Asianet Suvarna News Asianet Suvarna News

'ಡಿಕೆಶಿಯೇ ಯಾಕೆ ಜಮೀರ್‌ ಮನೆ ಮೇಲೆ ದಾಳಿ ಮಾಡಿಸಿರಬಾರದು?'

* ಶಾಸಕಕ ಜಮೀರ್‌ ಅಹಮದ್ ಮನೆ ಮೇಲೆ ಐಟಿ ದಾಳಿ

* 'ಡಿಕೆಶಿಯೇ ಯಾಕೆ ಜಮೀರ್‌ ಮನೆ ಮೇಲೆ ದಾಳಿ ಮಾಡಿಸಿರಬಾರದು?'

* ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರಶ್ನೆ

ST Somashekar Says DK Shivakumar Might Be The Reason For ED Raid On Zameer Ahmed pod
Author
Bangalore, First Published Aug 7, 2021, 8:42 AM IST
  • Facebook
  • Twitter
  • Whatsapp

ಮೈಸೂರು(ಆ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಯಾಕೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಮನೆ ಮೇಲೆ ದಾಳಿ ಮಾಡಿಸಿರಬಾರದು ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್‌ ಪದೇ ಪದೆ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿ.ಕೆ. ಶಿವಕುಮಾರ್‌ಗೆ ಅಜೀರ್ಣವಾಗಿರಬೇಕು. ಡಿ.ಕೆ. ಶಿವಕುಮಾರ್‌ಗೆ ಇ.ಡಿ, ಐಟಿಯ ಲಿಂಕ್‌ ಜಾಸ್ತಿ ಬೆಳೆದಿದೆ. ಹೀಗಾಗಿ, ಅವರೇ ಯಾಕೆ ಜಮೀರ್‌ ಮನೆ ಮೇಲೆ ದಾಳಿ ಮಾಡಿಸಿರಬಾರದು ಎಂದು ಅನುಮಾನ ವ್ಯಕ್ತಪಡಿಸಿದರು. ಶಾಸಕ ಜಮೀರ್‌, ಮಾಜಿ ಸಚಿವ ರೋಷನ್‌ ಬೇಗ್‌ ಮೇಲೆ ಇ.ಡಿ. ದಾಳಿ ರಾಜಕೀಯ ಪ್ರೇರಿತ ಅಲ್ಲ. ಈ ದಾಳಿಯನ್ನು ಬಿಜೆಪಿ ಮಾಡಿಸಿದೆ ಎಂಬ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಆರೋಪದಲ್ಲಿ ಹುರುಳಿಲ್ಲ ಎಂದರು.

ಕರಪ್ಟ್‌ ಶಾಸಕನ ಪರ ಭ್ರಷ್ಟ ಕಾಂಗ್ರೆಸ್‌ ಅಧ್ಯಕ್ಷನ ವಕಾಲತ್ತು: ಬಿಜೆಪಿ

ಸಿಎಂ ನಿನಗೆ ಯಾವ ಖಾತೆ ಬೇಕು ಎಂದು ನನಗೆ ಕೇಳಿದರೆ ನಾನು ಬೆಂಗಳೂರು ಅಭಿವೃದ್ಧಿ ಮತ್ತು ಬಿಡಿಎ ಖಾತೆ ಬೇಕು ಎನ್ನುತ್ತೇನೆ. ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೆ ಅಗತ್ಯ ಇದೆ ಎಂದರು.

ಅವರು ಕೇಳುವುದಿಲ್ಲ, ನಾನು ಹೇಳುವುದಿಲ್ಲ ಎಂದು ಗೊತ್ತಿದೆ. ನೀವು ಕೇಳುತ್ತಿದ್ದಿರಿ, ನಾನು ಹೇಳುತ್ತಿದ್ದೇನೆ ಅಷ್ಟೇ. ಇಂಥದ್ದೇ ಖಾತೆ ಕೊಡಿ ಎಂದು ನಾನು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios