಥರ್‌ನೆಟ್‌, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್, ಎಚ್‌ಡಿಎಂಐ ಮತ್ತು ಆಡಿಯೋ ಜಾಕ್ ಕೂಡ ಕಿಯೋ ಹೊಂದಿರಲಿದೆ. ಇದರಲ್ಲಿ ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮ್‌ಗಳು ಮತ್ತು ಪ್ರೊಡಕ್ಟಿವಿಟಿ ಟೂಲ್ಸ್ ಇರುತ್ತವೆ ಎಂದು ಸಚಿವರು ತಿಳಿಸಿದರು.

ರಾಜ್ಯ ಪಠ್ಯಕ್ರಮದ ಪಠ್ಯವೂ ಕಂಪ್ಯೂಟರ್‌ನಲ್ಲಿ ಲಭ್ಯವಾಗಲಿದೆ. ಬುದ್ಧ ಹೆಸರಿನ ಎಐ ಏಜೆಂಟ್‌ ಸಾಫ್ಟ್‌ವೇರ್‌ ಈ ಪಠ್ಯವನ್ನು ಓದಲು, ಅರ್ಥೈಸಿಕೊಳ್ಳಲು ನೆರವಾಗುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕಂಪ್ಯೂಟರ್‌ನಲ್ಲಿ ಏನೇನಿದೆ?

ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಿಯೋ, ಕಂಪ್ಯೂಟಿಂಗ್‌ನ ನೈಜ ಅನುಭವ ನೀಡುತ್ತದೆ. 4ಜಿ, ವೈ-ಫೈ, ಎಥರ್‌ನೆಟ್‌, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್, ಎಚ್‌ಡಿಎಂಐ ಮತ್ತು ಆಡಿಯೋ ಜಾಕ್ ಕೂಡ ಕಿಯೋ ಹೊಂದಿರಲಿದೆ. ಇದರಲ್ಲಿ ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮ್‌ಗಳು ಮತ್ತು ಪ್ರೊಡಕ್ಟಿವಿಟಿ ಟೂಲ್ಸ್ ಒಳಗೊಂಡಿದೆ.

ರಾಜ್ಯದ ಪಠ್ಯವೂ ಇದರಲ್ಲಿ ಲಭ್ಯ

ರಾಜ್ಯ ಪಠ್ಯಕ್ರಮದ ಪಠ್ಯವೂ ಕಂಪ್ಯೂಟರ್‌ನಲ್ಲಿ ಲಭ್ಯವಾಗಲಿದೆ. ಬುದ್ಧ ಹೆಸರಿನ ಎಐ ಏಜೆಂಟ್‌ ಸಾಫ್ಟ್‌ವೇರ್‌ ಈ ಪಠ್ಯವನ್ನು ಓದಲು, ಅರ್ಥೈಸಿಕೊಳ್ಳಲು ನೆರವಾಗುತ್ತದೆ.