ಬೆಂಗಳೂರು, [ಜ.14]: ಪ್ರಾದೇಶಿಕ ಅಸಮಾನತೆಯ ಕೂಗಿಗೆ ತೇಪೆ ಹಚ್ಚಲು ರಾಜ್ಯ ಮೈತ್ರಿ ಸರ್ಕಾರ ಮುಂದಾಗಿದೆ.

ಪ್ರಾದೇಶಿಕ ಅಸಮಾನತೆಯಿಂದ ತಪ್ಪಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಮೈತ್ರಿ ಸರ್ಕಾರ 9 ಪ್ರಮುಖ ಸರ್ಕಾರಿ ಕಚೇರಿಗಳು ಉತ್ತರಕರ್ನಾಟಕಕ್ಕೆ ಶಿಫ್ಟ್ ಮಾಡಿದೆ.

ಅದರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಿರುವ ಸರ್ಕಾರ,  ಉತ್ತರಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಸ್ಥಾಪಿಸಿ ಹುಬ್ಬಳ್ಳಿಗೆ ಸ್ಥಳಾಂತರ ಮಾಡಿದೆ.

ಸ್ಥಳಾಂತರಗೊಂಡ ಕಚೇರಿಗಳು ಎಪ್ರೀಲ್ 1 ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಣೆ ಮಾಡಲಿವೆ.

ಉತ್ತರ ಕರ್ನಾಟಕ್ಕೆ ಪ್ರತಿಯೊಂದರಲ್ಲೂ ಉತ್ತರ ಕರ್ನಾಟಕವನ್ನು ಕಡೆಗಣೆಸುತ್ತಿದೆ ಎಂಬ ಆರೋಪಕ್ಕೆ ರಾಜ್ಯ ಮೈತ್ರಿ ಸರ್ಕಾರ ತುತ್ತಾಗಿತ್ತು. ಈ ಆರೋಪದಿಂದ ಹೊರ ಬರಲು ಕುಮಾರಸ್ವಾಮಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. 

ಹಾಗಾದ್ರೆ 9 ಕಚೇರಿಗಳಾವುವು? ಇಲ್ಲಿದೆ ಪಟ್ಟಿ

1 ಕೃಷ್ಣಾ ಭಾಗ್ಯ ಜಲ ನಿಗಮ-ಆಲಮಟ್ಟಿ
2 ಕರ್ನಾಟಕ ನೀರಾವರಿ ನಿಗಮ-ದಾವಣಗೆರೆ
3 ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ-ಬೆಳಗಾವಿ
4 ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ-ಬೆಳಗಾವಿ
5. ಉತ್ತರಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಸ್ಥಾಪಿಸಿ ಹುಬ್ಬಳ್ಳಿಗೆ ಸ್ಥಳಾಂತರ.
6. ಪುರಾತತ್ವ ಸಂಗ್ರಹಾಲಯಗಳೂ ಮತ್ತು ಪರಂಪರೆ ಇಲಾಖೆ-ಹಂಪಿ
7. ಮಾನವ ಹಕ್ಕುಗಳ ಆಯೋಗದ ಓರ್ವ ಸದಸ್ಯರ ಕಚೇರಿ-ಧಾರವಾಡ
8. ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಇಬ್ಬರ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದ್ದು, ಓರ್ವ ಆಯುಕ್ತರ ಕಚೇರಿ ಕಲ್ಬುರ್ಗಿಗೆ ಮತ್ತೊಂದು ಬೆಳಗಾವಿಗೆ ಸ್ಥಳಾಂತರ.
9. ಕರ್ನಾಟಕ ಲೋಕಾಯುಕ್ತ ಕಚೇರಿಯ ಉಪ ಆಯುಕ್ತರ ಒಂದು ಕಚೇರಿ-ಧಾರವಾಡ.