ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ, ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರ್ಕಾರ!

ಲಾಕ್‌ಡೌನ್ ವೇಳೆ ನಡೆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಸ್ಯಾಂಡಲ್‌ವುಟ್ ನಟ ನಿಖಿಲ್ ಕುಮಾರಸ್ವಾಮಿ ವಿವಾಹ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಾಮಾನ್ಯರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಅನ್ನೋ ಆರೋಪಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ವರದಿ ಕೇಳಿತ್ತು. ಇದೀಗ ಸರ್ಕಾರ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ ವಿವರವಾದ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. 
 

State government submit detail report of Nikhil Kumaraswamy marriage during lockdown

ಬೆಂಗಳೂರು(ಮೇ.05): ಲಾಕ್‌ಡೌನ್ ಕಟ್ಟು ನಿಟ್ಟಿನ ನಿಯಮದ ನಡುವೆ ಸ್ಯಾಂಡಲ್‌ವುಡ್ ನಟ, ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ವಿವಾದಕ್ಕೆ ಕಾರಣವಾಗಿತ್ತು. ರಾಮನಗರ ಜಿಲ್ಲೆಯಲ್ಲಿ ನಡೆದ ವಿವಾಹ ಮಹತೋತ್ಸವ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೀಗ ರಾಜ್ಯ ಸರ್ಕಾರ ನಿಖಿಲ್ ಮದುವೆ ವಿಚಾರವಾಗಿ ವಿವರಣೆಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. 

7-10 ಕೋಟಿ ವೆಚ್ಚದ ಮದುವೆ ಹಣದಿಂದ ರಾಮನಗರ ಜನತೆಗೆ ನಿಖಿಲ್ ಸಹಾಯ!

ಏ.17 ರಂದು ರಾಮನಗರ ಜಿಲ್ಲೆಯ  ಕೇತಿಗಾನಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆದಿತ್ತು. ಈ ಕುರಿತು ರಾಜ್ಯ ಸರ್ಕಾರದ ವಕೀಲ ವಿಕ್ರಮ್ ಹುಯಿಲ್ಗೊಳ್ ವರದಿ ಸಲ್ಲಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ 80-95 ಕುಟುಂಬಸ್ಥರು ಭಾಗವಹಿಸಿದ್ದರು. ಮದುವೆಗೆ ರಾಮನಗರ ಡಿಸಿ ಅನುಮತಿ ನೀಡಿದ್ದರು. ಇಷ್ಟೇ ಅಲ್ಲ ಮದುವೆಗೆ ಆಗಮಿಸಿದ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು ಎಂದು ವರದಿಯಲ್ಲಿ ಹೇಳಿದೆ.

ಮದುವೆಗೆ ಆಗಮಿಸಿದವರೆಲ್ಲರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಮದುವೆ ಸಮಾರಂಭದಲ್ಲಿ ಎಲ್ಲರೂ ಮಾಸ್ಕ್ ಧರಿಸಿದ್ದರು. ಆದರೆ ಮಾಂಗಲ್ಯ ಧಾರಣೆ ವೇಳೆ ಮಾಸ್ಕ್ ಧರಿಸಿಲ್ಲ. ಸಂಪೂರ್ಣ ಸಮಾರಂಭ 2 ಗಂಟೆಯಲ್ಲಿ ಮುಗಿಸಲಾಗಿದೆ. ಬೆಳಗ್ಗೆ 8 ರಿಂದ 10 ಗಂಟೆಯೊಳಗೆ ಮದುವೆ ಸಮಾರಂಭ ನಡೆದಿದೆ ಎಂದು ಸರ್ಕಾರಿ ಪರ ವಕೀಲ್ ವಿಕ್ರಮ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಕೊರೋನಾ ವೈರಸ್ ಆರ್ಭಟ ಹೆಚ್ಚಾದಂತೆ ಕೇಂದ್ರ ಸರ್ಕಾರ ಲಾಕ್‌ಡೌನ್ ಹೇರಲಾಗಿತ್ತು. ಮಾರ್ಚ್ 24 ರಂದು ಹಾಗೂ ಏಪ್ರಿಲ್ 15 ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಯಾವುದೇ ಸಭೆ ಸಮಾರಂಭ ನಡೆಸುವಂತಿರಲಿಲ್ಲ. ಇಷ್ಟೇ ಅಲ್ಲ ಮದುವೆ ಕೂಡ ನಡೆಸುವಂತಿಲ್ಲ. ಆದರೆ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಿಂದ ಪಾಸ್ ಪಡೆದಿದ್ದಾರೆ. ಮದುವೆಯಲ್ಲಿ 80 ರಿಂ 90 ಮಂದಿ ಭಾಗವಹಿಸಿದ್ದಾರೆ. ಈ ಮೂಲಕ ಮಾರ್ಗ ಸೂಚಿ ಉಲ್ಲಂಘಿಸಲಾಗಿದೆ ಎಂದು ವಕೀಲ್ ಜಿಆರ್ ಮೋಹನ್ ಹೈಕೋರ್ಟ್ ಗಮನಕ್ಕೆ ತಂದಿದ್ದರು.


 

Latest Videos
Follow Us:
Download App:
  • android
  • ios