ಕೊರೋನಾ ವಿರುದ್ಧ ಹೋರಾಟ: ಕೋವಿಡ್‌ ಪರೀಕ್ಷೆ ದರ ಇಳಿಸಿದ ಸರ್ಕಾರ

ಸರ್ಕಾರ ಕಳುಹಿಸುವ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಪ್ರತಿ ಪರೀಕ್ಷೆಗೆ 1200 ರು. ಪಡೆಯಬೇಕು| ಖಾಸಗಿ ಮೂಲಗಳಿಂದ ಬಂದ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಗರಿಷ್ಠ 1600 ರು. ಮಾತ್ರ ಪಡೆಯಬೇಕು| ಕೋವಿಡ್‌ ಪರೀಕ್ಷಾ ದರ ಮರುನಿಗದಿ ಮಾಡಿದ ಸರ್ಕಾರ| 

State Government Reduced Covid19 Test Rate

ಬೆಂಗಳೂರು(ಸೆ.27):  ಕೋವಿಡ್‌-19 ಪತ್ತೆ ಹಚ್ಚುವ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ದರವನ್ನು 1200 ರು.ಗೆ ಇಳಿಸಿ ರಾಜ್ಯ ಸರ್ಕಾರ ದರ ಮರುನಿಗದಿ ಮಾಡಿದೆ. 

ಸರ್ಕಾರ ಕಳುಹಿಸುವ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಪ್ರತಿ ಪರೀಕ್ಷೆಗೆ 1200 ರು. ಪಡೆಯಬೇಕು ಮತ್ತು ಖಾಸಗಿ ಮೂಲಗಳಿಂದ ಬಂದ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಗರಿಷ್ಠ 1600 ರು. ಮಾತ್ರ ಪಡೆಯಬೇಕು. 

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಕೊರೋನಾ ದೃಢ

ಸರ್ಕಾರವು ಆಗಸ್ಟ್‌ 17ರಂದು ತಾನು ಕಳುಹಿಸುವ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಪ್ರತಿ ಪರೀಕ್ಷೆಗೆ 1,500 ರು. ಮತ್ತು ಖಾಸಗಿ ಮೂಲಗಳಿಂದ ಬಂದ ನಮೂನೆಗಳಿಗೆ ಖಾಸಗಿ ಪ್ರಯೋಗಾಲಯಗಳು ಗರಿಷ್ಠ 2,500 ರು. ವಿಧಿಸಬಹುದು ಎಂದು ಆದೇಶಿಸಿತ್ತು. ಕಾರ್ಯಪಡೆ ಸಮಿತಿಯ ಶಿಫಾರಸಿನ ಮೇರೆಗೆ ಹಳೆ ದರವನ್ನು ಪರಿಷ್ಕರಿಸಿ ಹೊಸ ದರ ನಿಗದಿ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ.
 

Latest Videos
Follow Us:
Download App:
  • android
  • ios