ಸಿದ್ದರಾಮಯ್ಯ ಕ್ಷೇತ್ರದಲ್ಲಿ ಶ್ರೀರಾಮುಲು ಹವಾ: ರಾರಾಜಿಸುತ್ತಿದೆ ಪೋಸ್ಟರ್!

ಶ್ರೀರಾಮುಲು ಬಾದಾಮಿಯಲ್ಲಿ ಸೋತರೂ ಖದರ್ ಕಡಿಮೆಯಾಗಿಲ್ಲ| ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗಿಂತ ಶ್ರೀರಾಮುಲು ಹವಾ ಜೋರು| ಮಹರ್ಷಿ ವಾಲ್ಮಿಕಿ ಜಯಂತಿ ಸಮಾರಂಭದಲ್ಲಿ ರಾಮುಲು ಪೋಸ್ಟರ್| ಸಮಾರಂಭದ ಮುಖ್ಯ ದ್ವಾರದ ಬಳಿ ರಾಮುಲು ಕಟೌಟ್| ವಾಲ್ಮಿಕಿ ಜಯಂತಿಯಲ್ಲಿ ಪಾಲ್ಗೊಳ್ಳಲು ಇಂದು ಸಿದ್ದು ಬಾದಾಮಿಗೆ 

Sriramulu Posters in Siddaramaiah Constituency Badami

ಬಾದಾಮಿ(ಡಿ.19): ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಒಂದಾದ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಸ್ಪರ್ಧಿ ಬಿಜೆಪಿ ಶ್ರೀರಾಮುಲು ಅವರನ್ನು ಸೋಲಿಸಿದ್ದು ಇದೀಗ ಇತಿಹಾಸ.

ಬಾದಾಮಿ ಗೆಲುವಿನ ಬಳಿಕ ಉತ್ತರ ಕರ್ನಾಟಕ ಅದರಲ್ಲೂ ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೇನಿದ್ದರೂ ಸಿದ್ದಣ ಅವರದ್ಧೇ ಹವಾ ಎಂದು ಹೇಳಲಾಗಿತ್ತು. ಆದರೆ ಸೋತರೂ ಶ್ರೀರಾಮುಲು ತಮ್ಮ ಖದರ್ ಈ ಭಾಗದಲ್ಲಿ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪ್ರಹಸನವೇ ಸಾಕ್ಷಿ.   

ಬಾದಾಮಿಯಲ್ಲಿ ವಾಲ್ಮಿಕಿ ಜಯಂತಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾರಂಭ  ಸ್ಥಳದ ಮುಖ್ಯದ್ವಾರದ ಬದಿಯಲ್ಲಿ  ಶ್ರೀರಾಮುಲು ಅವರ ಪೋಸ್ಟರ್ ರಾರಾಜಿಸುತ್ತಿವೆ

ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗಿಂತ ರಾಮುಲು ಪೋಸ್ಟರ್ ಗಳೇ ರಾರಾಜಿಸುತ್ತಿದ್ದು, ಇದು ಕಾಂಗ್ರೆಸ್ ಪಾಲಿಗೆ ತೀವ್ರ ಮುಜುಗರ ತಂದಿತ್ತಿದೆ.

ಇಂದು ವಾಲ್ಮೀಕಿ ಜಯಂತಿ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಬಾದಾಮಿಗೆ ಆಗಮಿಸುತ್ತಿದ್ದು, ಕಾಯ೯ಕ್ರಮದಲ್ಲಿ ರಾರಾಜಿಸುತ್ತಿರುವ ರಾಮುಲು ಕಟೌಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ತಲೆನೋವು ತಂದಿಟ್ಟಿದೆ.

Latest Videos
Follow Us:
Download App:
  • android
  • ios