'ಲೌಡ್ ಸ್ಪೀಕರ್ ಅಜಾನ್' ವಿರುದ್ಧ 2ನೇ ಹಂತದ ಹೋರಾಟಕ್ಕೆ ಸಿದ್ಧತೆ
* ಕರ್ನಾಟಕದಲ್ಲಿ ಮತ್ತೆ ಜೋರಾಯ್ತು ಲೌಡ್ ಸ್ಪೀಕರ್
* ಲೌಡ್ ಸ್ಪೀಕರ್ ಅಜಾನ್' ವಿರುದ್ಧ 2ನೇ ಹಂತದ ಹೋರಾಟಕ್ಕೆ ಸಿದ್ಧತೆ
* ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ್ ಕರೆ
ಗದಗ, (ಜೂನ್.02): ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಮಾಡದೇ ಲೌಡ್ ಸ್ಪೀಕರ್ ಬಳಸಿ ಅಜಾನ್ ಕೂಗುತ್ತಿರುವುದನ್ನ ವಿರೋಧಿಸಿ ಎರಡನೇ ಹಂತದ ಹೋರಾಟ ನಡೆಸಲಿದೆ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ್ ತಿಳಿಸಿದ್ದಾರೆ.
ಗದಗನಲ್ಲಿ ಇಂದು(ಗುರುವಾರ) ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಖಾನಪ್ಪನವರ್, ಮೇ 9,10 ನೇ ತಾರೀಕು ಹಿಂದೂ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಭಜನೆ ಹಾಕುವ ಮೂಲಕ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಹೋರಾಟಕ್ಕೆ ಸ್ಪಂದಿಸಿದ್ದ ಸರಕಾರ, ಮೈಕ್ ಬಳಸುವ ಸ್ಥಳಗಳಲ್ಲಿ ಸುಪ್ರೀಂ ಕೋರ್ಟ್ ಗೈಡ್ ನೈಲ್ ಪಾಲನೆಯಾಗಬೇಕು ಅಂತಾ ಪ್ರತಿಪಾದಿಸಿತ್ತು.. ಕೆಲ ಮಸೀದಿಗಳಿಗೆ ನೋಟಿಸ್ ನೀಡಿತ್ತು. ಆದ್ರೆ, ಕೆಲ ದಿನಗಳ ನಂತರ ಮತ್ತೇ ಅನೇಕ ಸಮೀದಿಗಳಲ್ಲಿ ಎಂದಿನಂತೆ ಆಜಾನ್ ಮೊಳಗಿಸಲಾಗ್ತಿದೆ.. ಹೀಗಾಗಿ ಎರಡನೇ ಹಂತದ ಹೋರಾಟ ಮಾಡಲು ಶ್ರೀರಾಮಸೇನೆ ನಿರ್ಧಸಿದೆ ಎಂದು ಹೇಳಿದರು.
'ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ'
ಬಿಜೆಪಿ ಶಾಸಕ, ಸಚಿವರ ಮನೆ, ಕಚೇರಿ ಎದುರು ಧರಣಿ..!
ಜೂನ್ 8 ನೇ ತಾರೀಕಿನಿಂದ ಎರಡನೇ ಹಂತದ ಹೋರಾಟ ನಡೆಯಲಿದೆ.. ಹೋರಾಟದ ಅಂಗವಾಗಿ ಬಿಜೆಪಿ ಶಾಸಕ, ಸಚಿವರ ಕಚೇರಿ, ಮನೆ ಎದುರು ಧರಣಿ ಕೂರಲು ನಿರ್ಧರಿಸಲಾಗಿದೆ.. ಗದಗ ನಗರದ ಸಚಿವ ಸಿಸಿ ಪಾಟೀಲರ ಜನ ಸಂಪರ್ಕ ಚಕೇರಿ ಎದ್ರು ಧರಣಿ ಕೂರಲಿದ್ದೇವೆ. ಉಳಿದಂತೆ ಶಿರಹಟ್ಟಿಯ ಶಾಸಕ ರಾಮಣ್ಣ ಲಮಾಣಿ ನಿವಾಸ, ರೋಣ ಶಾಸಕ ಕಳಕಪ್ಪ ಬಂಡಿಯವರ ಗಜೇಂದ್ರಗಡದ ಕಚೇರಿ ಎದುರು ರಾಮಸೇನೆ ಕಾರ್ಯಕರ್ತರು ಧರಣಿ ನಡೆಸಲು ತಯಾರಿ ನಡೆಸಲಾಗಿದೆ ಅಂತಾ ರಾಜು ಖಾನಪ್ಪನವರ್ ಹೇಳಿದ್ರು.. ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ, ಸುಪ್ರೀಂ ಕೋರ್ಟ್ ಆದೇಶ ಪಾನಲೆಯಾಗದಿದ್ದಲ್ಲಿ ಮುಂದಿನ ಹೋರಾಟ ನಡೆಸೋದಾಗಿ ತಿಳಿಸಿದರು.
ಆಜಾನ್ ವಿರುದ್ಧ ಹೋರಾಟದಿಂದಾಗಿ 50 ಪ್ರತಿಶತ ಜಯ ಸಿಕ್ಕಂತಾಗಿದೆ. ಮೈಕ್ ಆಜಾನ್ ವಿರುದ್ಧ ರಾಮಸೇನೆ ಸುಮಾರು 20 ವರ್ಷದ ಸುಧೀರ್ಘ ಹೋರಾಟ ನಡೆಸಲಾಗಿದೆ.. ಇದಕ್ಕೂ ಮುಂಚೆ ಅನೇಕ ಸಂಘಟನೆಗಳು ಹೋರಾಟ ನಡೆಸಿದ್ದವು.. ಬಾಳಾ ಸಾಹೇಬ್ ಠಾಕ್ರೆಯವರೂ ಮೈಕ್ ಆಜಾನ್ ವಿರುದ್ಧ ಧ್ವನಿ ಎತ್ತಿದ್ದರು.. ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ತಕ್ಕಮಟ್ಟಿಗಿನ ಜಯ ಸಿಕ್ಕಂತಾಗಿದೆ.. ಆದರೇ ಬಹುತೇಕ ಕಡೆ ಈಗಲೂ ಬೆಳಂಬೆಳಗ್ಗೆ ಲೌಡ್ ಸ್ಪೀಕರ್ ನಲ್ಲಿ ಆಜಾನ್ ಮೂಳಗಿಸಲಾಗ್ತಿದೆ.. ಹೀಗಾಗಿ ನಿರ್ಣಾಯಕ ಹೋರಾಟ ಕೈಗೊಳ್ಳಲು ಸಂಘಟನೆ ನಿರ್ಧರಿಸಿದೆ.. ಸಚಿವ, ಶಾಸಕ ಕಚೇರಿ ಎದ್ರು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಧರಣಿ ಕೂರುವ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದರು.