ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ್ದಾರೆ. ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸದೃಢವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು (ಫೆ.21): ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ನಾಯಕರ ವಿರುದ್ಧ ಸಿಎಂ ಟೀಕಾಪ್ರಹಾರ ಮಾಡಿದ್ದು, ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿನಿಲ್ಲುವಷ್ಟು ಸದೃಢವಾಗಿದೆ ಎಂದಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ರಾಜ್ಯದ ಆದಾಯ ಪಾತಾಳದತ್ತ ಕುಸಿದಿತ್ತು. ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ. ಬಿಜೆಪಿ ಕಾಲಾವಧಿಯಲ್ಲಿ 270695 ಕೋಟಿ ಮೊತ್ತದ ಕಾಮಗಾರಿಗೆ ಅನುದಾನ ಕೊಟ್ಟಿಲ್ಲ. ಬಿಜೆಪಿ ಕಾಲದಲ್ಲಿ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿ..ಇದನ್ನು ನಿರ್ವಹಣೆಯನ್ನು ಕೇವಲ ಒಂದೆಡರು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೇ..? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಕಾಲದಲ್ಲಿ ಸಂಗ್ರಹಿಸಿದ ಜಿಎಸ್ ಟಿ ಸೆಸ್ ನಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿದರು. ಇದರಿಂದ ರಾಜ್ಯಕ್ಕೆ 18 ರಿಂದ 19 ಸಾವಿರ ಕೋಟಿ ರೂ ಆದಾಯ ಕಡಿಮೆಯಾಯಿತು. ರಾಜ್ಯದಲ್ಲಿ ಸಂಗ್ರಹಿಸುವ ತೆರಿಗೆಗೆ ಬಿಡಿಗಾಸನ್ನು ಮಾತ್ರ ಕೇಂದ್ರ ಸರ್ಕಾರ ನೀಡುತ್ತದೆ. ಹಣಕಾಸು ಆಯೋಗ ಹೇಳಿದರೂ ಕೇಂದ್ರ ಸರ್ಕಾರ 11,495 ಕೋಟಿ ರೂ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ 5300 ಕೋಟಿ ರೂ ಕೊಟ್ಟಿಲ್ಲ. ಕೇಂದ್ರ ಮಾಡಿರುವ ಸಾಲದ ಬಗ್ಗೆ ವಿಜಯೇಂದ್ರ ಅವರು ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ 14 ಸೈಟ್ ಯಾಕೆ ವಾಪಸ್ ಕೊಟ್ಟರು?: ಶಾಸಕ ಟಿ.ಎಸ್.ಶ್ರೀವತ್ಸ
ಮಾಜಿ ಸಿಎಂ ಬೊಮ್ಮಾಯಿಯವರು ಕೇಂದ್ರ ಬಜೆಟ್ ನ್ನು ಸರಿಯಾಗಿ ಓದಿದ್ದಾರೆಯೇ..? ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕಾರಣಕ್ಕೆ ಬಂಡವಾಳ ಹರಿದುಬಂದಿದೆ. 10.27 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆಗಳಿಗೆ ಒಪ್ಪಂದಗಳಾಗಿವೆ.. ಬಿಜೆಪಿಯವರು ಎಷ್ಟೇ ಪಿತೂರಿ, ದ್ರೋಹ ಮಾಡಿದರೂ, ರಾಜ್ಯ ತಲೆ ಎತ್ತಿ ನಿಲ್ಲಲಿದೆ.. ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸಧೃಡವಾಗಿದೆ ಎಂದು ಹೇಳಿದ್ದಾರೆ.
'ಸಿದ್ದರಾಮಯ್ಯ ಸಾಹೇಬ್ರು ಪ್ರಾಮಾಣಿಕರು ಎಂದು ಎದೆತಟ್ಟಿ ಹೇಳುವೆ' ಶಾಸಕ ಪ್ರದೀಪ್ ಈಶ್ವರ್
